'ಶಾಸ್ತ್ರಿ' ಚಿತ್ರದ ಮೂಲಕ ಕನ್ನಡ ಚಿತ್ರರಂಗದಲ್ಲಿ ಧೂಳ್ ಎಬ್ಬಿಸಿದ ನಟಿ ಮಾನ್ಯಾ ವೈವಾಹಿಕ ಜೀವನಕ್ಕೆ ಕಾಲಿಟ್ಟ ನಂತರ ಕುಟುಂಬದ ಜೊತೆ ವಿದೇಶದಲ್ಲಿ ನೆಲೆಸಿದ್ದಾರೆ. ಸೋಷಿಯಲ್ ಮೀಡಿಯಾ ಮೂಲಕ ತಮ್ಮ ಅಭಿಮಾನಿಗಳ ಜೊತೆ ಮಾತನಾಡುವ ಮಾನ್ಯಾ ಈಗಲೂ ಕನ್ನಡ ಭಾಷೆ ಮೇಲೆ ಅಪಾರವಾದ ಗೌರವ ಹೊಂದಿದ್ದಾರೆ. ತಮ್ಮ ಪುತ್ರಿಗೂ ಕನ್ನಡ ಹೇಳಿಕೊಡುವ ವಿಡಿಯೋ ಶೇರ್ ಮಾಡುತ್ತಿರುತ್ತಾರೆ. ಅಷ್ಟರ ಮಟ್ಟಕ್ಕೆ ಆ್ಯಕ್ಟಿವ್ ಇದ್ದ ಮಾನ್ಯಾ ಇದ್ದಕ್ಕಿದ್ದಂತೆ ಬೇಸರ ಸಂಗತಿ ಹಂಚಿಕೊಂಡಿದ್ದಾರೆ.

ಹೌದು! ಮೂರು ವಾರಗಳ ಹಿಂದೆ ನಡೆದ ಗಂಭೀರ ಅಪಘಾತದಿಂದ ಮಾನ್ಯಾ ಪಾರ್ಶ್ವವಾಯುನಿಂದ ಬಳಲುತ್ತಿದ್ದಾರೆ. ಈ ವಿಚಾರದ ಬಗ್ಗೆ ಸ್ವತಃ ಮಾನ್ಯಾ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

ಮಾನ್ಯಾ ಮಾತು:
'ನನ್ನ ಜೀವನದಲ್ಲಿ ಅನಿರೀಕ್ಷಿತ ಟ್ವಿಸ್ಟ್‌. ಮೂರು ವಾರಗಳ ಹಿಂದೆ ನನಗೆ ಗಂಭೀರವಾಗಿ ಗಾಯವಾಯ್ತು. ಹರ್ನಿಯೇಟೆಡ್ ಡಿಸ್ಕ್ ಆಗಿದೆ ಎಂದು ವೈದ್ಯರು ತಿಳಿಸಿದರು. ನರಗಳ ಮೇಲೆ ಪೆಟ್ಟು ಬಿದ್ದಿರುವ ಕಾರಣ ನನ್ನ ಎಡಗಾಲು ಶಕ್ತಿ ಕಳೆದುಕೊಂಡಿದೆ. ಪಾರ್ಶ್ವವಾಯು ಅಗಿದೆ ಎಂದು ತಿಳಿದು ಬಂದಿತ್ತು. ತಕ್ಷಣವೇ ನನ್ನನ್ನು ಎಮರ್ಜೆನ್ಸಿ ರೂಮ್‌ಗೆ ಕಳುಹಿಸಲಾಗಿತ್ತು. ಇವತ್ತು ನನಗೆ ಸ್ಟಿರಾಯ್ಡ್‌ ಇಂಜೆಕ್ಷನ್ ನೀಡಲಾಗಿದೆ. ಇಂಜೆಕ್ಷನ್‌ ಪಡೆಯುವ ಮುನ್ನ ಹಾಗೂ ನಂತರದ ಫೋಟೋ ಇದು.  ಕೂರಲು, ನಿಲ್ಲಲು ಹಾಗೂ ನಡೆಯಲೂ ಅಗುತ್ತಿಲ್ಲ. ಯಾವ ಕ್ಷಣದಲ್ಲಿ ನಮಗೆ ಏನಾಗುತ್ತದೆ ಎಂದು ತಿಳಿದಿರುವುದಿಲ್ಲ. ಜೀವನದ ಪ್ರತಿ ಕ್ಷಣವನ್ನು ಎಂಜಾಯ್ ಮಾಡಬೇಕು.  ಜೀವನ ತುಂಬಾನೇ ಚಿಕ್ಕದು. ಎಲ್ಲರೊಂದಿಗೆ ಸಮಯ ಕಳೆಯಿರಿ. ಮುಂದಿನ ದಿನಗಳಲ್ಲಿ ನನಗೆ ಡ್ಯಾನ್ಸ್ ಮಾಡಲು ಆಗುವುದಿಲ್ಲ. ಆದರೆ ವೈದ್ಯರು ಭರವಸೆ ನೀಡಿದ್ದಾರೆ,' ಎಂದು ಮಾನ್ಯಾ ಬರೆದುಕೊಂಡಿದ್ದಾರೆ.

ಅರ್ಧದಲ್ಲೇ ನಿಲ್ಲಿಸಿದ ವಿದ್ಯಾಭ್ಯಾಸ ಮುಂದುವರೆಸಿದ 'ಶಾಸ್ತ್ರಿ' ಚಿತ್ರದ ನಟಿ! 

'ನಾನು ಜೀವನದಲ್ಲಿ ರಿಯಲ್ ಆಗಿರಲು ಬಯಸುತ್ತೇನೆ. ಸೋಷಿಯಲ್ ಮೀಡಿಯಾದಲ್ಲಿ ಒಂದು ರೀತಿ, ನಿಜ ಜೀವನದಲ್ಲಿ ಒಂದು ರೀತಿ ಅಲ್ಲ. ನನ್ನ ಯಶಸ್ಸು ಹಾಗೂ ಟ್ರಿಪ್‌ಗಳ ಫೋಟೋ ಶೇರ್ ಮಾಡಿಕೊಳ್ಳುವಂತೆ, ನನ್ನ ಕಷ್ಟಗಳನ್ನೂ ಹಂಚಿಕೊಳ್ಳುತ್ತೇನೆ. ನಾನು ನಿಮ್ಮಂತೆ ಸಾಧಾರಣ ಹೆಣ್ಣು ಎಂಬ ಕಾರಣಕ್ಕೆ ಹಂಚಿ ಕೊಳ್ಳುವೆ. ಪ್ರತಿ ಕ್ಷಣ ನಾನು ಜೀವನದಲ್ಲಿ ಏನಾದರೂ ಸಾಧನೆ ಮಾಡುತ್ತೇವೆ, ಎಂಬ ಛಲದಿಂದ ಹೋರಾಡಬೇಕು,' ಎಂದು ಮಾನ್ಯಾ ಹೇಳಿದ್ದಾರೆ.

 

 
 
 
 
 
 
 
 
 
 
 
 
 
 
 

A post shared by Manya (@manya_naidu)