Actress Prema: ಕೋರ್ಟ್ ಸೀನ್‌ನಲ್ಲಿ ನಟಿಸುವ ಬಗ್ಗೆ ಭಯ ಇತ್ತು
‘ನಾನು ಇದೇ ಮೊದಲ ಬಾರಿಗೆ ಕೋರ್ಟ್ ಸೀನ್‌ನಲ್ಲಿ ನಟಿಸುತ್ತಿದ್ದೇನೆ. ಹೀಗಾಗಿ ಭಯ, ಗೊಂದಲ ಎಲ್ಲ ಇತ್ತು’ ಎಂದು ನಟಿ ಪ್ರೇಮಾ ಹೇಳಿದ್ದಾರೆ. ತ್ರಿವಿಕ್ರಮ ಪ್ರಭು ನಿರ್ದೇಶನದ ‘ವೆಡ್ಡಿಂಗ್ ಗಿಫ್ಟ್’ (Wedding Gift) ಚಿತ್ರದ ಶೂಟಿಂಗ್ ಸಂಪೂರ್ಣವಾದ ಹಿನ್ನೆಲೆಯಲ್ಲಿ ಸುದ್ದಿಗೋಷ್ಠಿ ಕರೆಯಲಾಗಿತ್ತು.
‘ನಾನು ಇದೇ ಮೊದಲ ಬಾರಿಗೆ ಕೋರ್ಟ್ ಸೀನ್‌ನಲ್ಲಿ ನಟಿಸುತ್ತಿದ್ದೇನೆ. ಹೀಗಾಗಿ ಭಯ, ಗೊಂದಲ ಎಲ್ಲ ಇತ್ತು’ ಎಂದು ನಟಿ ಪ್ರೇಮಾ (Prema) ಹೇಳಿದ್ದಾರೆ. ತ್ರಿವಿಕ್ರಮ ಪ್ರಭು (Vikaram Prabhu) ನಿರ್ದೇಶನದ ‘ವೆಡ್ಡಿಂಗ್ ಗಿಫ್ಟ್’ (Wedding Gift) ಚಿತ್ರದ ಶೂಟಿಂಗ್ ಸಂಪೂರ್ಣವಾದ ಹಿನ್ನೆಲೆಯಲ್ಲಿ ಸುದ್ದಿಗೋಷ್ಠಿ ಕರೆಯಲಾಗಿತ್ತು. ಈ ವೇಳೆ ಮಾತನಾಡಿದ ಪ್ರೇಮಾ, ‘ಈ ಸಿನಿಮಾದ ಕಥೆ ವಿಭಿನ್ನ ಅನಿಸಿತು. ಜೊತೆಗೆ ಒಳ್ಳೆಯ ಮೆಸೇಜ್ ಇದೆ.
ಇದರಲ್ಲಿ ಅಚ್ಯುತ್ ರಾವ್ ಜೊತೆಗೆ ಕೋರ್ಟ್ ಸೀನ್‌ನಲ್ಲಿ ನಟಿಸಿದ್ದೇನೆ. ಮೊದಲ ಸಲ ಇಂಥಾ ಪಾತ್ರ ಮಾಡುತ್ತಿರುವ ಕಾರಣ ದಿಗಿಲಿನಲ್ಲೇ ಶೂಟಿಂಗ್‌ನಲ್ಲಿ ಭಾಗವಹಿಸಿದ್ದೆ. ಯಾರನ್ನೂ ಅನುಕರಿಸದೇ ನಿರ್ದೇಶಕರು ಹೇಳಿದಂತೆ ನನ್ನದೇ ಸ್ಟೈಲ್‌ನಲ್ಲಿ ಅಭಿನಯಿಸಿದ್ದೇನೆ. ಹೇಗೆ ಬಂದಿದೆ ಅಂತ ಪ್ರೇಕ್ಷಕರೇ ಹೇಳಬೇಕು’ ಅಂದರು.
ನಿರ್ದೇಶಕ ತ್ರಿವಿಕ್ರಮ ಪ್ರಭು ಮಾತನಾಡಿ, ‘ಇದು ಸೆಕ್ಷನ್ 498 ಎ ಕಾನೂನಿನ ಬಗೆಗೆ ಮಾಡಿದ ಸಿನಿಮಾ. ಗಂಡ ಅಥವಾ ಅತ್ತೆಯಿಂದ ಹಿಂಸೆಯಾದರೆ ಈ ಕಾನೂನು ಪ್ರಕಾರ ಕಠಿಣ ಶಿಕ್ಷೆ ಆಗುತ್ತೆ. ಆದರೆ ಇದೀಗ ಈ ಕಾನೂನಿನ ದುರ್ಬಳಕೆ ಆಗುತ್ತಿದೆ. ಜೊತೆಗೆ ಹೆಣ್ಣಿನ ರಕ್ಷಣೆಗೆ ಈ ಕಾನೂನು ಇರುವಂತೆ ಗಂಡಿನ ರಕ್ಷಣೆಗೆ ಯಾವ ಕಾನೂನೂ ಇಲ್ಲ. ಈ ವಿಷಯವನ್ನಿಟ್ಟುಕೊಂಡು ಸಿನಿಮಾ ಮಾಡುತ್ತಿರುವೆ. ಶೂಟಿಂಗ್ ಅಂದುಕೊಂಡದ್ದಕ್ಕಿಂತ ಮೊದಲೇ ಮುಗಿದಿದೆ. ಮೇ ಹೊತ್ತಿಗೆ ಚಿತ್ರ ಬಿಡುಗಡೆ ಮಾಡುವ ಯೋಚನೆ ಇದೆ’ ಎಂದರು.
Dance ರಿಯಾಲಿಟಿ ಶೋಗೆ ಜಡ್ಜ್ ಆಗಿ ನಟಿ Meghana Raj ಎಂಟ್ರಿ!
ನಟಿ ಸೋನು ಮಾತನಾಡಿ, ‘ನಾನಿರುವ ರೀತಿಗೂ ಈ ಪಾತ್ರಕ್ಕೂ ಸಣ್ಣ ಸಾಮ್ಯವೂ ಇಲ್ಲ. ಈ ಪಾತ್ರ ಮಾಡದ ಮೇಲೆ ಆತಂಕ, ಭಯ ಕಾಡುತ್ತಿತ್ತು. ಕೊನೆಗೆ ತಂಗಿ ಒತ್ತಾಸೆಯಿಂದ ಈ ಭಯದಿಂದ ಹೊರಬಂದೆ’ ಎಂದರು. ನಾಯಕ ನಿಶಾನ್ ನಾಣಯ್ಯ, ಸಂಗೀತ ನಿರ್ದೇಶಕ ಬಾಲಚಂದ್ರ ಪ್ರಭು, ಛಾಯಾಗ್ರಾಹಕ ಉದಯ ಲೀಲಾ, ಸಂಕಲನಕಾರ ವಿಜೇತ್ ಚಂದ್ರ ಇದ್ದರು.
ನಾನು ಕಳೆದ ಕೆಲವು ವರ್ಷಗಳ ಹಿಂದೆ ರಾಜೇಂದ್ರ ಸಿಂಗ್ ಬಾಬು ಅವರ ಬಳಿ ಕಾರ್ಯ ನಿರ್ವಹಿಸಿದೆ. ಇದು ನನ್ನ ನಿರ್ದೇಶನದ ಮೊದಲ ಚಿತ್ರ. ನಾನೇ ಕಥೆ ಬರೆದಿದ್ದು, ನಿರ್ಮಾಣವನ್ನು ಮಾಡುತ್ತಿದ್ದೇನೆ. ನಮ್ಮ ಚಿತ್ರದ ಶೀರ್ಷಿಕೆ ಕೇಳುತ್ತಿದ್ದ ಹಾಗೆ, ಕೌಟುಂಬಿಕ ಚಿತ್ರ ಅನಿಸಬಹುದು. ಆದರೆ, ಡಾರ್ಕ್ ಶೇಡ್ ಕತೆಯುಳ್ಳ ಈ ಸಿನಿಮಾ ಇಂದಿನ ಸಮಾಜದ ಸ್ಥಿತಿಗೆ ಕನ್ನಡಿ ಹಿಡಿಯುತ್ತದೆ. ಬೆಂಗಳೂರು, ಚಿಕ್ಕಮಗಳೂರು, ಮಂಗಳೂರಿನಲ್ಲಿ ನಲವತ್ತೈದು ದಿನಗಳ ಒಂದೇ ಹಂತದ ಚಿತ್ರೀಕರಣ ನಡೆಯಲಿದೆ ಎಂದು ವಿಕ್ರಂ ಪ್ರಭು ತಿಳಿಸಿದ್ದಾರೆ.
ನಾನು ಈವರೆಗೂ ಮಾಡಿರದ ಪಾತ್ರ ಸಿಗಬೇಕು ಅಂದುಕೊಳ್ಳುತ್ತಿದೆ. ಈ ಚಿತ್ರದಲ್ಲಿ ಸಿಕ್ಕಿದೆ. ಗಂಡ-ಹೆಂಡತಿಯಲ್ಲಿ ಯಾವತ್ತೂ ನನ್ನದು ಎನ್ನುವುದು ಬರಕೂಡದು. ನಮ್ಮದು ಅಂತ ಇರಬೇಕು. ಯಾವಾಗ ನನ್ನದು ಅಂತ ಬರುತ್ತದೆಯೋ, ಆಗ ಅವರಿಬ್ಬರ ನಡುವೆ ಏನಾಗುತ್ತದೆ. ಎಂಬುದೇ ಕಥಾಹಂದರ. ನನಗೆ ಈ ಪಾತ್ರ ತುಂಬಾ ಇಷ್ಟವಾಯಿತು. ಎಲ್ಲರಿಗೂ ಹಿಡಿಸಲಿದೆ ಎಂಬ ನಂಬಿಕೆಯಿದೆ ಎಂದು ಚಿತ್ರದ ನಾಯಕಿ ಸೋನು ಗೌಡ ಹೇಳಿದರು.
Prajwal Devaraj: ಡೈನಾಮಿಕ್ ಪ್ರಿನ್ಸ್ ನಟನೆಯ 'ಗಣ' ಚಿತ್ರಕ್ಕೆ ಮುಹೂರ್ತ
ನಾನು ಪುಣೆ ಫಿಲ್ಮ್ ಇನ್ಸ್ಟಿಟ್ಯೂಟ್‌ನಲ್ಲಿ ಅಭಿನಯ ತರಬೇತಿ ಪಡೆದಿದ್ದೇನೆ. ಮಲೆಯಾಳಂ ಸೇರಿದಂತೆ ವಿವಿಧ ಭಾಷೆಗಳ ಇಪ್ಪತ್ತೈದಕ್ಕೂ ಹೆಚ್ಚು ಚಿತ್ರಗಳಲ್ಲಿ ಅಭಿನಯಿಸಿದ್ದೇನೆ. ಕನ್ನಡದಲ್ಲಿ ಮೊದಲ ಚಿತ್ರ. ಕಥೆ ತುಂಬಾ ಇಷ್ಟವಾಯಿತು. ವಿಲಾಸ್ ಎಂಬ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದೇನೆ ಎಂದು ಚಿತ್ರದ ನಾಯಕ ನಿಶಾಂತ್ ತಿಳಿಸಿದರು. ಸಿನಿಮಾದಲ್ಲಿ ಮೂರು ಹಾಡುಗಳಿದ್ದು, ಬಾಲಚಂದ್ರ ಪ್ರಭು ಸಂಗೀತ ಸಂಯೋಜಿಸಲಿದ್ದಾರೆ. ಖ್ಯಾತ ಸಾಹಿತಿ ಜಯಂತ ಕಾಯ್ಕಿಣಿ ಅವರ ಗೀತರಚನೆ ಹಾಗೂ ಉದಯಲೀಲಾ ಅವರ ಕ್ಯಾಮೆರಾ ಕೈಚಳಕ ಸೇರಿದಂತೆ ವಿಜೇತ್ ಚಂದ್ರ ಸಂಕಲನ 'ವೆಡ್ಡಿಂಗ್ ಗಿಫ್ಟ್' ಚಿತ್ರಕ್ಕಿದೆ.