ಕರುಳಿನ ಸಮಸ್ಯೆಯಿಂದ ಆಸ್ಪತ್ರೆಗೆ ದಾಖಲಾದ ವಿನೋದ್ ರಾಜ್. ದಿಢೀರ್‌ ಆಪರೇಷನ್‌ ಮಾಡಲಾಗಿದೆ.....

ಕನ್ನಡ ಚಿತ್ರರಂಗದ ಸರಳ ನಟ ವಿನೋದ್‌ ರಾಜ್‌ ಅನಾರೋಗ್ಯದಿಂದ ನೆಲಮಂಗಲದಲ್ಲಿರುವ ಇರುವ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ವೈದ್ಯರ ಚಿಕಿತ್ಸೆ ಮೇಲೆ ಕರುಳಿನ ಸಮಸ್ಯೆ ಎಂದು ತಿಳಿದು ಬಂದಿದೆ. ಮೂಲಗಳಿಂದ ಬಂದಿರುವ ಮಾಹಿತಿ ಪ್ರಕಾರ ಸದ್ಯ ವಿನೋದ್‌ ರಾಜ್‌ ಅವರಿಗೆ ಕರುಳಿನ ಆಪರೇಷನ್ ಮಾಡಲಾಗಿದೆ. 

59 ವರ್ಷದ ವಿನೋದ್‌ ರಾಜ್‌ ಹಲವು ವರ್ಷಗಳಿಂದ ನೆಲಮಂಗಲದಲ್ಲಿರುವ ತಮ್ಮ ತೋಟದ ಮನೆಯಲ್ಲಿ ವಾಸಿಸುತ್ತಿದ್ದರು. ಸಿನಿಮಾ ಕ್ಷೇತ್ರಕ್ಕೆ ಗುಡ್‌ ಬೈ ಹೇಳಿ ತಮ್ಮ ತೋಟ ಹಾಗೂ ಜನರ ಸೇವೆಯಲ್ಲಿ ತೊಡಗಿಸಿಕೊಂಡಿದ್ದರು. ಕೆಲವು ತಿಂಗಳ ಹಿಂದೆ ತಾಯಿ ಹಿರಿಯ ನಟಿ ಲೀಲಾವತಿ ಅಗಲಿದರು. ಆ ನೋವಿನಲ್ಲಿದ್ದ ವಿನೋರಾಜ್‌ ತಾಯಿಯ ಸಮಾಧಿಯನ್ನು ನಿರ್ಮಾಣ ಮಾಡುತ್ತಿದ್ದರು. 

ವಿನೋದ್ ರಾಜ್ ಪತ್ನಿ ಅನುಗೆ ಚೆನ್ನೈನಲ್ಲಿದೆ ಭಾರೀ ಗಿಫ್ಟ್; ಲೀಲಾವತಿ ಮಗ ಕೊಟ್ಟಿದ್ದೇನು ನೋಡ್ರಿ

ವಿನೋದ್ ರಾಜ್ ಹೆಂಡತಿಯ ಹೆಸರು ಅನು ಹಾಗೂ ಮಗನ ಹೆಸರು ಯುವರಾಜ್‌. ಮಗ ಯುವರಾಜ್ ಚೆನ್ನೈನಲ್ಲಿ ಎಂಜಿನಿಯರಿಂಗ್ ಓದುತ್ತಿದ್ದು, ತಾಯಿಯೊಂದಿಗೆ ಆಗಾಗ ಬೆಂಗಳೂರಿನ ನೆಲಮಂಗಲದ ಮನೆಗೆ ಬಂದು ಹೋಗುತ್ತಿರುತ್ತಾರೆ. ವಿನೋದ್ ರಾಜ್‌ ಅಮ್ಮ, ಕನ್ನಡದ ಹಿರಿಯ ನಟಿ ಲೀಲಾವತಿ ಅಗಲಿದಾಗ ಸಹಜವಾಗಿಯೇ ವಿನೋದ್ ರಾಜ್ ಹೆಂಡತಿ ಹಾಗು ಮಗ ಬಂದಿದ್ದರು.