Asianet Suvarna News Asianet Suvarna News

ನಟಿ Nishvika Naiduಗೆ ಕೊರೋನಾ ಪಾಸಿಟಿವ್!

ವೈದ್ಯರ ಸಲಹೆ ಪಡೆದುಕೊಂಡು ಐಸೋಲೇಟ್ ಆದ ಸಖತ್ ಚಿತ್ರದ ನಟಿ ನಿಶ್ವಿಕಾ. ನನ್ನ ಸಂಪರ್ಕದಲ್ಲಿರುವವರು ಟೆಸ್ಟ್‌ ಮಾಡಿಸಿಕೊಳ್ಳಿ ಎಂದು ಪೋಸ್ಟ್‌...
 

Kannada actress Nishvika Naidu test positive for Covid19  vcs
Author
Bangalore, First Published Jan 8, 2022, 4:40 PM IST

ಇದೇನಪ್ಪಾ! ಎಲ್ಲವೂ ಸರಿ ಹೋಯ್ತು ಅಂದುಕೊಳ್ಳುತ್ತಿರುವ ಸಮಯದಲ್ಲಿ ಮೂರನೇ ಅಲೆ ಬಂದು ವಕ್ಕರಿಸಿಕೊಂಡಿದೆ. ನೈಟ್‌ ಕರ್ಫ್ಯೂ (Night Cerfew) ಜೊತೆಗೆ ವೀಕೆಂಡ್ ಲಾಕ್‌ಡೌನ್‌ (Weekend Lockdown) ಎದುರಿಸುತ್ತಿರುವ ಜನರಿಗೆ ಇದೀಗ ಕೊರೋನಾ ರೂಪಾಂತರದ ಭಯ ಶುರುವಾಗಿದೆ. ರೂಪಾಂತರಗೊಂಡು ಯಾವೆಲ್ಲಾ ರೀತಿ ಮನುಷ್ಯರ ಮೇಲೆ ಆರ್ಭಟ ಮರೆಯುತ್ತಿದೆ ಎಂದು ಬೇಸರವಾಗುತ್ತಿದೆ. ಬಹುತೇಕರು ಎರಡು ಡೋಸ್‌ ವ್ಯಾಕ್ಸಿನ್‌ (2nd dose vaccine) ಪಡೆದುಕೊಂಡಿದ್ದಾರೆ ಆದರೂ ಸೋಂಕು ತಗುಲಿದರೆ ತೀವ್ರತೆ ಕಡಿಮೆ ಇರುತ್ತದೆ ಎಂದು ವೈದ್ಯರು ಹೇಳಿದ್ದಾರೆ. 

ಹೊಸ ವರ್ಷ ಎಲ್ಲವೂ ಹೊಸದಾಗಿರಲಿ, ನಾವು ಆರೋಗ್ಯ (health) ಜೀವನ ಮತ್ತು ಕೆಲಸದ ಬಗ್ಗೆ ಗಮನ ನೀಡಬಹುದು ಎಂದೆಲ್ಲಾ ಪ್ಲ್ಯಾನಿಂಗ್ ಮಾಡುತ್ತಿದ್ದವರಿಗೆ ದೊಡ್ಡ ಶಾಕ್ ತಗುಲಿದೆ. ಬಾಲಿವುಡ್‌ನಲ್ಲಿ (Bollywood) ಬಹುತೇಕರಿಗೆ ಕೊರೋನಾ ಸೋಂಕು ತಗುಲಿದೆ ಆದರೆ ಈಗೀಗ ಸ್ಯಾಂಡಲ್‌ವುಡ್‌ನ (Sandalwood) ಕೆಲವೊಬ್ಬರಿಗೆ ಸೋಂಕು ಕಾಣಿಸಿಕೊಳ್ಳುತ್ತಿದೆ. ಹೌದು! ನಟಿ ನಿಶ್ವಿಕಾ ನಾಯ್ಡುಗೆ ಕೊರೋನಾ ಪಾಸಿಟಿವ್ ಆಗಿದೆ. 

Kannada actress Nishvika Naidu test positive for Covid19  vcs

ಇನ್‌ಸ್ಟಾಗ್ರಾಂನಲ್ಲಿ (Instagram) ಆಕ್ಟೀವ್ ಆಗಿರುವ ನಿಶ್ವಿಕಾ ನಾಯ್ಡು (Nishvika Naidu) ಸ್ಟೋರಿಯಲ್ಲಿ ಒಂದು ಪೋಸ್ಟ್‌ ಹಾಕಿದ್ದಾರೆ. 'ಹಾಯ್ ನನಗೆ ಕೊರೋನಾ ಪಾಸಿಟಿವ್ (Covid19 positive) ಆಗಿದೆ. ಮೈಲ್ಡ್‌ ಲಕ್ಷಣಗಳು ಕಾಣಿಸಿಕೊಂಡಿದೆ. ನಾನು ಈಗ ಐಸೋಲೇಟ್ (Isolate) ಆಗಿದ್ದೀನಿ, ವೈದ್ಯರು ನೀಡುವ ಸೂಚನೆಯನ್ನು ಪಾಲಿಸುತ್ತಿರುವೆ. ಯಾರೆಲ್ಲಾ ನನ್ನ ಸಂಪರ್ಕಕ್ಕೆ ಬಂದಿದ್ದಾರೆ ಅವರು ದಯವಿಟ್ಟು ಟೆಸ್ಟ್ ಮಾಡಿಸಿಕೊಳ್ಳಿ' ಎಂದು ಬರೆದುಕೊಂಡಿದ್ದಾರೆ. 

ನಟಿ ನಿಶ್ವಿಕಾ ನಾಯ್ಡು ದೊಡ್ಡ ಬ್ಯಾಗ್‌ನಲ್ಲಿ ಏನೆಲ್ಲಾ ಇದೆ ನೋಡಿ!

2018ರಲ್ಲಿ ಅಮ್ಮ ಐ ಲವ್ ಯು (Amma I Love You) ಚಿತ್ರದ ಮೂಲಕ ಕನ್ನಡ ಚಿತ್ರಂಗಕ್ಕೆ (Sandalwood) ಪಾದಾರ್ಪಣೆ ಮಾಡಿದ ನಿಶ್ವಿಕಾ 10 ಸಿನಿಮಾದಲ್ಲಿ ನಟಿಸಿದ್ದಾರೆ. ನಿಶ್ವಿಕಾ ಈವರೆಗೂ ನಟಿಸಿರುವ ಪ್ರತಿಯೊಂದು ಸಿನಿಮಾನೂ ಸೂಪರ್ ಹಿಟ್ ಆಗಿದೆ. ಗುರು ಶಿಷ್ಯರು (Guru Shishyaru), ಗಾಳಿಪಟ 2 (Galipata 2) ಮತ್ತು ದಿಲ್ ಪಸಂದ್ (Dil Pasand) ಸಿನಿಮಾ ಚಿತ್ರೀಕರಣ ನಡೆಯುತ್ತಿದ್ದು ಬಿಡುಗಡೆ ಸಿದ್ಧವಾಗಿದೆ. ಎಲ್ಲಾ ಅವಾರ್ಡ್ ನಾಮಿನೇಶನ್‌ಗಳಲ್ಲಿ ನಿಶ್ವಿಕಾ ಅವರ ಹೆಸರಿದೆ.  ಕೆಲವು ತಿಂಗಳುಗಳ ಹಿಂದೆ ನಿಶ್ವಿಕಾ ಅವರು ಯುಟ್ಯೂಬ್ ಚಾನೆಲ್ (Youtube channel) ಆರಂಭಿಸಿದ್ದಾರೆ. ಶೂಟಿಂಗ್, ದಿನಚರಿ, ಸ್ಕಿನ್ ಕೇರ್ (Skin care), ಹೇರ್ ಕೇರ್‌ (Hair Care) ಬಗ್ಗೆ ಅಪ್ಲೋಡ್ ಮಾಡಿದ್ದಾರೆ. 

ಯೋಗದಲ್ಲಿ ಅಣ್ಣಾವ್ರ ಸ್ಟೈಲ್ ಫಾಲೋ ಮಾಡ್ತಿದ್ದಾರೆ ಸ್ಯಾಂಡಲ್‌ವುಡ್‌ ನಟಿ

ಕೆಲವು ತಿಂಗಳುಗಳ ಹಿಂದೆ ನಟ ಅರ್ಜುನ್ ಸರ್ಜಾ (Arjun Sarja) ಅವರಿಗೂ ಕೂಡ ಕೊರೋನಾ ಪಾಸಿಟಿವ್ ಎಂದು ತಿಳಿದು ಬಂದಿತ್ತು. ಮನೆಯಲ್ಲಿ ಐಸೋಲೇಟ್ ಆಗಿದ್ದಆಕ್ಷನ್‌ ಪ್ರಿನ್ಸ್‌ ಚೇತರಿಸಿಕೊಂಡು ಮನೆಗೆ ಹಿಂತಿರುಗಿದ್ದಾರೆ. ಮನೆಯ terrace ಪೂರ್ತಿ ಡೆಕೋರೆಟ್ ಮಾಡಿ ಅದ್ಧೂರಿಯಾಗಿ ಬರ ಮಾಡಿಕೊಂಡಿದ್ದರು.  ಕೆಲವು ಮೂಲಗಳಿಂದ ತಿಳಿದು ಬಂದ ಮಾಹಿತಿ ಪ್ರಕಾರ ಜೈ ಜಗದೀಶ್ ಹಿರಿಯ ಪುತ್ರಿ ವೈಭವಿ (Vaibhavi Jai Jagadish) ಅವರಿಗೂ ಕೊರೋನಾ ತಗುಲಿದೆ, ಐಸೋಲೇಟ್ ಆಗಿದ್ದಾರೆ ಎನ್ನಲಾಗಿದೆ.

Follow Us:
Download App:
  • android
  • ios