Asianet Suvarna News Asianet Suvarna News

22 ವರ್ಷಗಳ ಸಿನಿ ಜರ್ನಿ: ನಟಿ ಅನು ಪ್ರಭಾಕರ್ ಮನದಾಳದ ಮಾತು

ಬಾಲ ಕಲಾವಿದೆಯಿಂದ ಲೀಡ್‌ ರೋಲ್‌ ಮಾಡುವುದು ಒಂದು ದೊಡ್ಡ ಬದಲಾವಣೆ. ಅದ್ಭುತ ಕ್ಷಣಗಳ ಬಗ್ಗೆ ಹಂಚಿಕೊಂಡ ಅನು...

Kannada actress Anu Prabhakar Mukherjee completes 22 years of film journey vcs
Author
Bangalore, First Published Sep 26, 2021, 2:53 PM IST

1999ರಲ್ಲಿ ಬಿಡುಗಡೆಯಾದ 'ಹೃದಯ ಹೃದಯ' (Hrudaya Hrudaya) ಚಿತ್ರದ ಮೂಲಕ ನಾಯಕಿಯಾಗಿ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ ನಟಿ ಅನು ಪ್ರಭಾಕರ್(Anu Prabhakar) ಕೆಲವೇ ದಿನಗಳ ಹಿಂದೆ 22 ವರ್ಷಗಳ ಕಾಲ ಸಿನಿ ಜರ್ನಿ ಪೂರೈಸಿದ್ದಾರೆ. ಕಾಲೇಜು ವಿದ್ಯಾಭ್ಯಾಸವನ್ನು ಅರ್ಧಕ್ಕೆ ನಿಲ್ಲಿಸಿ ಸಂಪೂರ್ಣವಾಗಿ ಅಭಿನಯದಲ್ಲಿ ತೊಡಗಿಸಿಕೊಂಡಿದ್ದ ಅವರು ಈಗಲೂ ಸಿನಿಮಾ ರಂಗದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ. ಹೀಗಿರುವಾಗ ಅನು ಪ್ರಭಾಕರ್ ನಮ್ಮ ಸಿನಿ ಜರ್ನಿ ಬಗ್ಗೆ ಮಾತನಾಡಿದ್ದಾರೆ.

'ನಾನು ಬಾಲ ಕಲಾವಿದೆ ಆಗಿದ್ದರೂ ಪೂರ್ಣ ಪ್ರಮಾಣದ ನಾಯಕಿ ಆಗಿ ಕಾಣಿಸಿಕೊಳ್ಳುವುದು ಡಿಫರೆಂಟ್ ಫೀಲಿಂಗ್.  ನಾನು ಕಾಲೇಜ್ ಸ್ಕಿಪ್ ಮಾಡಬೇಕಿತ್ತು ಹೀಗಾಗಿ ಸ್ನೇಹಿತರನ್ನು ಮಿಸ್ ಮಾಡಿಕೊಳ್ಳುತ್ತಿದ್ದೆ. ಆದರೆ ಸೆಟ್‌ ಜೀವನ ನನಗೆ ಹೊಸದು. ಆರಂಭದ ದಿನಗಳಿಂದಲೂ ನನ್ನ ತಾಯಿ ನನ್ನೊಟ್ಟಿಗರು ಚಿತ್ರೀಕರಣಕ್ಕೆ ಬರುತ್ತಿದ್ದರು. ಶಿವರಾಜ್‌ಕುಮಾರ್(Shivarajkumar) ಅವರನ್ನು ತಬ್ಬಿಕೊಳ್ಳುವುದು, ಮುತ್ತು ಕೊಡುವ ಸೀನ್‌ಗಳು ಇರುತ್ತಿತ್ತು.  ನಾನು ಈ ಸೀನ್ ಮಾಡಲು ಸ್ವಲ್ಪ ಮುಜುಗರಕ್ಕೆ ಒಳಗಾಗಿರುವೆ ಎಂದು ನನ್ನ ಇಡೀ ತಂಡಕ್ಕೆ ತಿಳಿಯಿತು, ಹೀಗಾಗಿ ನಿರ್ದೇಶಕ ರಾಜಶೇಖರ್(RajaShekar) ಅವರಿಗೆ ಹೇಳಿ ಆ ಭಾಗದ ಚಿತ್ರೀಕರಣ ಮುಂದೂಡಿದರು. ಅವರು ಸದಾ ಸಪೋರ್ಟಿವದ ಆಗಿರುತ್ತಿದ್ದರು. ನಾನು ಕಂಡಂತಹ Down to earth ವ್ಯಕ್ತಿ ಅವರು.  ಇದಾದ ನಂತರ ನನ್ನಲ್ಲಿ ಸಣ್ಣ ಪುಟ್ಟ ಬದಲಾವಣೆಗಳು ಆದವು. ಆಕ್ಟಿಂಗ್‌ ಬಗ್ಗೆ ಒಲವು ಹೆಚ್ಚಿತ್ತು ಎರಡು ತಿಂಗಳ ಅವಧಿಯಲ್ಲಿ ಇದೇ ನನ್ನ ಸರಿಯಾದ ದಾರಿ ಎಂದು ಆಯ್ಕೆ ಮಾಡಿಕೊಂಡೆ' ಎಂದು ಅನು ಪ್ರಭಾಕರ್ ಟೈಮ್ಸ್ ಆಫ್ ಇಂಡಿಯಾದಲ್ಲಿ ತಮ್ಮ ಅನುಭವ ಹಂಚಿಕೊಂಡಿದ್ದಾರೆ.

Kannada actress Anu Prabhakar Mukherjee completes 22 years of film journey vcs

'ಹೃದಯ ಹೃದಯ ಬಿಡುಗಡೆ ಆದ ಮರು ದಿನ ಮೆಜೆಸ್ಟಿಕ್(Majestic) ಬಳಿ ಇರುವ ಅಲಂಕಾರ್ ಪ್ಲಾಜ್‌ದಲ್ಲಿದ್ದೆ. ನನ್ನ ಸಿನಿಮಾ ಪಕ್ಕದಲ್ಲಿದ್ದ ಸಂತೋಷ್ ಟಾಕೀಸ್‌ ಪ್ರಸಾರವಾಗುತ್ತಿತ್ತು. ಮೊದಲ ಸಿನಿಮಾ ನಂತರ ಒಂದೆರಡು ಮ್ಯಾಗಜಿನ್ ಹಾಗೂ ಟಿವಿ ಸಂದರ್ಶನ ನೀಡಿರುವೆ. ಅಲ್ಲೇ ಸ್ನೇಹಲೋಕ ಸಿನಿಮಾ ಚಿತ್ರೀಕರಣ ಆರಂಭಿಸಿದೆ. ನನಗೆ ಆಗಲೇ ತಿಳಿದದ್ದು ನಾನು ಜನಪ್ರಿಯತೆ ಪಡೆದಿರುವೆ ಎಂದು. ಆಗ ಸೋಷಿಯಲ್ ಮೀಡಿಯಾಗಳು ಇರುತ್ತಿರಲಿಲ್ಲ. ಪಬ್ಲಿಕ್‌ನಲ್ಲಿ ಸೆಲೆಬ್ರಿಟಿಗಳನ್ನು ಕಂಡರೆ ಜನರು ಸಂತಸ ವ್ಯಕ್ತ ಪಡಿಸುತ್ತಿದ್ದರು. ಅಲ್ಲಿದ್ದ ಅಷ್ಟು ಜನರು ನನ್ನ ಸುತ್ತ ತುಂಬಿಕೊಂಡು ಆಟೋಗ್ರಾಫ್(Autography) ಕೇಳುತ್ತಿದ್ದರು. ಏನ್ ಆಗುತ್ತಿದೆ ಎಂದೇ ಅರ್ಥ ನನಗೆ ಆಗುತ್ತಿರಲಿಲ್ಲ. ಅಷ್ಟು ಜನರ ಪ್ರೀತಿ ಪಡೆಯುವುದಕ್ಕೆ ಸಂತೋಷವಾಗುತ್ತದೆ.  ನಾನು ಕನ್ನಡತಿ ಆಗಿರುವುದರಿಂದ ಜನರು ನಮ್ಮ ಹುಡುಗಿ ಎಂದು ಉದೇಶಿಸಿ ಮಾತನಾಡಿಸುತ್ತಾರೆ' ಎಂದು ಅನು ಮಾತನಾಡಿದ್ದಾರೆ. 

ನಟಿ ಅನುಪ್ರಭಾಕರ್ ಮತ್ತು ರಘು ಮುಖರ್ಜಿ ಈಗ ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನದ ರಾಯಭಾರಿಗಳು!

'ನಾನು ದುಡಿಯುವುದಕ್ಕೆ ಆರಂಭಿಸಿದಾಗ ನನಗೆ 18 ವರ್ಷ. ನನ್ನ ದುಡಿಮೆ ಎಲ್ಲವೂ ತಂದೆ ನೋಡಿಕೊಳ್ಳುತ್ತಿದ್ದರು. ಒಂದು ದಿನ ನನ್ನ ಕಾರ್ ಶೋ ರೂಮ್‌ಗೆ ಕರೆದುಕೊಂಡು ಹೋಗಿ ನನ್ನ ಮೊದಲ ಕಾರ್ ಖರೀದಿಸಿದೆವು. ನನಗೆ ಈಗಲೂ ನೆನಪಿದೆ ರಮೇಶ್ ಅರವಿಂದ್(Ramesh Aravind) ಅವರನ್ನು ಅವತ್ತು ಸೆಟ್‌ನಲ್ಲಿ ಭೇಟಿ ಮಾಡಿದೆ. ಅವರಿಗೂ ತುಂಬಾ ಸಂತೋಷವಾಗಿತ್ತು.  ಓ ಸೂಪರ್ 20 ವರ್ಷಕ್ಕೆ ನಿಮಗೊಂದು ಕಾರಿದೆ ಎಂದು ಹೇಳಿದ್ದರು. ಆಗಲೇ ನನಗೆ ನಾನು ಏನೋ ಸಾಧನೆ ಮಾಡಿದ್ದೀನಿ ಅನಿಸಿದ್ದು. ಆ ಸೆಟ್‌ನಲ್ಲಿದ್ದರೆ ಮನೆ ಫೀಲಿಂಗ್ ಬರುತ್ತಿತ್ತು. ಪ್ರತಿಯೊಬ್ಬರು ಸೆಟ್‌ನಲ್ಲಿ ಕುಳಿತು ಗಂಟೆಗಟ್ಟಲೇ ಮಾತನಾಡುತ್ತಿದ್ದರು. ಆದರೆ ಈಗ ಎಲ್ಲರೂ ತಮ್ಮದೇ ವ್ಯಾನಿಟಿಗೆ(Vanity Van) ಹೋಗುತ್ತಾರೆ. ಇದರಿಂದ ಒಂಥರಾ ಡಿಟ್ಯಾಚ್‌ಮೆಂಟ್ Detachment) ಬರುತ್ತದೆ' ಎಂದಿದ್ದಾರೆ.

Follow Us:
Download App:
  • android
  • ios