Asianet Suvarna News Asianet Suvarna News

ಸಿನಿಮಾ, ಸೀರಿಯಲ್ ಬಿಟ್ಟು ಸರ್ಕಾರಿ ಕೆಲಸ ಮಾಡಿ; ನೆಟ್ಟಿಗರ ಕಾಮೆಂಟ್‌ಗೆ ಕೃತಿಕಾ ಖಡಕ್ ಉತ್ತರ!

ಸೋಷಿಯಲ್ ಮೀಡಿಯಾದಲ್ಲಿ ಫಾಲೋವರ್ಸ್‌ ನಾನ್‌ ಸ್ಟಾಪ್ ಕಾಮೆಂಟ್ ಮಾಡೋದು ಕಾಮನ್. ಆದರೆ ಅದರಿಂದ ಕಲಾವಿದರಿಗೆ ಎಷ್ಟು ಮಾನಸಿಕವಾಗಿ ತೊಂದರೆ ಆಗುತ್ತದೆ ಎಂದು ಯಾರೂ ಚಿಂತಿಸುವುದಿಲ್ಲ. ಇದರ ಬಗ್ಗೆ ಕೃತಿಕಾ ಅಭಿಪ್ರಾಯ ವ್ಯಕ್ತ ಪಡಿಸಿದ್ದಾರೆ. 
 

Kannada Actress Kruttika Ravindra opens about her Cine journey with a reply to a Netizen comment vcs
Author
Bangalore, First Published Apr 27, 2021, 4:12 PM IST

ಬಿಗ್‌ಬಾಸ್‌ ಸೀಸನ್ 3 ಹಾಗೂ 'ರಾಧಾ ಕಲ್ಯಾಣ' ಧಾರಾವಾಹಿ ಮೂಲಕ ಕಿರುತೆರೆ ವೀಕ್ಷಕರ ಮನೆ ಮಗಳಾಗಿರುವ ನಟಿ ಕೃತಿಕಾ ರವೀಂದ್ರ ಪೋಸ್ಟ್‌ವೊಂದಕ್ಕೆ ನೆಟ್ಟಿಗರು ಮಾಡಿರುವ ಕಾಮೆಂಟ್‌ಗೆ ಪ್ರತಿಕ್ರಿಯೆ ನೀಡಿದ್ದಾರೆ. ಸಿನಿಮಾ ಕ್ಷೇತ್ರವನ್ನು ತೊರೆದು ಸರಕಾರಿ ಕೆಲಸ ಹುಡುಕಿ ಎಂದದ್ದು ಸರಿ ನಾ?

ನೆಟ್ಟಿಗರ ಕಾಮೆಂಟ್:
'ಸೀರಿಯಲ್ ಅಥವಾ ಸಿನಿಮಾ ಶಾಶ್ವತವಲ್ಲ. ಇವೆಲ್ಲಾ ತಾತ್ಕಾಲಿಕ. ನೀವು ಅಭಿನಯಿಸಿದ್ದು 2-3 ಸಿನಿಮಾಗಳು ಮಾತ್ರ. ನಿಮ್ಮ ಸಿನಿಮಾಗಳು ಫ್ಲಾಪ್ ಆಗಿವೆ. ನೀವು ಅದನ್ನೇ ನಂಬಿಕೊಂಡು ಕೂರುವುದು ತಪ್ಪು. ಈಗಿನ ದಿನಗಳಲ್ಲಿ ಸಿನಿಮಾ ಸುಲಭವಲ್ಲ. ಅದೆಷ್ಟೋ ನಟಿಯರು ಬಂದು ಹೋಗುತ್ತಾರೆ. ನೀವು ಸರ್ಕಾರಿ ಪರೀಕ್ಷೆ ಬರೆದು ಜೀವನದಲ್ಲಿ ಸೆಟಲ್ ಆಗಿ. ಐಎಎಸ್‌, ಐಪಿಎಸ್‌ ಅಥವಾ ಕೆಎಎಸ್‌ ಅಧಿಕಾರಿಯಾಗಿ,' ಎಂದಿದ್ದಾರೆ.

Kannada Actress Kruttika Ravindra opens about her Cine journey with a reply to a Netizen comment vcs

ಕೃತಿಕಾ ಪ್ರತಿಕ್ರಿಯೆ:
'ಇದು ನನ್ನ ವೈಯಕ್ತಿಕ ಆಯ್ಕೆ. ಸರ್ಕಾರಿ ಕೆಲಸ ಮಾತ್ರ ಸೇಫ್‌ ಎಂದು ಹೇಳುವುದು ತಪ್ಪಾಗುತ್ತದೆ. ಈ ಭೂಮಿ ಮೇಲೆ ನಮ್ಮ ಇರುವಿಕೆಯೇ ಶಾಶ್ವತವಲ್ಲ ಅಂಥದ್ರಲ್ಲಿ ನೀವು ನನಗೆ ಕೆಲಸದ ವಿಚಾರ ಬಗ್ಗೆ ಹೇಳುತ್ತೀರಾ? ನಾನು ಒಂದು ವಿಚಾರವನ್ನು ಸ್ಪಷ್ಟವಾಗಿ ಹೇಳಬಹುದು,  ಏನೆಂದರೆ ನನ್ನ ಎಷ್ಟು ಸಿನಿಮಾಗಳು ಬಿಡುಗಡೆಯಾಗಿವೆ ಅನ್ನೋದು ನಿಮಗೆ ಗೊತ್ತಿಲ್ಲ. ಏನೋ ಗೊತ್ತಿಲ್ಲದೇ ನನ್ನ ಚಿತ್ರರಂಗದ ಇರುವಿಕೆ ಬಗ್ಗೆ ನೀವು ನಿರ್ಧರಿಸುವ ಅಗತ್ಯವಿಲ್ಲ. ನಾನು ನಿಮ್ಮ ಕೆಲಸದ ಬಗ್ಗೆ ಮಾತನಾಡಿಲ್ಲ ನೀವು ನನ್ನ ಚಿತ್ರರಂಗದ ಬಗ್ಗೆ ಮಾತನಾಡಿಬೇಡಿ.  ಇಷ್ಟೆಲ್ಲಾ ಹೇಳಿದ ಮೇಲೆ ಅರ್ಥ ಆಗುತ್ತೆ ಎಂದು ಅಂದುಕೊಂಡಿರುವೆ,' ಎಂದು ಕೃತಿಕಾ ಉತ್ತರ ನೀಡಿದ್ದಾರೆ. 

ಅವಶ್ಯಕತೆ ಇರೋವಾಗ್ಲೇ ನನ್ನ ಬಿಟ್ಟು ಹೊರಟೋದ್ರು; ನಟಿ ಕೃತಿಕಾ ದುಖಃದ ಮಾತು

'ಕಲಾವಿದೆ ಆಗಬೇಕೆಂಬುದು ಬಯಕೆ ನನಗಿರಲಿಲ್ಲ. ಓದುವ ಹುಚ್ಚು ನನಗೆ ಕೂತಲ್ಲಿ, ನಿಂತಲ್ಲಿ, ಮಲಗಿದರೂ ಪುಸ್ತಕದ್ದೇ ಧ್ಯಾನ ಮಾಡುತ್ತಿದ್ದವಳು. ನನ್ನ ಕನಸು ಅಧಿಕಾರಿಯಾಗಬೇಕಿತ್ತು. ಅದಕ್ಕೆ ತಕ್ಕ ಹಾಗೆ ನಾನು ಸಿದ್ಧತೆ ಮಾಡಿಕೊಂಡಿದ್ದೆ. ಆದರೆ ಒಂದು ತರದಲ್ಲಿ ನಾನು ಕಲಾತ್ಮಕ ವಿಭಾಗದಲ್ಲಿ ನನ್ನ ಓದನ್ನು ಮುಗಿಸದ್ದೇ ಆ ಉದ್ದೇಶಕ್ಕಾಗಿ.  ಅಕಸ್ಮಿಕವಾಗಿ ಕಲಾವಿದೆಯಾದೆ. ಕಲಾ ಸರಸ್ವತಿ ಬಾಚಿ ತಬ್ಬಿಕೊಂಡ ಕೂಡಲೇ ಕಲೆಯೇ ನನ್ನ ಬದುಕಾಯಿತು. ಸಂಯಮ, ಶ್ರದ್ಧೆ, ಗುರಿ ಬಹಳ ಅವಶ್ಯಕ. ದೇವರ ಮೇಲೆ ನಂವಿಕ ಇದ್ದರೆ ಸಾಕು. ನಾವು ಏನಾದರೂ ಆಗಬುದು. ಆದರೆ ಮನುಷ್ಯರಾಗಿರೋದು ಮುಖ್ಯ. ಮುಂಬರುವ ದಿನಗಳೆಲ್ಲವೂ ಒಳ್ಳೆಯದೇ. ಈಗಿನ ಪರಿಸ್ಥಿತಿ ಕೆಟ್ಟಿರಬಹುದು. ಎಲ್ಲ ದಿನಗಳೂ ಹೀಗೆ ಇರೋದಿಲ್ಲ. ನಂಬಿಕೆ ಇರಲಿ. ಧೈರ್ಯಂ ಸರ್ವತ್ರ ಸಾಧನಂ' ಎಂದು ಕೃತಿಕಾ ಹೇಳಿದ್ದಾರೆ.

Follow Us:
Download App:
  • android
  • ios