ನಟಿ ಆಶಿತಾ ಪುನೀತ್, ಶಿವರಾಜ್‌ಕುಮಾರ್ ಸೇರಿದಂತೆ ಅನೇಕ ನಟರೊಂದಿಗೆ ಚಿತ್ರಗಳಲ್ಲಿ ನಟಿಸಿದ್ದಾರೆ. ಸಿನಿಮಾರಂಗದಲ್ಲಿನ ಕೆಟ್ಟ ಅನುಭವಗಳನ್ನು ಹಂಚಿಕೊಂಡ ಅವರು, ಕೆಲವು ನಿರ್ದೇಶಕರು ಮತ್ತು ನಿರ್ಮಾಪಕರು 'ಅಡ್ಜಸ್ಟ್' ಮಾಡಿಕೊಳ್ಳಲು ನೇರವಾಗಿ ಕೇಳುತ್ತಿದ್ದರು ಎಂದು ಆರೋಪಿಸಿದ್ದಾರೆ. ನಂತರ ಹುಷಾರಾಗಿರಲು ಕಲಿತು ಇಂತಹ ಸಾಹಸಗಳಿಂದ ಹೊರಬಂದೆ ಎಂದಿದ್ದಾರೆ.

ನಟಿ ಆಶಿತಾ (Ashitha) ಹೆಚ್ಚಿನ ಸಿನಿಪ್ರೇಮಿಗಳಿಗೆ ಗೊತ್ತು.. ಪುನೀತ್ ರಾಜ್‌ಕುಮಾರ್ (Puneeth Rajkumar) ಜೊತೆ ಆಕಾಶ್ ಹಾಗೂ ಶಿವರಾಜ್‌ಕುಮಾರ್ (Shivarajkumar) ಜೊತೆ ತವರಿನ ಸಿರಿ, ಬಾ ಬಾರೋ ರಸಿಕ, ಚಾಂದಿನಿ ಹೀಗೆ ಅನೇಕ ಕನ್ನಡ ಸಿನಿಮಾಗಳಲ್ಲಿ ನಟಿಸಿದ್ದಾರೆ. ಇವರಿಗೆ ಆಗಿರುವ ಕೆಟ್ಟ ಅನುಭವಗಳನ್ನು ಅವರು ಸಂದರ್ಶನದಲ್ಲಿ ಹಂಚಿಕೊಂಡಿದ್ದರು. ಕನ್ನಡ ಸಿನಿಮಾರಂಗದಲ್ಲಿ ನಮಗೇ ಗೊತ್ತಿಲ್ಲದೇ ಕೆಲವೊಂದು ಕೆಟ್ಟ ಘಟನೆಗಳು ನಾಲ್ಕು ಗೋಡೆಯ ಮಧ್ಯೆ ನಡೆಯುತ್ತವೆ. ಅವುಗಳನ್ನು ಹೇಳಿದರೆ ಅಷ್ಟೇ ಹೊರಜಗತ್ತಿಗೆ ಗೊತ್ತಾಗುತ್ತದೆ. 

ತಮ್ಮ ವೃತ್ತಿ ಜೀವನದ;ಲ್ಲಿ ನಡೆದ ಕೆಟ್ಟ ಘಟನೆ ಬಗ್ಗ ನಟಿ ಆಶಿಉತಾ ಅವರು ಹೀಗೆ ಮಾಧ್ಯಮಗಳ ಮುಂದೆ ಹೇಳಿಕೊಂಡಿದ್ದರು. 'ಕೆಲವೊಂದು ಡೈರೆಕ್ಟರ್‌ಗಳು ಹಾಗೂ ಪ್ರೊಡ್ಯೂಸರ್‌ಗಳು ಅಡ್ಜಸ್ಟ್ ಮಾಡ್ಕೋಬೇಕು ಅಂತ ನೇರವಾಗಿ ಕೇಳ್ತಾ ಇದ್ರು.. ಪ್ರತಿದನ ನಂಗೆ ಅದೇ ಕಾರಣಕ್ಕೆ ಕಾಲ್ ಮಾಡ್ತಾ ಇದ್ರು.. ಕೊಡೋಣ ನಿಮ್ಗೆ ಚಾನ್ಸ್, ಆದ್ರೆ ಈ ತರ ಇದೆ ವಿಷ್ಯ, ನೀನು ಅಡ್ಜಸ್ಟ್ ಮಾಡ್ಕೊಳ್ಳೊಕೆ ರೆಡಿ ಇದ್ದೀಯಾ ಅಂತ ಕೇಳ್ತಾ ಇದ್ರು.. ಏನೂ ಹೇಳದೇ ಇದ್ರೆ ಮತ್ತೆ ಮತ್ತೆ ಕಾಲ್ ಬರ್ತಾನೇ ಇರ್ತಿತ್ತು..' ಎಂದಿದ್ದಾರೆ.

ಸಡನ್ನಾಗಿ ದರ್ಶನ್ 'ಡೆವಿಲ್' ಟೈಟಲ್ ಚೇಂಜ್, ಚಿತ್ರದಿಂದ 'ಹೀರೋ'ನೇ ಮಾಯ ಆಗಿದ್ಯಾಕೆ..?

ಜೊತೆಗೆ, 'ಕೊನೆಕೊನೆಗೆ ಅದು ಯಾವಮಟ್ಟಕ್ಕೆ ಹೋಯ್ತು ಅಂದ್ರೆ, ನೀನು ಹೀಗೆ ಮಾಡಿದ್ರೆ ಮಾತ್ರ ನಿಂಗೆ ರೋಲ್ ಕೊಡ್ತೀವಿ ಅಂತ ಡಿಮ್ಯಾಂಡ್‌ ಮಾಡೋ ಲೆವಲ್‌ಗೆ ಹೋಯ್ತು.. ಎಷ್ಟು ಅಂತ ಸಹಿಸಿಕೊಳೊಳ್ಳೋದು? ನಂಗೂ ಸಾಕಾಗಿ ಹೋಯ್ತು.. ನಾನು ಆ ಬಳಿಕ ಹುಶಾರ್‌ ಆಗಿ ಇರಲು ಶುರು ಮಾಡಿದ ಮೇಲೆ ನಾನು ನಿಧಾನವಾಗಿ ಇಂತಹ ಆರೋಪ ಮಾಡುವ ಸಾಹಸದಿಂದ ಹೊರಬಂದೆ... ಇಲ್ಲಿ ಹುಶಾರಾಗಿ ಇರಬೇಕು ಅನ್ನೋದನ್ನ ಕಲಿತುಕೊಂಡೆ' ಎಂದಿದ್ದಾರೆ ನಟಿ ಆಶಿಕಾ. 

ಹೆಣ್ಣುಮಕ್ಕಳನ್ನು ಕೇವಲ ಕಾಮ ತಣಿಸುವ ಗೊಂಬೆಗಳು ಎಂದು ನೋಡುವ ಪರಿಪಾಠ ಎಲ್ಲಾ ಕಡೆ ಇದೆ. ಅದು ಕೇವಲ ಚಿತ್ರರಂಗದಲ್ಲಿ ಮಾತ್ರವಲ್ಲ, ಎಲ್ಲಾ ಕಡೆ ಅದು ಸರ್ವೇ ಸಾಮಾನ್ಯ, ಅದೆಷ್ಟೋ ಹೆನ್ಣುಮಕ್ಕಳು ಸಹ ತಾವು ಸುಂದರವಾಗಿರಲು ಮಾತ್ರ ಬಯಸುತ್ತಾರೆ, ಬುದ್ಧಿವಂತಿಕೆ ಬೆಳೆಸಿಕೊಳ್ಳುವುದೇ ಇಲ್ಲ. ದಿನದ ಹೆಚ್ಚಿನ ಸಮಯವನ್ನು ಕನ್ನಡಿ ಮುಂದೆಯೆ ಕಳೆದು ಜೀವನವನ್ನು ಸ್ವತಃ ನರಕ ಮಾಡಿಕೊಂಡಿರುತ್ತಾರೆ. 

ಆನೆ ದವಡೆಯಿಂದ ದಂತವನ್ನು ಹೇಗೆ ತೆಗೀತಿದ್ದ ವೀರಪ್ಪನ್? ಕೇಳಿದ್ರೇ ಶಾಕ್ ಆಗ್ತೀರಾ..!