ಬಹುಭಾಷಾ ನಟಿ ಪ್ರಣೀತ ಸುಭಾಷ್ ಅವರು ಸಂತಸದ ವಿಷಯವನ್ನು ಹಂಚಿಕೊಂಡಿದ್ದಾರೆ. ಇತ್ತೀಚೆಗೆ ಪ್ರೆಗ್ನೆಂಟ್ ಆಗಿರುವ ವಿಚಾರವನ್ನು ಹೇಳಿಕೊಂಡಿದ್ದ ಪ್ರಣೀತ ಇದೀಗ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ.
ಬಹುಭಾಷಾ ನಟಿ ಪ್ರಣೀತ ಸುಭಾಷ್ (Pranitha Subhash) ಅವರು ಸಂತಸದ ವಿಷಯವನ್ನು ಹಂಚಿಕೊಂಡಿದ್ದಾರೆ. ಹಲವು ವರ್ಷಗಳಿಂದ ಚಿತ್ರರಂಗದಲ್ಲಿ ಸಕ್ರಿಯರಾಗಿರುವ ಅವರು ಇತ್ತೀಚೆಗೆ ಪ್ರೆಗ್ನೆಂಟ್ (Pregnant) ಆಗಿರುವ ವಿಚಾರ ಹೇಳಿಕೊಂಡಿದ್ದರು. ಇದೀಗ ಅವರ ಮನೆಗೆ ಹೆಣ್ಣು ಮಗುವಿನ (Baby Girl) ಆಗಮನವಾಗಿದ್ದು, ಈ ವಿಚಾರವನ್ನು ಪ್ರಣಿತಾ ಅವರು ಸಾಮಾಜಿಕ ಜಾಲತಾಣದಲ್ಲಿ (Social Media) ಹಂಚಿಕೊಂಡಿದ್ದಾರೆ. ಮಾತ್ರವಲ್ಲದೇ ಮಗುವಿನ ಜತೆ ಇರುವ ಮುದ್ದಾದ ಫೋಟೋಗಳನ್ನು (Photos) ಅವರು ಶೇರ್ ಮಾಡಿಕೊಂಡಿದ್ದು, ತಾಯಿ-ಮಗಳು ಇಬ್ಬರೂ ಆರೋಗ್ಯವಾಗಿದ್ದಾರೆ.
ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ 'ನನ್ನ ತಾಯಿ ಸ್ತ್ರೀರೋಗ ತಜ್ಞೆ. ಹೀಗಾಗಿ, ಈ ವಿಚಾರದಲ್ಲಿ ನಾನು ಬಹಳ ಅದೃಷ್ಟವಂತೆ. ಹಾಗಾಗಿ ನನ್ನ ಡೆಲಿವರಿ ಯಾವುದೇ ಒತ್ತಡವಿಲ್ಲದೆ ಸರಾಗವಾಗಿ ಆಯಿತು. ಆದರೆ ನನ್ನ ತಾಯಿ ಪಾಲಿಗೆ ಇದು ಬಹಳ ಕಠಿಣ ಹಾಗೂ ಭಾವನಾತ್ಮಕ ಕ್ಷಣವಾಗಿತ್ತು. ನನ್ನ ಈ ಕಠಿಣ ಸಮಯದಲ್ಲಿ ಬೆಂಬಲ ನೀಡಿದ ಪ್ರತಿಯೊಬ್ಬ ವೈದ್ಯರಿಗೂ ಧನ್ಯವಾದಗಳು' ಎಂದು ಪ್ರಣಿತಾ ಬರೆದುಕೊಂಡಿದ್ದಾರೆ. ವಿಶೇಷವಾಗಿ ಪ್ರಣೀತಾ ಹಂಚಿಕೊಂಡಿರುವ ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.
ಸೀಮಂತದಲ್ಲಿ ನಾನು ಹೆಚ್ಚಿಗೆ ಚಾಕೊಲೇಟ್ ತಿಂದಿರುವೆ: ತಾಯಿತನದ ಬಗ್ಗೆ ಪ್ರಣೀತಾ ಮಾತು
ಕಳೆದ ವರ್ಷ ಮದುವೆಯಾಗಿದ್ದ ಪ್ರಣೀತಾ ಸುಭಾಷ್: ನಟಿ ಪ್ರಣೀತಾ ಸುಭಾಷ್ ಹಾಗೂ ಉದ್ಯಮಿ ನಿತಿನ್ ರಾಜು ಅವರ ವಿವಾಹ ಮಹೋತ್ಸವ ಕಳೆದ ವರ್ಷದ ಮೇ ತಿಂಗಳಿನಲ್ಲಿ ಲಾಕ್‌ಡೌನ್ ಸಮುದಲ್ಲಿ ನಡೆದಿತ್ತು. ಬೆಂಗಳೂರಿನ ಹೊರವಲಯದಲ್ಲಿ ನಟಿ ಪ್ರಣೀತಾ ಸುಭಾಷ್ ಹಾಗೂ ನಿತಿನ್ ರಾಜು ಅವರ ಮದುವೆ ನೆರವೇರಿತ್ತು. ಪ್ರಣೀತಾ ಸುಭಾಷ್ ಹಾಗೂ ನಿತಿನ್ ರಾಜು ಅವರದ್ದು ಲವ್ ಕಮ್ ಅರೇಂಜ್ಡ್ ಮ್ಯಾರೇಜ್. ದೀರ್ಘಕಾಲದ ಗೆಳೆಯರಾಗಿದ್ದ ಪ್ರಣೀತಾ ಸುಭಾಷ್ ಮತ್ತು ನಿತಿನ್ ರಾಜು ಮಧ್ಯೆ ಪ್ರೀತಿ ಚಿಗುರಿತ್ತು.
ಪತಿಯ ಜೊತೆ ರೊಮ್ಯಾಂಟಿಕ್‌ಗಾಗಿ ಕಾಣಿಸಿಕೊಂಡ ಪ್ರಣಿತಾ; ಬೇಬಿ ಬಂಪ್ ಫೋಟೋ ವೈರಲ್
ಕುಟುಂಬಸ್ಥರ ಸಮ್ಮತಿ ಪಡೆದು ಪ್ರಣೀತಾ ಸುಭಾಷ್ ಹಾಗೂ ನಿತಿನ್ ರಾಜು ವಿವಾಹವಾಗಿದ್ದರು. ಕಳೆದ ತಿಂಗಳು ತಮ್ಮ ಸೀಮಂತ ಸಮಾರಂಭದ ಫೋಟೋಗಳನ್ನು ನಟಿ ಪ್ರಣೀತಾ ಸುಭಾಷ್ ಹಂಚಿಕೊಂಡಿದ್ದರು. ಹಾಗೇ, ಪ್ರೆಗ್ನೆನ್ಸಿ ಫೋಟೋಶೂಟ್ ಮಾಡಿಸಿಕೊಂಡಿದ್ದ ಪ್ರಣೀತಾ ಸುಭಾಷ್ ತಮ್ಮ ಬೇಬಿ ಬಂಪ್ ಫೋಟೋಗಳನ್ನೂ ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಂಡಿದ್ದರು. ಇದೀಗ ಮುದ್ದು ಕಂದನ ಆಗಮನದಿಂದ ಪ್ರಣೀತಾ ಸುಭಾಷ್ ತಾಯ್ತನದ ಸಂಭ್ರಮದಲ್ಲಿದ್ದಾರೆ. ಇನ್ನು ಪ್ರಿಯದರ್ಶನ್ ನಿರ್ದೇಶನದ 'ಹಂಗಾಮಾ–2' ಹಿಂದಿ ಚಿತ್ರದಲ್ಲಿ ಪ್ರಣೀತ ಕೊನೆಯದಾಗಿ ಕಾಣಿಸಿಕೊಂಡಿದ್ದರು.
