Asianet Suvarna News Asianet Suvarna News

ಮೂಗು ಚುಚ್ಚಿಸಿಕೊಂಡ ವಿಡಿಯೋ ವೈರಲ್; ವಸಿಷ್ಠ ಸಿಂಹ ಡಿಮ್ಯಾಂಡ್ ಎನ್ನುತ್ತಿದ್ದವರಿಗೆ ಉತ್ತರ ಕೊಟ್ಟ ಹರಿಪ್ರಿಯಾ

ಇದ್ದಕ್ಕಿದ್ದಂತೆ ಮೂಗು ಚುಚ್ಚಿಸಿದ ಹರಿಪ್ರಿಯಾ. ಮದುವೆ ಕಾರಣ, ವಸಿಷ್ಠ ಸಿಂಹ ಡಿಮ್ಯಾಂಡ್ ಎನ್ನುತ್ತಿದ್ದ ನೆಟ್ಟಿಗರಿಗೆ ಉತ್ತರ ಕೊಟ್ಟ ಹರಿಪ್ರಿಯಾ

Kannada actress Hari priya shares her story of Nose piercing with husband Vasishta Simha vcs
Author
First Published Dec 18, 2023, 4:00 PM IST

ಕನ್ನಡ ಚಿತ್ರರಂಗ ಗಿಣಿ ಮುಖದ ಚೆಲುವೆ ಹರಿಪ್ರಿಯಾ ಮತ್ತು ವಸಿಷ್ಠ ಸಿಂಹ ಸದ್ಯದ ನವ ಜೋಡಿ. ಎಲ್ಲಿ ನೋಡಿದರೂ ಕೈ ಕೈ ಹಿಡಿದುಕೊಂಡು ಮದುವೆ, ಕಾರ್ಯಕ್ರಮ ಮತ್ತು ದೇವಸ್ಥಾನಗಳಲ್ಲಿ ಕಾಣಿಸಿಕೊಳ್ಳುತ್ತಾರೆ. ಬ್ಯುಸಿ ಲೈಫ್‌ನಲ್ಲೂ ಸಮಯ ಮಾಡಿಕೊಂಡು ಹರಿಪ್ರಿಯಾ ಯುಟ್ಯೂಬ್ ಚಾನೆಲ್ ಆರಂಭಿಸಿದ್ದಾರೆ. ಮದುವೆ ಮುನ್ನ ಹರಿಪ್ರಿಯಾ ಮೂಗು ಚುಚ್ಚಿಸಿಕೊಂಡ ಕಥೆ ಎಲ್ಲರಿಗೂ ಗೊತ್ತಿದೆ. ಇದ್ದಕ್ಕಿದ್ದಂತೆ ಯಾಕೆ ಅನ್ನೋ ಪ್ರಶ್ನೆಗೆ ಇಲ್ಲಿದೆ ಉತ್ತರ....

ಮೂಗು ಚುಚ್ಚಿಸಿಕೊಳ್ಳವ ಹಿಂದಿನ ದಿನ ಹರಿಪ್ರಿಯಾ ತಮ್ಮ ಮೊಬೈಲ್‌ನಲ್ಲಿ ವಿಡಿಯೋ ಮಾಡಿದ್ದರು. ಆ ವಿಡಿಯೋವನ್ನು ಈಗ ಹಂಚಿಕೊಂಡಿದ್ದಾರೆ. 'ನಾಳೆ ಮೂಗು ಚುಚ್ಚಿಸುತ್ತಿರುವೆ ಸ್ವಲ್ಪ ಟೆನ್ಶನ್ ಆಗುತ್ತಿದೆ. ನೋವಾಗುತ್ತದೆ ಅನ್ನೋ ಭಯ ಇಲ್ಲ ಆದರೆ ನನ್ನ ಲುಕ್ ಸಂಪೂರ್ಣವಾಗಿ ಬದಲಾಗುತ್ತದೆ. ಈಗ ನನಗೆ ಹೇಗೆ ಅನಿಸುತ್ತಿದೆ ಎಂದು ವಿಡಿಯೋ ಮಾಡುತ್ತಿರುವೆ. ಕನ್ನಡಿಯಲ್ಲಿ ನನ್ನನ್ನು ನಾನು ನೋಡಿಕೊಳ್ಳುತ್ತಿರುವೆ..ಇದು ಶಾಶ್ವತ ಬದಲಾವಣೆ ಆಗಿರುತ್ತದೆ. ಸಿನಿಮಾದಲ್ಲಿ ಫೇಕ್‌ ಪಿನ್ ಹಾಕಿಕೊಂಡಿರುವೆ...ಎಡ ಬಲ ಸೆಂಟರ್‌ ಪ್ರಯತ್ನ ಮಾಡಿರುವೆ. ಪರ್ಮನೆಂಟ್‌ ಮೂಗು ಬೊಟ್ಟು ನನ್ನ ಸಂಪೂರ್ಣ ಲುಕ್ ಟ್ರೆಡಿಷನಲ್‌ ಮಾಡುತ್ತದೆ. ವೆಸ್ಟ್ರನ್‌ ಲುಕ್‌ನ ಹೇಗೆ ಬದಲಾಯಿಸುತ್ತದೆ ಗೊತ್ತಿಲ್ಲ. ಶುಕ್ರವಾರ ಬೆಳಗ್ಗೆ 9ರಿಂದ 10 ಸಮಯ ಒಳ್ಳೆ ಮುಹೂರ್ತ ಎಂದು ಹೇಳಿರುವುದಕ್ಕೆ ಕುಚ್ಚಿಸಿಕೊಳ್ಳುತ್ತಿರುವೆ' ಎಂದು ಮಾತನಾಡಿದ್ದರು. 

ಹರಿಪ್ರಿಯಾ- ವಸಿಷ್ಠ ಮದುವೆ ರಿಜಿಸ್ಟರ್; ಯಾರಿಗೂ ತಿಳಿಯದ ಸತ್ಯ ಬಿಚ್ಚಿಟ್ಟ ನಟಿ!

'ಅಂದು ನಮ್ಮ ಮನೆಯಲ್ಲಿ ವಿಶೇಷ ಪೂಜೆ ಮತ್ತು ಹೋಮಾ ನಡೆಯುತ್ತಿತ್ತು. ನನ್ನ ಲುಕ್ ಬದಲಾಗಿದೆ ಅದನ್ನು ಜನರಿಗೆ ತಿಳಿಸಬೇಕು ಎಂದು ಕ್ಲೋಸಪ್ ವಿಡಿಯೋವನ್ನು ಎಡಿಟ್ ಮಾಡಿ ಅಪ್ಲೋಡ್ ಮಾಡಿದ್ದೆ ಆದರೂ ಕೈ ಬೆರಳು ಕೂಲಿಂಗ್ ಕ್ಲಾಸ್ ಮತ್ತು ಗುಂಗುರು ಕೂದಲನ್ನು ನೋಡಿ ವಸಿಷ್ಠ ಅವರನ್ನು ಗೆಸ್ ಮಾಡಿದ್ದಾರೆ. ನಾವು ಎಷ್ಟೇ ಹುಷಾರ್ ಆಗಿ ವಿಡಿಯೋ ಮತ್ತು ಧ್ವನಿ ಎಡಿಟ್ ಮಾಡಿದ್ದರೂ ಜನ ಗೆಸ್ ಮಾಡಿಬಿಟ್ಟರು. ಅಲ್ಲಿಂದ ನಾನ್‌ ಸ್ಟಾಪ್ ಫೋನ್ ಕಾಲ್ ಮತ್ತು ಶುಭ ಮೆಸೇಜ್ ಬರುತ್ತಿತ್ತು' ಎಂದು ವೈರಲ್ ಅದ ವಿಡಿಯೋ ಬಗ್ಗೆ ಹೇಳಿದ್ದಾರೆ.  

'ನನ್ನ ಮೊದಲ ಮೂಗು ಬೊಟ್ಟು ವಸಿಷ್ಠ ಗಿಫ್ಟ್ ಮಾಡಿದ್ದರು ಅಲ್ಲದೆ ಚುಚ್ಚಲು ಅವರೇ ಮಾರ್ಕ್ ಮಾಡಿಕೊಟ್ಟರು ಹೀಗಾಗಿ ತುಂಬಾ ಸ್ಪೆಷಲ್ ಆಗಿತ್ತು. ನಾನು ಮೂಗು ಚುಚ್ಚಿಸಿಕೊಳ್ಳಲು ಎರಡು ಆಯ್ಕೆಗಳಿತ್ತು..ಒಂದು ಪಂಚಲೋಹದ ತಂತಿ ಅಥವಾ ಗನ್ ಶಾಟ್ ಅಂತ. ಯಾವುದೇ ಸೈಡ್ ಎಫೆಕ್ಟ್‌ ಇರುವುದಿಲ್ಲ ಎಂದು ಪಂಚಲೋಹದ ತಂತಿ ಆಯ್ಕೆ ಮಾಡಿಕೊಂಡೆ' ಎಂದು ಹರಿಪ್ರಿಯಾ ಯುಟ್ಯೂಬ್‌ ಚಾನೆಲ್‌ನಲ್ಲಿ ಮಾತನಾಡಿದ್ದಾರೆ. 

ಮೂಗು ಚುಚ್ಚಿಸಿಕೊಂಡ ನಟಿ ಹರಿ ಪ್ರಿಯಾ; ಮದುವೆ ಫಿಕ್ಸ್‌ ಆಗಿದ್ಯಾ?

'ಇದ್ದಕ್ಕಿದ್ದಂತೆ ಮೂಗು ಚುಚ್ಚಿಸಲು ಕಾರಣ ಏನೆಂದು ಅನೇಕರು ಪ್ರಶ್ನೆ ಮಾಡಿದ್ದರು. ನಮ್ಮ ಮನೆಯಲ್ಲಿ ಪ್ರತಿಯೊಬ್ಬ ಹಣ್ಣುಮಗಳು ಮೂಗು ಚುಚ್ಚಿಸಿದ್ದಾರೆ. ನಾನು ಚಿಕ್ಕ ವಯಸ್ಸಿನಲ್ಲಿ ಮೂಗು ಚುಚ್ಚಿಸಿಕೊಳ್ಳಬೇಕು ಎಂದು ಅಜ್ಜಿ ಒತ್ತಾಯ ಮಾಡುತ್ತಿದ್ದರು ಆಗ ಮದುವೆ ಸಮಯದಲ್ಲಿ ಚುಚ್ಚಿಸಿಕೊಳ್ಳುತ್ತೀನಿ ಎಂದು ಹೇಳಿದ್ದೆ. ಅದರಂತೆ ಮೂಗು ಚುಚ್ಚಿಸಿಕೊಂಡು ಮದುವೆ ಮಾಡಿಕೊಂಡೆ. ಮೂಗು ಚುಚ್ಚಿಸಿಕೊಳ್ಳುವುದರಿಂದ  ಆರೋಗ್ಯಕ್ಕೆ ಸಾಕಷ್ಟು ಉಪಯೋಗಗಳು ಇದೆ' ಎಂದಿದ್ದಾರೆ ಹರಿಪ್ರಿಯಾ. 

 

Follow Us:
Download App:
  • android
  • ios