ಅಭಿಮಾನಿಗಳ ಒತ್ತಾಯದ ಮೇಲೆ ಯೂಟ್ಯೂಬ್ ಚಾನೆಲ್ ಆರಂಭಿಸಿದ ಮೇಘನಾ ರಾಜ್; ಮೊದಲ ವಿಡಿಯೋವಿದು
ಫ್ಯಾನ್ಸ್ ಪದೇ ಪದೇ ಕೇಳುತ್ತಿದ್ದ ಪ್ರಶ್ನೆಗೆ ಉತ್ತರ ಕೊಟ್ಟ ಮೇಘನಾ ರಾಜ್. ಕ್ರಿಸ್ಮಸ್ ಹಬ್ಬ ಮತ್ತಷ್ಟು ಗ್ರ್ಯಾಂಡ್....
ಕನ್ನಡ ಚಿತ್ರರಂಗದ ಮುದ್ದು ಮುಖದ ಚೆಲುವೆ ಮೇಘನಾ ರಾಜ್ ಕ್ರಿಸ್ಮಸ್ ಹಬ್ಬವನ್ನು ಪ್ರತಿ ವರ್ಷವೂ ಅದ್ಧೂರಿಯಾಗಿ ಆಚರಿಸುತ್ತಾರೆ. ಕಳೆದ ಒಂದೆರಡು ವರ್ಷಗಳಿಂದ ಪುತ್ರ ರಾಯನ್ ರಾಜ್ ಸರ್ಜಾ ಜೊತೆ ಮತ್ತಷ್ಟು ಗ್ರ್ಯಾಂಡ್ ಆಗಿದೆ. ಈ ವರ್ಷ ಯಾವ ವಿಶೇಷ ಅನೌನ್ಸ್‌ಮೆಂಟ್ ಮಾಡಲಿದ್ದಾರೆ ಎಂದು ಅಭಿಮಾನಿಗಳು ಪ್ರಶ್ನೆ ಮಾಡುವಷ್ಟರಲ್ಲಿ ಪ್ರೋಮೋ ವಿಡಿಯೋ ಬಿಡುಗಡೆ ಮಾಡಿದ್ದಾರೆ...
ಹೌದು! ಮೇಘನಾ ರಾಜ್ 2022ರ ಕ್ರಿಸ್ಮಸ್ ಹಬ್ಬದ ದಿನ ತಮ್ಮ ಹೆಸರಿನಲ್ಲಿ ಯೂಟ್ಯೂಬ್ ಚಾನೆಲ್ ಆರಂಭಿಸಿದ್ದಾರೆ. 'ಅಭಿಮಾನಿಗಳು ಕೇಳುಹಿಸುವ ಎಲ್ಲಾ ಪ್ರಶ್ನೆಗಳಲ್ಲಿ ಅತಿ ಹೆಚ್ಚಾಗಿ ಕೇಳಿರುವುದು ನೀವು ಯಾವಾಗ ನಿಮ್ಮ ಯೂಟ್ಯೂಬ್ ಚಾನೆಲ್‌ನ ಆರಂಭಿಸುತ್ತಿದ್ದೀರಿ ಎಂದು. ಹೀಗಾಗಿ ಈ ಕ್ರಿಸ್ಮಸ್ ಹಬ್ಬದ ದಿನ ನಾನು ಅಫೀಶಿಯಲ್ ಆಗಿ ನನ್ನ ಯೂಟ್ಯೂಬ್ ಚಾನೆಲ್ ಲಾಂಚ್ ಮಾಡುತ್ತಿರುವೆ' ಎಂದು ಪ್ರೋಮೋ ವಿಡಿಯೋದಲ್ಲಿ ಮೇಘನಾ ರಾಜ್ ಮಾತನಾಡಿದ್ದಾರೆ. ಈ ವಿಡಿಯೋದಲ್ಲಿ ಮೇಕಪ್ ಮಾಡಿಸಿಕೊಳ್ಳುತ್ತಿರುವುದು, ಚಿತ್ರೀಕರಣ ಮಾಡುತ್ತಿರುವುದು, ಮಗನ ಹುಟ್ಟುಹಬ್ಬ ಹೀಗೆ ಪ್ರತಿಯೊಂದರ ಸಣ್ಣ ಪುಟ್ಟ ವಿಡಿಯೋಗಳನ್ನು ತೋರಿಸಿದ್ದಾರೆ. ಖಂಡಿತಾ ಮೇಘನಾ ರಾಜ್ ಯೂಟ್ಯೂಬ್ ಇಂಟ್ರೆಸ್ಟಿಂಗ್ ಆಗಿರಲಿದೆ ಎನ್ನಬಹುದು.
'ಸ್ಟಾರ್ ನಟಿ ಯೂಟ್ಯೂಬ್ ಚಾನೆಲ್ ಆರಂಭಿಸಿರುವುದು ದೊಡ್ಡ ಸರ್ಪ್ರೈಸ್ ದಯವಿಟ್ಟು A Day with Raayan ಅಂತ ಒಂಡು ವಿಡಿಯೋ ಮಾಡಿ, ನಿಮ್ಮ ಬಳಿ ಇರುವ ಐಷಾರಾಮಿ ಬ್ಯಾಗ್‌ಗಳನ್ನು ತೋರಿಸಿ, ನಿಮ್ಮ ಚಿರು ಮರೆಯಲಾಗದ ಘಟನೆಗಳನ್ನು ಹಂಚಿಕೊಳ್ಳಿ, ನಿಮ್ಮ ಮನೆ ಟೂರ್ ಮಾಡಿ' ಎಂದು ಕಾಮೆಂಟ್ ಮಾಡುವ ಮೂಲಕ ಅಭಿಮಾನಿಗಳು ಆಗಲೇ ತಮ್ಮ ಡಿಮ್ಯಾಂಡ್‌ಗಳನ್ನು ಮುಂದಿಡುತ್ತಿದ್ದಾರೆ.
ಪ್ರವಾಸದ ಫೋಟೋಗಳು ವೈರಲ್:
2022ರಲ್ಲಿ ಅಂತ್ಯದಲ್ಲಿ ಮೇಘನಾ ರಾಜ್ ತಮ್ಮ ಗರ್ಲ್ ಗ್ಯಾಂಗ್ ಜೊತೆ ಥೈಲ್ಯಾಂಡ್ ಟ್ರಿಪ್ ಮಾಡಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಮೇಘನಾ ಫೋಟೋ ಹಂಚಿಕೊಂಡಾಗ ನೆಟ್ಟಿಗರು ಮಿಶ್ರ ಅಭಿಪ್ರಾಯ ವ್ಯಕ್ತಿ ವ್ಯಕ್ತ ಪಡಿಸಿದ್ದರು. ಇದರ ಬಗ್ಗೆ ಮೇಘನಾ ಮಾತ್ರವಲ್ಲ ತಂದೆ ಸುಂದರ್ ರಾಜ್ ಕೂಡ ರಿಯಾಕ್ಟ್ ಮಾಡಿದ್ದರು.
'ಹಲವು ವರ್ಷಗಳೇ ಆಗಿತ್ತು ನಾನು ಮತ್ತು ನನ್ನ ಗರ್ಲ್ ಗ್ಯಾಂಗ್ ಜೊತೆ ಟ್ರಿಪ್ ಮಾಡಿ. ಟ್ರಿಪ್‌ಗೆ ಹೋಗಿದ್ದ ನಾವೆಲ್ಲರೂ ತಾಯಂದಿರು ಹೀಗಾಗಿ ಒಂದು ದೊಡ್ಡ ಬ್ರೇಕ್ ಅಗತ್ಯವಿತ್ತು. ಕಳೆದ ಬಾರಿ ನಾವು 2018ರಲ್ಲಿ ಬ್ಯಾಚುಲರ್ ಪಾರ್ಟಿ ಮಾಡಲು ಸಿಂಗಪೂರ್‌ಗೆ ಹೋಗಿದ್ದು. ಆದರೆ ಈ ಸಲ ಥೈಲ್ಯಾಂಡ್ ಹೋಗುವ ಪ್ಲ್ಯಾನ್ ಮಾಡಿದ ಕಾರಣವೇ ಚಿರು ತಮ್ಮ ಬ್ಯಾಚುಲರ್ ಪಾರ್ಟಿಯನ್ನು ಅಲ್ಲಿ ಸೆಲೆಬ್ರೇಟ್ ಮಾಡಿದ್ದರು. ಚಿರು ಭೇಟಿ ಕೊಟ್ಟ ಸ್ಥಳಗಳಿಗೆ ಭೇಟಿ ಕೊಟ್ಟ ಪ್ರತಿ ಕ್ಷಣವನ್ನು ರೀ-ಕ್ರಿಯೇಟ್ ಮಾಡಿದೆವು' ಎಂದು ಮೇಘನಾ ರಾಜ್ ಟೈಮ್ಸ್ ಆಫ್ ಇಂಡಿಯಾ ಸಂದರ್ಶನದಲ್ಲಿ ಮಾತನಾಡಿದ್ದಾರೆ.
Meghana Raj ರಾಯನ್ ರಾಜ್ ಸರ್ಜಾ ಬರ್ತಡೇ; ಪುತ್ರನ ತುಂಟ ಫೋಟೋ ಹಂಚಿಕೊಂಡ ನಟಿ!
'ರಾಯನ್ ನನ್ನ ಜೊತೆ ಚಿತ್ರೀಕರಣದಲ್ಲಿ ಭಾಗಿಯಾಗುತ್ತಿದ್ದ. ನನ್ನ ತಾಯಿ ರಾಯನ್ ಜೊತೆಗಿದ್ದರೆ ಅವನು ಆರಾಮ್ ಆಗಿರುತ್ತಾರೆ. ವಿಡಿಯೋ ಕಾಲ್‌ನಲ್ಲಿ ನನ್ನ ಮುಖ ತೋರಿಸಲು ಹೆದರಿಕೊಳ್ಳುತ್ತಿದ್ದೆ. ನನ್ನ ಮುಖ ನೋಡಿದ ತಕ್ಷಣ ಅಮ್ಮ ಬೇಕು ಎಂದು ಹಠ ಮಾಡುತ್ತಾನೆ. ಹೀಗಾಗಿ ಕ್ಯಾಮೆರಾ ತೋರಿಸಿದೆ ರಾಯನ್‌ನ ನೋಡಿ ಮಾತನಾಡಿಸುವೆ. ರಾಯನ್‌ನಿಂದ ದೂರ ಉಳಿಯುವುದಕ್ಕೆ ತುಂಬಾನೇ ಎಮೋಷನಲ್ ಆಗುತ್ತದೆ. ಬೆಳ್ಳಂಬೆಳಗ್ಗೆ 3 ಗಂಟೆಗೆ ಮನೆಗೆ ತಲುಪಿದೆ ಆನಂತರ ಶೂಟ್ ಇತ್ತು ಎಂದು ರೆಡಿಯಾಗಿ ಹೊರಟು ಬಿಟ್ಟೆ ರಾಯನ್‌ನ ಮಾತನಾಡಿಸಿರಲಿಲ್ಲ. ಸಂಜೆವರೆಗೂ ಕಾಯುವಷ್ಟು ತಾಳ್ಮೆ ನನಗೆ ಇರಲಿಲ್ಲ ಹೀಗಾಗಿ ಮಗನನ್ನು ಕರೆದುಕೊಂಡು ಸೆಟ್‌ಗೆ ಬರಲು ಅಮ್ಮನಿಗೆ ಹೇಳಿದೆ. ನನ್ನನ್ನು ನೋಡಿ ಓಡಿ ಓಡಿ ಬಂದ ನಾನು ಓಡಿ ಓಡಿ ಹೋದೆ ಆ ಕ್ಷಣ ಮರೆಯಲು ಆಗುವುದಿಲ್ಲ. ತುಂಬಾ ಫಿಲ್ಮಿ ಆಗಿತ್ತು. ಈ ಟ್ರಿಪ್‌ನಿಂದ ನನ್ನ ಮನಸ್ಸಿಗೆ ಕೊಂಚ ನೆಮ್ಮದಿ ಸಿಕ್ಕಿದೆ. ಈ ರೀತಿ ಟ್ರಿಪ್ ಮಾಡುವಂತೆ ನನ್ನ ತಾಯಿಗೂ ಹೇಳುತ್ತಿರುವೆ. ರಾಯನ್ ಮತ್ತು ನನ್ನನ್ನು ನೋಡಿಕೊಂಡು ಅವರಿಗೂ ಕಷ್ಟ ಆಗಿರುತ್ತದೆ. ಪ್ರತಿಯೊಬ್ಬ ತಾಯಿಗೂ ಬ್ರೇಕ್ ಬೇಕು' ಎಂದಿದ್ದಾರೆ ಮೇಘನಾ.