ಕುಖ್ಯಾತ ದಂತಚೋರ ವೀರಪ್ಪನ್ ಆನೆ ದಂತಗಳನ್ನು ಕ್ರೂರ ವಿಧಾನದಿಂದ ತೆಗೆಯುತ್ತಿದ್ದ. ಆನೆಯನ್ನು ಕೊಂದು ಬಾಯಲ್ಲಿ ಸುಣ್ಣದ ಕಲ್ಲು ತುರುಕಿ ದವಡೆ ಸುಟ್ಟು ಮೃದುವಾಗುತ್ತಿದ್ದಂತೆ ದಂತಗಳನ್ನು ಸುಲಭವಾಗಿ ಬೇರ್ಪಡಿಸುತ್ತಿದ್ದ. ಈ ವಿಧಾನದಿಂದ ಪೂರ್ಣ ದಂತ ಪಡೆದು ಕೋಟಿಗಟ್ಟಲೆ ಸಂಪಾದಿಸುತ್ತಿದ್ದ. ಮೆಚೂರಿಯ ಅಯ್ಯನ್ ದೊರೈ ಅಲಿಯಾಸ್ ಮಾಂಬಟ್ಟಿಯಾನ್ ವೀರಪ್ಪನ್ನನ ಪ್ರೇರಣೆ.

ತಮಿಳುನಾಡಿನ ಸತ್ಯಮಂಗಲದ ದಟ್ಟ ಕಾಡಿನಲ್ಲಿ ಅಡಗಿ ಕುಳಿತು, ಸರ್ಕಾರ ಹಾಗೂ ಸಮಾಜಕ್ಕೆ ಕಂಟಕನಾಗಿದ್ದವನು ವೀರಪ್ಪನ್. 1952ರಲ್ಲಿ ಜನಿಸಿದ್ದ ಕುಖ್ಯಾತ ದಂತಚೋರ ವೀರಪ್ಪನ್ (Veerappan) 2004ರಲ್ಲಿ ಪ್ರಾಣವನ್ನು ಕಳೆದುಕೊಂಡಿದ್ದಾನೆ. ಆದರೆ, ಬದುಕಿರುವಷ್ಟೂ ದಿನಗಳು ಆತ ಮಾಡಿದ ಅಪರಾಧಗಳು, ಕೊಲೆಗಳು, ಆಸ್ತಿಪಾಸ್ತಿ ನಷ್ಟಗಳು ಅಸಂಖ್ಯಾತ. ಡಾ ರಾಜ್‌ಕುಮಾರ್ ಅವರನ್ನು ಅಪಹರಿಸಿ ಕರ್ನಾಟಕ ಸರ್ಕಾರಕ್ಕೆ ಕೂಡ ಒಮ್ಮೆ ಮಹಾ ತಲೆನೋವಾಗಿದ್ದ ವೀರಪ್ಪನ್. 

ಇಂಥ ವೀರಪ್ಪನ ಬಗ್ಗೆ ಒಂದು ಅಚ್ಚರಿಯ ಸಂಗತಿ ಇದೀಗ ಬಹಿರಂಗವಾಗಿದೆ. ಅದೇನು ನೋಡಿ.. ಕುಖ್ಯಾತ ದಂತಚೋರ ವೀರಪ್ಪನ್ ಆನೆಯ ದಂತವನ್ನು ಹೇಗೆ ತೆಗಿತಾ ಇದ್ದ ಆನೆಯ ದವಡೆಯಿಂದ ಅನ್ನೋ ಬಗ್ಗೆ.. ಆ ಮಾಹಿತಿಯನ್ನು ಕೇಳಿದರೆ ಸಾಕು, ನಮಗೆ ಮೈಯಲ್ಲಿ ನಡುಕ ಬರುತ್ತೆ.. ಜೀವಿ ಕಬರಿ ಎಂಬ ಪೊಲೀಸ್ ಠಾಣೆಯ ಅಧಿಕಾರಿಯವರೇ ಸ್ವತಃ ಈ ಬಗ್ಗೆ ಮಾಹಿತಿ ನೀಡಿದ್ದು, ಅದೀಗ ವೈರಲ್ ಅಗಿದೆ. ಸ್ವತಃ ವೀರಪ್ಪನ್ ಈ ಬಗ್ಗೆ ಅವರ ಬಳಿ ಹೇಳಿಕೊಂಡಿದ್ದನಂತೆ. 

ವೀರಪ್ಪನ್‌ಗೂ ಗುರು ಇದ್ನಂತೆ, ಇವ್ನಿಗೆ ಅವ್ನೇ ರೋಲ್‌ ಮಾಡೆಲ್ ಆಗಿದ್ನಂತೆ: ಅಚ್ಚರಿಯಾದ್ರೂ ಸತ್ಯ..!

ಆ ಪ್ರಕಾರ, ಆನೆಗಳನ್ನು ದಂತ ಕದಿಯುವ ಕಾರಣಕ್ಕೆ ಕೊಂದ ಬಳಿಕ, ವೀರಪ್ಪನ್ ಅದರ ದಂತವನ್ನು ಗರಗಸದಿಂದ ಕತ್ತರಿಸಲು ಶುರು ಮಾಡಿದರೆ ಆಗ ಅರ್ಧ ದಂತ ಅದರ ಮುಖದಲ್ಲೇ ಉಳಿದುಬಿಡುತ್ತಿತ್ತು. ಆಗ ಅರ್ಧ ದಂತ ಆತನಿಗೆ ನಷ್ಟ ಆಗಿಬಿಡುತ್ತಿತ್ತು. ಹೀಗಾಗಿ ಸ್ವತಃ ವೀರಪ್ಪನ್ ಆ ಬಗ್ಗೆ ತಾನೇ ಹೊಸ ಆವಿಷ್ಕಾರ ಮಾಡಿದ್ದನಂತೆ. ಆನೆಯನ್ನು ಕೊಂದ ಬಳಿಕ, ಆನೆಯ ಬಾಯಲ್ಲಿ ಸುಣ್ಣದ ಕಲ್ಲನ್ನು ತುರುಕುತ್ತಿದ್ದ. 

ಸುಣ್ಣದ ಕಲ್ಲಿನ ಪ್ರಭಾವಕ್ಕೆ ಒಳಗಾಗಿ ಆನೆಯ ದವಡೆ ಪೂರ್ತಿಯಾಗಿ ಸುಟ್ಟು ಮೃದುವಾಗುತ್ತಿತ್ತು. ಅದರೆ, ಚರ್ಮ ಮಾತ್ರ ಒಂದು ರೀತಿಯಲ್ಲಿ ಸುಡುತ್ತಿತ್ತೇ ಹೊರತೂ ದಂತಕ್ಕೆ ಏನೂ ಆಗುತ್ತಿರಲಿಲ್ಲ. ಅದಾದ ಬಳಿಕ ಸುಮಾರು ಎರಡು ಗಂಟೆಯ ಬಳಿಕ ದಂತವನ್ನು ಹಿಡಿದು ಜೋರಾಗಿ ಎಳೆದರೆ ದಂತ ಪೂರ್ತಿಯಾಗಿ ಒಮ್ಮೆಲೇ ಬರುತ್ತಿತ್ತಂತೆ. ಹೀಗಾಗಿ ಆರಾಮವಾಗಿ ಆನೆಯ ಪೂರ್ತಿ ದಂತವನ್ನು ತೆಗೆದುಕೊಂಡು ಮಾರುತ್ತಿದ್ದ, ಅದರಿಂದ ಕೋಟಿಗಟ್ಟಲೆ ಹಣ ಸಂಪಾದಿಸುತ್ತಿದ್ದ. 

ಸಡನ್ನಾಗಿ ದರ್ಶನ್ 'ಡೆವಿಲ್' ಟೈಟಲ್ ಚೇಂಜ್, ಚಿತ್ರದಿಂದ 'ಹೀರೋ'ನೇ ಮಾಯ ಆಗಿದ್ಯಾಕೆ..?

ವೀರಪ್ಪನ್ ತಾನು ಮಾಡುತ್ತಿದ್ದ ಕೆಟ್ಟ ಕೆಲಸಕ್ಕೆ ಕೂಡ ಒಬ್ಬ ಗುರುಗಳನ್ನು ಆರಾಧಿಸುತ್ತ ಪ್ರೇರಣೆ ಪಡೆದಿದ್ದ ಎನ್ನಲಾಗಿದೆ. 
ವೀರಪ್ಪನ್‌ಗೆ ಕೂಡ ಗುರುಗಳು ಇದ್ರು ಅಂದ್ರೆ ಯಾರೂ ಕೂಡ ನಂಬಲಿಕ್ಕೇ ಅಸಾಧ್ಯ. ತಮಿಳುನಾಡಿನ ಮೆಟ್ಟೂರು ಡ್ಯಾಮ್‌ಗೆ ಹತ್ತಿರ ಇರುವಂಥ ಮೆಚೂರಿ ಗ್ರಾಮದಲ್ಲಿ ಅಯ್ಯನ್ ದೊರೈ ಅಲಿಯಾಸ್ ಮಾಂಬಟ್ಟಿಯಾನ್ ಅನ್ನೋ ವ್ಯಕ್ತಿಯೊಬ್ಬನಿದ್ದ. ಈತನೇ ವೀರಪ್ಪನ್‌ಗೆ ಬಹಳಷ್ಟು ಸ್ಪೂರ್ತಿಯಾಗಿದ್ದನಂತೆ.