ಕಿರುತೆರೆ ಸುಂದರಿ, ಚಂದನವನದ ಅದ್ಭುತ ಕಲಾವಿದೆ ಮೇಘಶ್ರೀ ಪ್ರೇಮಿಗಳ ದಿನದಂದು ಹಾರ್ಟ್‌ವೊಳಗೆ ನಿಂತಿರುವ ಫೋಟೋ ಶೇರ್ ಮಾಡಿಕೊಂಡಿದ್ದಾರೆ. ಹಾರ್ಟ್‌ ಫೋಟೋ ಓಕೆ ಆದರೆ ಅದಕ್ಕೆ ಯಾಕಿಂಗ್ ಕ್ಯಾಪ್ಶನ್ ಬರೆದಿದ್ದಾರೆ ಅಂತ ಮಾತ್ರ ಗೊತ್ತಿಲ್ಲ. ಅಭಿಮಾನಿಗಳ ಪ್ರಶ್ನೆಗೆ ಮೇಘನೇ ಉತ್ತರ ನೀಡಬೇಕು....

ಮಗಳು ನಟಿ ಮೇಘ ಶ್ರೀ ಬಗ್ಗೆ ಮಾತೆಯ ಮಾತುಗಳು! 

ಹಾರ್ಟ್‌ ಶೇಪ್‌ ಇರೋ ಪ್ರಾಪರ್ಟಿ  ಜೊತೆ ನಿಂತ ಮೇಘ 'Dont follow me..am already lost' ಎಂದು ಬರೆದುಕೊಂಡಿದ್ದಾರೆ. ರೆಡ್ ಹಾರ್ಟ್‌ ಜೊತೆ ರೆಡ್‌ ಔಟ್‌ಫಿಟ್‌ನಲ್ಲಿ ಕಾಣಿಸಿಕೊಂಡಿರುವ ಮೇಘಗೆ ಲವ್ ಆಗಿದೆ ಎಂದುಕೊಂಡ ನೆಟ್ಟಿಗರು ಕ್ಯಾಪ್ಶನ್ ನೋಡಿ ಶಾಕ್ ಆಗಿದ್ದಾರೆ. 'ಮೇಡಂ ದಿನಾ ನಿಮ್ಮ ಫೋಸ್ಟ್‌ ನೋಡಿಲ್ಲ ಅಂದ್ರೆ ದಿನವೇ ಶುರುವಾಗಲ್ಲ ಈಗ ಫಾಲೋ ಮಾಡಬೇಡಿ ಎನ್ನುತ್ತಿದ್ದೀರಾ?' ಎಂದು  ನೆಟ್ಟಿಗರು ಪ್ರಶ್ನೆ ಮಾಡಿದ್ದಾರೆ.

ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಆಕ್ಟಿವ್ ಇರುವ ಮೇಘಶ್ರೀ ಸಿನಿಮಾ, ಫೋಟೋಶೂಟ್‌ ಬಗ್ಗೆ ಮಾಹಿತಿ ಶೇರ್ ಮಾಡಿಕೊಳ್ಳುತ್ತಲೇ ಇರುತ್ತಾರೆ. ಲೋಕೇಶ್ ಪ್ರೊಡಕ್ಷನ್‌ನಲ್ಲಿ ಮೂಡಿ ಬಂದ ಇವರು ಸುಜಾತಾ ನಂತರ ಯಾವ ಧಾರಾವಾಹಿಯಲ್ಲೂ ಕಾಣಿಸಿಕೊಳ್ಳುತ್ತಿಲ್ಲ. ಮೇಘರನ್ನು ಮತ್ತೆ ಬಣ್ಣದ ಲೋಕದಲ್ಲಿ ಕಾಣಬೇಕು ಎಂದು ಅಭಿಮಾನಿಗಳು ಆಶಿಸುತ್ತಿದ್ದಾರೆ.

ಮಗಳು ನಟಿ ಮೇಘ ಶ್ರೀ ಬಗ್ಗೆ ಮಾತೆಯ ಮಾತುಗಳು!