ಮಾಲಾಶ್ರೀ ನಟನೆಯ ಸಿನಿಮಾ ಹೆಸರು 'ನೈಟ್ ಕರ್ಫ್ಯೂ'!
ಬಿಗ್ ಬ್ರೇಕ್ ನಂತರ ಡಿಫರೆಂಟ್ ಆಗಿರುವ ಟೈಟಲ್ ಮೂಲಕ ಕಮ್ ಬ್ಯಾಕ್ ಮಾಡುತ್ತಿದ್ದಾರೆ ಕನಸಿನ ರಾಣಿ ಮಾಲಾಶ್ರೀ. ಯಾವ ಜಾನರ್ ಸಿನಿಮಾ ಗೊತ್ತ?
ತುಂಬಾ ದಿನಗಳ ನಂತರ ನಟಿ ಮಾಲಾಶ್ರೀ ಲೈಮ್ ಲೈಟ್‌ಗೆ ಮರಳಿದ್ದಾರೆ. ಇವರ ನಟನೆಯ ಚಿತ್ರವನ್ನು ರವೀಂದ್ರ ವಂಶಿ ನಿರ್ದೇಶಿಸುತ್ತಿದ್ದಾರೆ.
ಈ ಚಿತ್ರಕ್ಕೆ ‘ನೈಟ್ ಕರ್ಫ್ಯೂ’ ಎಂದು ಹೆಸರಿಡಲಾಗಿದೆ. ಮಾಲಾಶ್ರೀ ಪ್ರತಿಯೊಂದು ಚಿತ್ರಗಳು ಟೈಟಲ್ ತುಂಬಾನೇ ಡಿಫರೆಂಟ್ ಆಗುತ್ತದೆ. ಆ ಸಾಲಿಗೆ ಈ ಸಿನಿಮಾ ಸೇರಿಕೊಂಡಿದೆ.
‘ಇದೊಂದು ಸಸ್ಪೆನ್ಸ್, ಆ್ಯಕ್ಷನ್ ಥ್ರಿಲ್ಲರ್ ಸಿನಿಮಾ. ಕೋವಿಡ್ ಸಮಯದಲ್ಲಿ ನಡೆದ ಒಂದಿಷ್ಟುನೈಜ ಘಟನೆಗಳನ್ನು ಸೇರಿದಂತೆ ಬೇರೆ ಬೇರೆ ಸಂದರ್ಭಗಳನ್ನು ಸೇರಿಸಿ ಈ ಚಿತ್ರದ ಕತೆ ಮಾಡಲಾಗಿದೆ’ ಎನ್ನುತ್ತಾರೆ ರವೀಂದ್ರ ವಂಶಿ.
ಚಿತ್ರದಲ್ಲಿ ರಂಜನಿ ರಾಘವನ್ ಕೂಡ ನಟಿಸುತ್ತಿದ್ದಾರೆ. ಮಾಲಾಶ್ರೀ ಅವರದ್ದು ಈ ಚಿತ್ರದಲ್ಲಿ ಡಾಕ್ಟರ್ ಪಾತ್ರ. ಇವರಿಬ್ಬರು ಕತೆಯಲ್ಲಿ ಯುಕ್ತಿಗೊಬ್ಬರು, ಶಕ್ತಿಗೊಬ್ಬರು ಎನ್ನುವಂತಹ ಪಾತ್ರಧಾರಿಗಳಾಗಿ ಕಾಣಿಸಿಕೊಳ್ಳುತ್ತಿದ್ದಾರೆ.
ಈ ಚಿತ್ರಕ್ಕೆ ಚಂದ್ರಶೇಖರ್ ಬಂಡವಾಳ ಹಾಕುತ್ತಿದ್ದಾರೆ. ಪ್ರಮೋದ್ ಶೆಟ್ಟಿ, ರಂಗಾಯಣ ರಘು, ಸಾಧು ಕೋಕಿಲ ಮತ್ತು ಬಿಗ್ ಬಾಸ್ ವಿನ್ನರ್ ಮಂಜು ಪಾವಗಡ ಅಭಿನಯಿಸುತ್ತಿದ್ದಾರೆ.
ನೈಟ್ ಕರ್ಫ್ಯೂ ಚಿತ್ರದಲ್ಲಿ ಹಾಡುಗಳು ಇರುವುದಿಲ್ಲ, ಕೇವಲ ಬ್ಯಾಗ್ರೌಂಡ್ ಸ್ಕೂರಿಂಗ್ ಇರುತ್ತದೆ. ಪ್ರಮೋದ್ ಭಾರತಹಿಯಾ ಸಿನಿಮಾಟೋಗ್ರಫಿ ಮಾಡುತ್ತಿದ್ದಾರೆ.