ತಮಿಳು ಧಾರಾವಾಹಿ ಲೋಕಕ್ಕೆ ಕಾಲಿಟ್ಟ 'ಇವಳು ಸುಜಾತ' ನಟಿ ಮೇಘಶ್ರೀ.
'ನಾಗಕನ್ನಿಕೆ' ಧಾರಾವಾಹಿ ಮೂಲಕ ಕನ್ನಡ ಕಿರುತೆರೆಗೆ ಪಾದಾರ್ಪಣೆ ಮಾಡಿದ ಮೇಘಶ್ರೀ 'ಇವಳು ಸುಜಾತ' ಧಾರಾವಾಹಿ ಮೂಲಕ ವೀಕ್ಷಕರ ಮನ ಗೆದ್ದಿದ್ದರು. ಧಾರಾವಾಹಿ ಹಾಗೂ ಕನ್ನಡ ಚಿತ್ರರಂಗದಲ್ಲಿ ತೊಡಗಿಸಿಕೊಂಡಿರುವ ಮೇಘಶ್ರೀ ಇದೀಗ ತಮಿಳು ಧಾರಾವಾಹಿ ಲೋಕಕ್ಕೆ ಎಂಟ್ರಿ ಕೊಟ್ಟಿದ್ದಾರೆ.
ತಮಿಳಿನಲ್ಲಿ ಚಿತ್ರೀಕರಣವಾಗುತ್ತಿರುವ 'ಜ್ಯೋತಿ' ಧಾರಾವಾಹಿಯಲ್ಲಿ ಮೇಘಶ್ರೀ ನಟಿಸುತ್ತಿದ್ದಾರೆ. ಈ ಧಾರಾವಾಹಿ ಕನ್ನಡ, ತೆಲುಗು, ಮಲೆಯಾಳಂ ಮತ್ತು ಬೆಂಗಾಲಿ ಭಾಷೆಗೆ ಡಬ್ ಮಾಡಲಾಗುತ್ತದೆ. ರಾಣಿಯಾಗಿ ಮತ್ತು ನಾಗಕನ್ನಿಕೆ ಪಾತ್ರದಲ್ಲಿ ಮೇಘ ಕಾಣಿಸಿಕೊಳ್ಳಲಿದ್ದಾರೆ. ಪಾತ್ರ ಮತ್ತು ತಂಡ ಮೆಚ್ಚಿಕೊಂಡ ಮೇಘಶ್ರೀ ಧಾರಾವಾಹಿಗಾಗಿ ಕತ್ತಿ ಫೈಟ್ ನಂತಹ ಸ್ಟಂಟ್‌ಗಳನ್ನು ಮಾಡಿದ್ದಾರೆ.
ನನ್ನನ್ನು ಹಿಂಬಾಲಿಸಬೇಡಿ, ನಾನು ಕಳದೋಗಿರುವೆ; ಕಿರುತೆರೆ ನಟಿ ಮೇಘಶ್ರೀ ಮನದಾಳದ ಮಾತು!
'ವಾರ್ಡ್ ನಂಬರ್ 11' ಮತ್ತು 'ಮನಸ್ಸಾಗಿದೆ' ಕನ್ನಡ ಸಿನಿಮಾ ಚಿತ್ರೀಕರಣದಲ್ಲಿ ಬ್ಯೂಸಿಯಾಗಿರುವ ಮೇಘ 'ಓಲ್ಡ್‌ಮಾಂಕ್' ಚಿತ್ರದಲ್ಲಿ ಅತಿಥಿ ಪಾತ್ರ ಮಾಡಿದ್ದಾರೆ. ಇದರ ಜೊತೆಗೆ ಹೆಸರಿಡದ ಭೋಜ್‌ಪುರಿ ಚಿತ್ರಕ್ಕೆ ಸಹಿ ಮಾಡಿದ್ದಾರೆ. ಈ ಮೂಲಕ ಭೋಜ್‌ಪುರಿ ಸಿನಿ ಇಂಡಸ್ಟ್ರಿಗೂ ಎಂಟ್ರಿ ಕೊಡುತ್ತಿದ್ದಾರೆ. ಒಂದೇ ಸಮಯಕ್ಕೆ ತಮಿಳು ಹಾಗೂ ಭೋಜಪುರಿ ಚಿತ್ರರಂಗಕ್ಕೆ ಕಾಲಿಡುತ್ತಿರುವ ಮೇಘಶ್ರೀ ಅವರಿಗೆ ಯಶಸ್ಸು ಸಿಗಲಿ ಎಂದು ಹಾರೈಸೋಣ.
