ರೇಣುಕಾ ಯೋಗರಾಜ್‌ ಭಟ್‌ ಟ್ರೇಲರ್‌ ಲಾಂಚ್‌ ಮಾಡಿ ಮಾತನಾಡಿದರು. ‘ರುದ್ರಿ ಅಂದ್ರೆ ನೆನಪಾಗೋದು ಕೋಪ. ಆಕೆಗೆ ಆದ ಅನ್ಯಾಯದ ವಿರುದ್ಧ ಅವಳು ಹೋರಾಡುವ ರೀತಿ ನಿಜಕ್ಕೂ ಮನಕಲಕುತ್ತದೆ’ ಎಂದರಲ್ಲದೆ, ಇಂತಹ ಚಿತ್ರಕ್ಕೆ ಜನ ಬೆಂಬಲ ಬೇಕು ಎಂದು ಮನವಿ ಮಾಡಿಕೊಂಡರು.

ಶ್ರೀಮನ್ನಾರಾಯಣನ ಹತ್ತು ಅವತಾರಗಳು;ರಕ್ಷಿತ್‌ ಶೆಟ್ಟಿ ಸಂದರ್ಶನ!

ಮಿಷನ್‌ ಮಂಗಲ್‌ ಚಿತ್ರದ ಖ್ಯಾತಿಯ ನಿರ್ದೇಶಕ ಜಗನ್‌ ಶಕ್ತಿ ಅತಿಥಿ ಆಗಿ ಬಂದಿದ್ದರು. ಚಿತ್ರದ ಟ್ರೇಲರ್‌ ವೀಕ್ಷಣೆ ನಂತರ, ‘ಈ ಸಿನಿಮಾ, ಯಾವುದೇ ಭಾಷೆಯ ಚೌಕಟ್ಟಿಗೆ ಒಳಪಟ್ಟಿಲ್ಲ. ದೇಶದ ಎಲ್ಲಾ ಭಾಷೆಗಳಲ್ಲಿಯೂ ಈ ಸಿನಿಮಾ ಬಿಡುಗಡೆಯಾಗಬೇಕೆಂಬುದು ನನ್ನ ಆಸೆ. ತುಂಬಾ ಪರಿಣಾಮಕಾರಿಯಾಗಿ ಚಿತ್ರ ಮೂಡಿಬಂದಿರುವುದು ಟ್ರೇಲರ್‌ ನೋಡಿದರೆ ಮನವರಿಕೆಯಾಗುತ್ತದೆ’ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದು ಚಿತ್ರತಂಡಕ್ಕೆ ಆನೆಬಲ ಸಿಕ್ಕಂತಾಯಿತು.

ಲಹರಿ ಸಂಸ್ಥೆ ಮಾಲೀಕ ಲಹರಿ ವೇಲು, ವಾರ್ತಾ ಇಲಾಖೆ ಆಯುಕ್ತ ಸಿದ್ದರಾಮಪ್ಪ ಹಾಜರಿದ್ದರು. ಚಿತ್ರದ ನಿರ್ದೇಶಕ ದೇವೇಂದ್ರ ಬಡಿಗೇರ್‌ ಚಿತ್ರಕತೆಯ ವಿಶೇಷತೆ ಹೇಳಿಕೊಂಡರು. ‘ಹೆಣ್ಣುಮಕ್ಕಳ ಮೇಲೆ ದೌರ್ಜನ್ಯ ನಡೆದಾಗ ಅವರು ಅದನ್ನು ಅದುಮಿಟ್ಟುಕೊಳ್ಳುವುದೇ ಹೆಚ್ಚು. ಈ ರೀತಿಯ ನೈಜ ಘಟನೆಗಳು ಈ ಸಿನಿಮಾಕ್ಕೆ ಸ್ಫೂರ್ತಿ’ ಎಂದರು.

‘ವ್ಯವಹಾರಿಕ ದೃಷ್ಟಿಯಿಂದ ಈ ಸಿನಿಮಾ ಮಾಡಿಲ್ಲ. ಚಿತ್ರರಂಗಕ್ಕೆ ಹೊಸ ಕಥೆಯ ಜತೆಗೆ ಹೊಸ ಮೇಕರ್ಸ್‌ ಕೊಡುವ ಉದ್ದೇಶ ಇತ್ತು’ ಎನ್ನುವ ಮಾತು ನಿರ್ಮಾಪಕ ಮಂಜುನಾಥ್‌ ಅವರದ್ದು. ನಿರ್ದೇಶಕ ಪವನ್‌ ಒಡೆಯರ್‌, ನಟ ಕಿಶೋರ್‌, ನಿರೂಪಕ ಅಕುಲ… ಬಾಲಾಜಿ, ನಿರ್ಮಾಪಕರಾದ ಶ್ರೀನಿವಾಸ್‌, ಸಿ.ಆರ್‌. ಮನೋಹರ್‌, ಆನಂದ್‌ ಆಡಿಯೋ ಮುಖ್ಯಸ್ಥ ಶ್ಯಾಮ್‌ ಟ್ರೇಲರ್‌ ಲಾಂಚ್‌ ಕಾರ್ಯಕ್ರಮಕ್ಕೆ ಸಾಕ್ಷಿಯಾದರು.

ಕ್ರಿಸ್‌ಮಸ್‌ ಸೆಲಬ್ರೇಶನ್‌ನಲ್ಲಿ ಐರಾ; ಇಲ್ಲಿವೆ ಸಂಭ್ರಮದ ಫೋಟೋಗಳಿವು!

ಭಾವುಕರಾದ ಪಾವನಾ

‘ರುದ್ರಿ ಸಿನಿಮಾ, ನನ್ನ ಜೀವನದ ಭಾವನಾತ್ಮಕ ಪಯಣ. ಈ ಸಿನಿಮಾದಲ್ಲಿ ದೌರ್ಜನ್ಯದ ಘಟನೆಯೊಂದನ್ನು ಚಿತ್ರೀಕರಿಸಬೇಕಾಗುತ್ತದೆ. ಕಥೆ ಕೂಡ ಅದನ್ನು ಬೇಡುತ್ತದೆ. ಆದರೆ ನನಗೆ ಆ ದೃಶ್ಯವನ್ನು ಚಿತ್ರೀಕರಿಸಲು ಸಾಧ್ಯವೇ ಆಗಲಿಲ್ಲ. ಆ ಸ್ಥಳದಿಂದ ಹೊರಗೆಬಂದುಬಿಟ್ಟೆ. ಆಗದಿದ್ದರೆ ಬೇಡ ಎಂದು ನಿರ್ದೇಶಕರು ಕೂಡ ಹೇಳಿದರು. ಆದರೆ ಸಿನಿಮಾ ದೃಷ್ಟಿಯಿಂದ ಮಾಡಿದೆ. ಅಪರಿಚಿತ ವ್ಯಕ್ತಿಯೊಬ್ಬರು ನಮ್ಮನ್ನು ಮುಟ್ಟುತ್ತಾರೆ ಅಂದಾಗ ಮನಸ್ಸಿಗೆ ಆಗುವ ಹಿಂಸೆ ಹೇಳಿಕೊಳ್ಳಲು ಸಾಧ್ಯವಿಲ್ಲ. ಇಂತಹದೊಂದು ದೃಶ್ಯ ಚಿತ್ರೀಕರಿಸಲು ನಾವು 30 ದಿನ ತೆಗೆದುಕೊಂಡಿದ್ದೇವೆ’ ಎಂದು ಭಾವುಕರಾದರು ಪಾವನಾ.

ಮತ್ತೆ ಬ್ಯಾಕ್‌ ಟು ಪೆವಿಲಿಯನ್‌ಗೆ 'ಪುಟ್ಟಗೌರಿ'; ಕನ್ನಡತಿಯಾಗಿದ್ದಾರೆ ರಂಜನಿ ರಾಘವನ್!