ಕೆಲವು ದಿನಗಳ ಹಿಂದೆ ನಡೆದ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಫಿಲ್ಮ್ ಸಿಟಿ ನಿರ್ಮಾಣವಾಗಬೇಕೆಂದು ಸಿಎಂ ಯಡಿಯೂರಪ್ಪ ಅವರಲ್ಲಿ ಯಶ್ ಮನವಿ ಮಾಡಿಕೊಂಡಿದ್ದರು. ಇದಕ್ಕೆ ಪ್ರತಿಕ್ರಿಯೆ ನೀಡಿದ ಸಿಎಂ 'ಅಸ್ತು' ಎಂದಿದ್ದರು. ಕೊಟ್ಟ ಮಾತನಂತೆ ಮಾರ್ಚ್ 5 ರಂದು ಮಂಡನೆಯಾದ ಬಜೆಟ್‌ನಲ್ಲಿ ಸಿಎಂ ಅನುದಾನವನ್ನೂ ಮೀಸಲಿಟ್ಟಿದ್ದಾರೆ. 

ಸುಮಾರು 1 ಗಂಟೆ 40 ನಿಮಿಷಗಳ ಕಾಲ ಬಜೆಟ್ ಮಂಡಿಸಿದ ಸಿಎಂ, ಫಿಲ್ಮ್‌ ಸಿಟಿ ನಿರ್ಮಿಸಲು 500 ಕೋಟಿ ರೂ. ಅನುದಾನ ನೀಡಿದ್ದಾರೆ ವಿತ್ತ ಇಲಾಖೆಯ ಹೊಣೆ ಹೊತ್ತಿರುವ ಯಡಿಯೂರಪ್ಪ. ಇದರ ಬಗ್ಗೆ ರಾಕಿಂಗ್ ಸ್ಟಾರ್ ಯಶ್ ಸಂತೋಷ ವ್ಯಕ್ತಪಡಿಸಿದ್ದಾರೆ.

ಕೆಜಿಎಫ್‌ 2 ಯಾವಾಗ? ಕೊನೆಗೂ ಗುಟ್ಟು ಬಿಟ್ಟುಕೊಟ್ಟ ರಾಕಿ ಭಾಯ್ !

'ನಮ್ಮಲ್ಲಿ ವ್ಯವಸ್ಥೆ ಚೆನ್ನಾಗಿದ್ದರೆ, ನಟನೆ ಹಾಗೂ ಸಿನಿಮಾ ತಂತ್ರಜ್ಞಾನ ಕಲಿಯಲು ಅವಕಾಶ ಸಿಗುತ್ತದೆ. ಚಿತ್ರಗಳನ್ನು ವಂಡರ್‌ಫುಲ್ ಆಗಿ ನಿರ್ಮಿಸಲು ಸಾಧ್ಯವಾಗುತ್ತದೆ. ಮುಖ್ಯವಾಗಿ ಸಿನಿಮಾ ಎಜುಕೇಷನ್‌ ಅಗತ್ಯವಿದ್ದು, ಇದನ್ನು ಫಿಲ್ಮ್ ಸಿಟಿ ಮೂಲಕ ತುಂಬಿಕೊಳ್ಳಬಹುದು. ಸೃಜನಶೀಲತೆ ಇರೋರಿಗೆ ಸಿನಿಮಾ ಒಳ್ಳೆಯ ಅವಕಾಶಗಳನ್ನು ನೀಡುತ್ತವೆ. ಸರಕಾರ ಕೈ ಜೋಡಿಸಬೇಕು. ಫಿಲ್ಮ್‌ ಸಿಟಿ ಕಾರ್ಯರೂಪಕ್ಕೆ ಬರಬೇಕು' ಎಂದು ಮಾತನಾಡಿದ್ದಾರೆ.

'ವೈಯಕ್ತಿಕವಾಗಿ ಹೇಳುವುದಾದರೆ, ಮೈಸೂರಿನಲ್ಲಿ ಫಿಲ್ಮ್‌ ಸಿಟಿ ಆದರೊಳ್ಳೆಯದು. ಅಲ್ಲಿ ಜನಸಂಖ್ಯೆ ಕಡಿಮೆ ಹಾಗೂ ಟ್ರಾಫಿಕ್‌ ಸಮಸ್ಯೆಯೂ ಇಲ್ಲ. ಮೈಸೂರಿನಲ್ಲಿ ಚಿತ್ರ ನಿರ್ಮಾಣಕ್ಕೆ ಪೂರಕ ವಾತಾವರಣವಿದೆ. ಆದರೆ, ಇದು ಎಲ್ಲಿಯೇ ಆಗಲಿ, ರಾಜ್ಯಕ್ಕೆ ಫಿಲ್ಮ್‌ ಸಿಟಿ ಬೇಕು,' ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಉಪ ಮುಖ್ಯಮಂತ್ರಿ ಅಶ್ವತ್ಥ್‌ ನಾಯಾಯಣ್‌ ಫಿಲ್ಮ್‌ ಸಿಟಿಯನ್ನು ಬೆಂಗಳೂರಿನ ಹೊರವಲಯದ ಹೆಸರುಘಟ್ಟದಲ್ಲಿ ನಿರ್ಮಿಸುವುದಾಗಿ ಹೇಳಿದ್ದಾರೆ. ಅದಕ್ಕೆ ಪ್ರತಿಕ್ರಿಯೆ ನೀಡಿರುವ ಯಶ್ 'ಹೆಸರುಘಟ್ಟದಲ್ಲಾದರೆ ಟ್ರಾಫಿಕ್ ಸಮಸ್ಯೆ ಹೆಚ್ಚಾಗುತ್ತೆದೆ. ಅಲ್ಲಿ ಆಗಬೇಕೆಂದರೆ ನೇರ ರಸ್ತೆ ಸಂಪರ್ಕ ಕಲ್ಪಿಸಬೇಕು. ಇದು ನನ್ನ ಅಭಿಪ್ರಯವಷ್ಟೇ. ಇದರ ಬಗ್ಗೆ ಚಿತ್ರರಂಗದಲ್ಲಿರುವ ಹಿರಿಯರೆಲ್ಲರೂ ಡಿಸೈಡ್‌ ಮಾಡಿ ನಿರ್ಧರಿಸಲಿ. ಆದರೆ ಚಿತ್ರರಂಗದ ಪರವಾಗಿ ನಾನು ಧನ್ಯವಾದ ಅರ್ಪಿಸುತ್ತೇನೆ,' ಎಂದು ಹೇಳಿದ್ದಾರೆ.