ನಟಿ ಕಾವ್ಯ ಶಾಸ್ತ್ರಿ ಸಾರ್ಥಕ ಕೆಲಸವೊಂದನ್ನು ಮಾಡಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಹರಿದು ಬರುತ್ತಿದೆ ಪಾಸಿಟಿವ್ ಕಾಮೆಂಟ್ಸ್.  

ಬಾಬ್ ಕಟ್‌ನಲ್ಲಿ ಪೋಟೋ ಹಂಚಿಕೊಂಡ ನಟಿ ಕಾವ್ಯ ಶಾಸ್ತ್ರಿ, ತಮ್ಮ ಉದ್ದವಾದ ಕೂದಲನ್ನು ಕ್ಯಾನ್ಸರ್‌ ರೋಗಿಗಳಿಗೆ ದಾನ ಮಾಡಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ವಿಡಿಯೋ ಮಾಡುವ ಮೂಲಕ ಜನರಲ್ಲಿ ಅರಿವು ಮೂಡಿಸಿದ್ದಾರೆ. 

'ನೀವೆಲ್ಲರೂ ಯಾಕೆ ಎಂದು ಪ್ರಶ್ನಿಸಬಹುದು. ಯಾಕೆ ಮಾಡಿಸಿಕೊಳ್ಳಬಾರದು ಎಂದು ನಾನು ಹೇಳುವೆ. ಕೂದಲನ್ನು ಕ್ಯಾನ್ಸರ್‌ ರೋಗಿಗಳಿಗೆ ನೀಡಿ ಅವರ ಮುಖದಲ್ಲಿ ಮಂದಹಾಸ ಮೂಡಿಸೋಣ. ಅದೆಷ್ಟೋ ಮಹಿಳೆಯರು ಹಾಗೂ ಮಕ್ಕಳು ಕೂದಲು ಉದುರುವುದನ್ನು ನೋಡಿಯೇ ಖಿನ್ನತೆಗೆ ಒಳಗಾಗುತ್ತಾರೆ' ಎಂದು ಬರೆದು ಕಾವ್ಯಾ ಬಾಬ್‌ ಹೇರ್‌ ಫ್ಲಾಂಟ್ ಮಾಡಿದ್ದಾರೆ. 

ಮನೆಯಲ್ಲೇ ಇದ್ದು ಕ್ಯಾನ್ಸರ್‌ ರೋಗಿಗಳಿಗೆ ಕೂದಲು ದಾನ ಮಾಡಿದ ಸುಕೃತ ವಾಗ್ಲೆ 

'ಹೌದು! ನಾನು ಕೂದಲು ದಾನ ಮಾಡಿದೆ. ಕ್ಯಾನ್ಸರ್‌ನಿಂದ ಬಳಲುತ್ತಿರುವ ಜನರಿಗೆ ಉಪಯೋಗವಾಗಲಿ ಎಂದು. ಕ್ಯಾನ್ಸರ್‌ನಿಂದ ನನ್ನ ಪ್ರೀತಿಯ ಚಿಕ್ಕಪ್ಪ ನಿಧನರಾದರು. ಕೀಮೋ ಥೆರಪಿ ಅದರ ಹಿಂಸೆ ಎಲ್ಲವೂ ಕಣ್ಣಾರೆ ಕಂಡ ನನಗೆ ಈ ಯೋಚನೆ ಮೂಡಿತ್ತು. ಇದೊಂದು ಸಣ್ಣ ಕೆಲಸವಿರಬಹುದು ಆದರೆ ನನ್ನಿಂದ ಆಗುವುದನ್ನು ಮಾಡಿದೆ. ಒಂದೊಳ್ಳೆ ಕೆಲಸಕ್ಕೆ ನಾವೆಲ್ಲರೂ ಕೈ ಜೋಡಿಸೋಣ ಬನ್ನಿ' ಎಂದು ಕಾವ್ಯ ಬರೆದುಕೊಂಡಿದ್ದಾರೆ.

View post on Instagram