ತುಂಬಾ ವರ್ಷಗಳ ನಂತರ ನಟಿ ಮಾಲಾಶ್ರೀ ಬಣ್ಣ ಹಚ್ಚಿರುವ ಸಿನಿಮಾ ‘ನೈಟ್‌ ಕರ್ಫ್ಯೂ’. ಇದರ ಚಿತ್ರೀಕರಣ ಮುಕ್ತಾಯವಾಗಿದೆ. ಈ ಹಿನ್ನೆಲೆಯಲ್ಲಿ ಚಿತ್ರತಂಡ ಮಾಧ್ಯಮಗಳ ಮುಂದೆ ಬಂತು ಚಿತ್ರದ ಕುರಿತು ಹೇಳಿಕೊಂಡಿತು.

ತುಂಬಾ ವರ್ಷಗಳ ನಂತರ ನಟಿ ಮಾಲಾಶ್ರೀ ಬಣ್ಣ ಹಚ್ಚಿರುವ ಸಿನಿಮಾ ‘ನೈಟ್‌ ಕರ್ಫ್ಯೂ’. ಇದರ ಚಿತ್ರೀಕರಣ ಮುಕ್ತಾಯವಾಗಿದೆ. ಈ ಹಿನ್ನೆಲೆಯಲ್ಲಿ ಚಿತ್ರತಂಡ ಮಾಧ್ಯಮಗಳ ಮುಂದೆ ಬಂತು ಚಿತ್ರದ ಕುರಿತು ಹೇಳಿಕೊಂಡಿತು. ಈ ಹಿಂದೆ ‘ಪುಟಾಣಿ ಸಫಾರಿ’ ಚಿತ್ರ ನಿರ್ದೇಶಿಸಿದ್ದ ರವೀಂದ್ರ ವೆಂಶಿ ನಿರ್ದೇಶನದ ಚಿತ್ರವಿದು. ‘ರಾತ್ರಿ 10 ಗಂಟೆಗೆ ಶುರುವಾಗಿ ಬೆಳಗ್ಗೆ 6 ಗಂಟೆಗೆ ಕತೆ ಮುಗಿಯುತ್ತದೆ. ಇಡೀ ಜಗತ್ತು ಕೊರೋನಾ ಸಂಕಷ್ಟದಲ್ಲಿ ಮುಳುಗಿದ್ದಾಗ ಯಾರ ಗಮನಕ್ಕೂ ಬಾರದೆ ದೇಶದಲ್ಲಿ ಒಂದು ಕ್ರೈಮ್‌ ನಡೆಯುತ್ತದೆ. 

ಆ ಕ್ರೈಮ್‌ ಯಾವುದು ಮತ್ತು ಅದರ ಹಿನ್ನೆಲೆ ಏನು ಎಂಬುದನ್ನು ಅತ್ಯಂತ ಕುತೂಹಲಕಾರಿಯಾಗಿ ರೂಪಿಸಲಾಗಿದೆ. ಕತೆ ಬರೆಯುವಾಗಲೇ ಇದು ಮಾಲಾಶ್ರೀ ಅವರಿಗೆ ಅಂತಲೇ ಬರೆದಿದ್ದು’ ಎಂದರು ರವೀಂದ್ರ ವೆಂಶಿ. ಮಾಲಾಶ್ರೀ ಮಾತನಾಡಿ, ‘ಮತ್ತೆ ಚಿತ್ರರಂಗಕ್ಕೆ ಹಿಂತಿರುಗಿ ಬರಲು ನನಗೆ ಇದು ಸೂಕ್ತವಾದ ಸಿನಿಮಾ ಅನಿಸಿತು. ಹೀಗೂ ನಡೆಯಲು ಸಾಧ್ಯವೇ ಎಂದು ಯೋಚನೆ ಮಾಡುವಷ್ಟುಕತೆ ಪರಿಣಾಮಕಾರಿ ಆಗಿದೆ. ಈ ಸಿನಿಮಾ ನನಗೆ ಉತ್ಸಾಹ ತುಂಬಿದೆ. ನನ್ನ ಮತ್ತೆ ದುರ್ಗಿ ಮಾಡಿದ್ದಾರೆ. ನನ್ನದು ಡಾಕ್ಟರ್‌ ಪಾತ್ರ ಎಂದಾಗಲೇ ವಿಶೇಷ ಕತೆ ಅನಿಸಿತು’ ಎಂದರು. 

ಮಾಲಾಶ್ರೀ ನಟನೆಯ ಸಿನಿಮಾ ಹೆಸರು 'ನೈಟ್‌ ಕರ್ಫ್ಯೂ'!

ರಂಜನಿ ರಾಘವನ್‌ ಅವರದ್ದೂ ಕೂಡ ಇಲ್ಲಿ ವೈದ್ಯೆ ಪಾತ್ರ. ವೈದ್ಯ ಲೋಕವನ್ನು ತಪ್ಪು ದಾರಿಗೆ ಎಳೆಯುವ ರಾಜಕಾರಣಿಯಾಗಿ ಪ್ರಮೋದ್‌ ಶೆಟ್ಟಿಇದ್ದಾರೆ. ಮಾಫಿಯಾ ಸಂಚಿನ ಕೂಟದ ಸದಸ್ಯರಾಗಿ ಬಲರಾಜವಾಡಿ, ಅಶ್ವಿನ್‌ ಹಾಸನ್‌ ನಟಿಸಿದ್ದಾರೆ. ವರ್ಧನ್‌ ತೀರ್ಥಹಳ್ಳಿ ಪತ್ರಕರ್ತನ ಪಾತ್ರ ಮಾಡಿದ್ದಾರೆ. ಪ್ರಮೋದ್‌ ಭಾರತೀಯ ಕ್ಯಾಮೆರಾ ಚಿತ್ರಕ್ಕಿದೆ. ಸ್ವರ್ಣಗಂಗಾ ಫಿಲಮ್ಸ್‌ ಬ್ಯಾನರ್‌ನಲ್ಲಿ ಬಿ ಎಸ್‌ ಚಂದ್ರಶೇಖರ್‌ ಈ ಚಿತ್ರ ನಿರ್ಮಿಸಿದ್ದಾರೆ. ಚಿತ್ರದಲ್ಲಿ ಯಾವುದೇ ಹಾಡುಗಳಿಲ್ಲ, ಹಿನ್ನೆಲೆ ಸಂಗೀತಕ್ಕಾಗಿ ಸಂಗೀತ ನಿರ್ದೇಶಕರನ್ನು ಇನ್ನೂ ಅಂತಿಮಗೊಳಿಸಿಲ್ಲ. ಪ್ರಮೋದ್ ಭರತಯ್ಯ ಸಿನಿಮಾಟೋಗ್ರಫಿ ನಿಭಾಯಿಸಿದ್ದಾರೆ.