ಬಹು ಬೇಡಿಕೆಯ ಜನಪ್ರಿಯ ನಟಿ ಹರಿಪ್ರಿಯಾ ತಾನು ನಟನೆಯಲ್ಲಷ್ಟೇ ಅಲ್ಲ, ಬರವಣಿಗೆಯಲ್ಲೂ ಮುಂದು ಅನ್ನುವುದನ್ನು ತೋರಿಸಿಕೊಡುತ್ತಿದ್ದಾರೆ. ಅವರು ಕನ್ನಡಪ್ರಭ ಓದುಗರಿಗಾಗಿಯೇ ಬರೆದ ಚೆಂದದ ಬರಹ ಇಲ್ಲಿದೆ. ಅವರ ಹೆಚ್ಚಿನ ಬರವಣಿಗೆ ಓದುವ ಆಸಕ್ತಿ ಇಧ್ದರೆ dಚಿdhಞಟಿsತಿ.ಛಿsp ಬ್ಲಾಗ್‌ ನೋಡಿ.

ಇಡೀ ಸಂಸಾರ ಅಂದ್ರೆ ಮಡದಿ, ಮಕ್ಕಳು, ತಂದೆ-ತಾಯಿ ಅಥವಾ ತಮ್ಮ ಮತ್ತಿತರರ ಬೇಕು ಬೇಡಗಳು ನಿಭಾಯಿಸುವವನು ತಂದೆ. ಎಲ್ಲಿಯವರೆಗೆ ಅಂದ್ರೆ ಕೊನೆಯವರೆಗೆ!

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಎಲ್ಲರ ಜವಾಬ್ದಾರಿಯನ್ನು ಹೊತ್ತು ನಿಲ್ಲುವ ತಂದೆ, ಇದು ಅವನ ಹೆಮ್ಮೆಯೂ ಹೌದು, ತಪ್ಪಿಸಿಕೊಳ್ಳಲು ಆಗದ ಜವಾಬ್ದಾರಿಯೂ ಹೌದು. ಏಕೆಂದರೆ ಆತ ಎಲ್ಲರ ಬೆನ್ನೆಲುಬು, ಕಷ್ಟಕ್ಕೆ, ಸುಖಕ್ಕೆ ಆಗುವ ಮನೆಯ ದಿಕ್ಕು.

ನನಗೆ ನನ್ನ ಬಾಲ್ಯ ನೆನಪಾಗುತ್ತದೆ. ನನ್ನ ಸ್ನೇಹಿತರೊಂದಿಗೆ ಜಗಳವಾದಾಗ, ಇರು ಅಪ್ಪಂಗ್‌ ಹೇಳ್ತೀನಿ ಅಂತಿದ್ದೆ. ಅಮ್ಮಂಗೆ ಏನಾದ್ರೂ ಬೇಜಾರಾಗಿದ್ರೆ ಅಪ್ಪ ಬರೋವರ್ಗೂ ಕಾದು, ಅವರಿಗೆ ಹೇಳಿಕೊಂಡು ಸನಾಧಾನ ಆಗ್ತಿದ್ರು, ಎಲ್ಲರಿಗೂ ಏನೇ ಬೇಕಂದ್ರೂ ಅಪ್ಪ ಇದಾರೆ ಅನ್ನೋ ಧೈರ್ಯ.

View post on Instagram

ಮನೆಯಲ್ಲಿರುವವರೆಲ್ಲಾ ಸಂತೋಷವಾಗಿರುವುದರ ಹಿಂದೆ ಈತನ ಸಾಕಷ್ಟುಪರಿಶ್ರಮ ಇರುತ್ತದೆ. ಪ್ರತಿಯೊಂದು ವ್ಯಕ್ತಿಗೂ ಆರ್ಥಿಕತೆಯಲ್ಲೋ ಮನಸ್ಸಿನ ಸ್ಥಿತಿಯಲ್ಲೋ ಏಳು ಬೀಳುಗಳಿರುತ್ತವೆ, ಆದರೆ ನಮ್ಮ ಖುಷಿಯಲ್ಲಿ ಅದರ ಎಷ್ಟೋ ನೋವನ್ನು ಮರೆಯುತ್ತಾರೆ. ನಾವು ನಮ್ಮ ಪ್ರತಿದಿನದ ಗೊಂದಲಗಳ ಮಧ್ಯೆ ಗಮನಿಸಲ್ಲ.

ತಂದೆಯಾದವರು ಆಸ್ಥಾನದಲ್ಲಿರುವಾಗ, ಅರ ಕಷ್ಟಗಳನ್ನು ತೋರಿಸಲು ಇಷ್ಟಪಡಲ್ಲ, ಮನೆಯ ಪಿಲ್ಲರ್‌ ವೀಕ್‌ ಆಗಿದೆ ಅಂದ್ರೆ ಬೇರೆಯವರು ಗಾಬರಿಯಾಗ್ತಾರೆ ಅಂತ. ಆದ್ರೆ ನಾವು ಅದನ್ನು ಅರಿತು ನಾವೆಲ್ಲರೂ ಇದ್ದೇವೆಂದು ಪರೋಕ್ಷವಾಗಿ ಭರವಸೆ ಕೊಡಬೇಕು. ಅದೆಂಥಾ ಅರಸನಾದರೂ ಕೆಲ ಸಂದರ್ಭಗಳಲ್ಲಿ ಅಸಹಾಯಕನಾಗುತ್ತಾನೆ.

'ಹ್ಯಾಪಿ' ಆ್ಯಂಡ್‌ 'ಲಕ್ಕಿ' ಹುಟ್ಟುಹಬ್ಬ ಆಚರಿಸಿದ ನಟಿ ಹರಿ ಪ್ರಿಯಾ!

ಎಲ್ಲಾ ಕುಟುಂಬಸ್ಥರೂ ಒಬ್ಬರ ಮೇಲೇ ಅವಲಂಬಿಸಿದಾಗ ಕೆಲವೊಮ್ಮೆ ಹೊರೆ ಅನಿಸುತ್ತದೇನೋ! ಆತ ಸಂಸಾರದ ಕಣ್ಣಲ್ಲಿ ಹೀರೋ. ಆದರೆ ತಂದೆಯಾದವನು ಕೂಡ ಎಲ್ಲರಂತೆ ಒಬ್ಬ ಸಾಮಾನ್ಯ ವ್ಯಕ್ತಿ. ಏನೇ ಆಗಲಿ, ಸಂಸಾರದ ದೋಣಿಯನ್ನು ದಡಕ್ಕೆ ಸೇರಿಸುತ್ತಾನೆ.

ಈ ತಂದೆ ಅನ್ನೋ ಸ್ಥಾನಾನ ಗಂಡೇ ಅಲ್ಲ ಎಷ್ಟೋ ಹೆಣ್ಣು ಮಕ್ಕಳು ತುಂಬುತ್ತಿದ್ದಾರೆ. ಹೊರ ಜಗತ್ತಿನ ಜಂಜಾಟದಲ್ಲೂ ಗೆದ್ದೆ, ಮನೆ ಜವಾಬ್ದಾರಿಯನ್ನೂ ಸಾಗಿಸುತ್ತಿದ್ದಾರೆ. ತಂದೆ ಅನ್ನೋ ಸ್ಥಾನವನ್ನು ತುಂಬುತ್ತಿರುವ ಪ್ರತಿಯೊಂದು ವ್ಯಕ್ತಿಗೂ ನನ್ನದೊಂದು ದೊಡ್ಡ ಸಲಾಂ.