Asianet Suvarna News Asianet Suvarna News

ನಟಿ ಅನುಪ್ರಭಾಕರ್ ಮತ್ತು ರಘು ಮುಖರ್ಜಿ ಈಗ ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನದ ರಾಯಭಾರಿಗಳು!

ಮಹತ್ವದ ಕಾರ್ಯಕ್ಕೆ ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನಕ್ಕೆ ಗಾರವಾನ್ವಿತ ರಾಯಭಾರಿಗಳಾದ ಅನು-ರಘು ಮುಖರ್ಜಿ ದಂಪತಿ. 

Celebrity couple Anu and Raghu Mukherjee are honorary ambassadors of Bennerghatta national park vcs
Author
Bangalore, First Published Jun 21, 2021, 5:43 PM IST

ಸ್ಯಾಂಡಲ್‌ವುಡ್‌ ಸೆಲೆಬ್ರಿಟಿ ಕಪಲ್ ರಘು ಮುಖರ್ಜಿ ಮತ್ತು ಅನು ಪ್ರಭಾಕರ್ ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವನಕ್ಕೆ ಗೌರವಾನ್ವಿತ ರಾಯಭಾರಿಗಳಾಗಿದ್ದಾರೆ. ಪ್ರಾಣಿಗಳನ್ನು ದತ್ತು ತೆಗೆದುಕೊಳ್ಳುವುದು ಹೇಗೆ, ಯಾವ ಸ್ಕೀಮ್ ಹೇಗೆ ವರ್ಕ್ ಆಗುತ್ತದೆ ಹಾಗೂ ಮೃಗಾಲಯಗಳನ್ನು ಉಳಿಸುವುದಕ್ಕೆ ಸಾರ್ವಜನಿಕರು ಯಾವ ರೀತಿ ಸಹಕರಿಸಬಹುದು ಎಂಬ ಮಹತ್ವ ಸಾರಲಿದ್ದಾರೆ. 

ಬೆಂಗಳೂರಿನ ಮಖ್ಯ ಅರಣ್ಯ ಸಂರಕ್ಷಣಾಧಾಕಾರಿ ಗೋಕುಲ್ ಅವರ ಜೊತೆ ಮೊದಲಿನಿಂದಲೂ ಈ ದಂಪತಿಗೆ ಒಳ್ಳೆಯ ಸಂಬಂಧವಿದೆ. ಅವರು ಈ ಐಡಿಯಾದೊಂದಿಗೆ ಈ ಜೋಡಿಯನ್ನು ಸಂಪರ್ಕಿಸಿದಾಗ ಸಂತೋಷದಿಂದ ಒಪ್ಪಿಕೊಂಡಿದ್ದಾರೆ. 'ನಮ್ಮಂತೆ ಪ್ರಾಣಿಗಳು ಸಂಕಷ್ಟ ಎದುರಿಸುತ್ತಿವೆ. ಝೋಗಳಿಗೆ ಆದಾಯದ ಅಗತ್ಯವಿದೆ. ಮೃಗಾಲಯಕ್ಕೆ ಬರುವ ಜನರ ಟಿಕೆಟ್ ಹಣದಿಂದ ಅಲ್ಲಿ ಕೆಲಸ ಮಾಡುವ 350 ಜನರಿಗೆ ಹಾಗೂ ಪ್ರಾಣಿಗಳ ಆಹಾರಕ್ಕೆ ನೀಡಲಾಗುತ್ತದೆ. ನಮ್ಮ ಬನ್ನೇರುಘಟ್ಟ ಉದ್ಯಾನಕ್ಕೆ 1 ತಿಂಗಳಿಗೆ 1 ಕೋಟಿ ಹಣ ಬೇಕಾಗುತ್ತದೆ.  ನಾವು ಗೌರವ ರಾಯಭಾರಿಗಳಾಗಿ ಮೃಗಾಲಯವನ್ನು ಉಳಿಸಲು ಆರ್ಥಿಕ ಸಹಾಯ ಮಾಡುವಂತೆ ಮನವಿ ಮಾಡುತ್ತೇವೆ. ಜನರು ನೀಡುವ ಹಣದಿಂದ ಸಂಶೋಧನಾ ಕೆಲಸಗಳು ಕೂಡ ಮಾಡಲಾಗುತ್ತದೆ,' ಎಂದು ರಘು ಮುಖರ್ಜಿ ಟೈಮ್ಸ್ ಆಫ್ ಇಂಡಿಯಾಗೆ ನೀಡಿದ ಸಂದರ್ಶನದಲ್ಲಿ ಮಾಹಿತಿ ನೀಡಿದ್ದಾರೆ.

ಆರ್ಥಿಕ ಸಂಕಷ್ಟದಲ್ಲಿದ್ದ Zooಗಳಿಗೆ ಬೆನ್ನೆಲುಬಾಗಿ ನಿಂತ ದರ್ಶನ್! 

ಬನ್ನೇರುಘಟ್ಟ ಉದ್ಯಾನ ಬೆಂಗಳೂರಿನ ಹತ್ತಿರದಲ್ಲಿ ಇರುವ ಕಾರಣ ಅದನ್ನು ಜಾಗತಿಕ ಮಟ್ಟದಲ್ಲಿ ಹೆಸರವಾಸಿಯಾಗುವಂತೆ ಮಾಡಬೇಕು. ಇದಕ್ಕೆ ಬೇಕಾದ ಪ್ಲ್ಯಾನ್‌ಗಳನ್ನು ಅನು ಮತ್ತು ರಘು ಮಾಡುತ್ತಿದ್ದಾರೆ.

ನಟ ದರ್ಶನ್ ಕೂಡ ಮೃಗಾಲಯಗಳನ್ನು ಕಾಪಾಡಲು ದೇಣಿಗೆ ಸಂಗ್ರಹಕ್ಕೆ ಮುಂದಾಗಿದ್ದರು. ಕರ್ನಾಟಕದಲ್ಲಿರುವ ಒಟ್ಟು 9 ಮೃಗಾಲಯಗಳ ಪ್ರಾಣಿ- ಪಕ್ಷಿಗಳನ್ನು ಜನ ಸಾಮಾನ್ಯರು ಹಾಗೂ ಗಣ್ಯರು ದತ್ತು ತೆಗೆದುಕೊಂಡಿದ್ದಾರೆ. ಇದರಿಂದ 1 ಕೋಟಿಗೂ ಹೆಚ್ಚು ಹಣ ಸಂಗ್ರಹಿಸಿದ್ದಾರೆ ಎನ್ನಲಾಗಿದೆ.

Follow Us:
Download App:
  • android
  • ios