ಕನ್ನಡ ಚಿತ್ರರಂಗದ ಅದ್ಭುತ ಯುವ ಕಲಾವಿದ, ನಿರೂಪಕ ವಿನಾಯಕ್‌ ಜೋಶಿ ಹಾಗೂ ಬಾಲ್ಯದ ಗೆಳತಿ ಬ್ಯಾಡ್ಮಿಂಟನ್‌ ಆಟಗಾರ್ತಿ ವರ್ಷ ಬೆಳವಾಡಿ ಇಂದು (ಆಗಸ್ಟ್‌ 28) ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಶಾಸ್ತ್ರೋಕ್ತವಾಗಿ ನಡೆದ ಮದುವೆಯಲ್ಲಿ ಆಪ್ತ ಗೆಳೆಯರು ಹಾಗೂ ಕುಟುಂಬಸ್ಥರು ಮಾತ್ರ ಭಾಗಿಯಾಗಿದ್ದರು.

ಖ್ಯಾತ ಬ್ಯಾಡ್ಮಿಂಟನ್ ತಾರೆ ವರ್ಷಾ ಬೆಳವಾಡಿ ಜತೆ ನಟ ವಿನಾಯಕ್ ಜೋಶಿ ಮದುವೆ ಫಿಕ್ಸ್ !

ಬೆಂಗಳೂರಿನ ದೇವಸ್ಥಾನವೊಂದರಲ್ಲಿ ಬೆಳಗ್ಗೆ 8.45 ರಿಂದ 9.45 ಧಾರೆ ಮುಹೂರ್ತವಿತ್ತು. ಸಮಾರಂಭದಲ್ಲಿ ಭಾಗಿಯಾಗಿದ್ದ ಕೆಲವೇ ಕೆಲವು ಆಪ್ತರೊಟ್ಟಿಗೆ ಫೋಟೋ ಶೂಟ್‌ ಸಹ ಮಾಡಲಾಗಿದೆ. ಕೊರೋನಾ ವೈರಸ್‌ನಿಂದ ಜಾರಿಗೆ ಬಂದಿರುವ ನಿಯಮದ ಪ್ರಕಾರ ವಿವಾಹ ಕಾರ್ಯಕ್ರಮಕ್ಕೆ ಹೆಚ್ಚು ಜನರು ಆಗಮಿಸಲು ಅವಕಾಶವಿಲ್ಲದ ಕಾರಣ, ಮದುವೆ ವೀಕ್ಷಿಸಲು ಸೋಷಿಯಲ್ ಮೀಡಿಯಾ ಮೂಲಕ ಲೈವ್ ಕೊಡಲಾಗಿತ್ತು. 

ರಾಷ್ಟ್ರ ಮಟ್ಟದ ಬ್ಯಾಡ್ಮಿಂಟನ್‌ ಆಟಗಾರ್ತಿ ವರ್ಷ ಬೆಳವಾಡಿ ಹಾಗೂ ವಿನಾಯಕ್‌ ಬಾಲ್ಯದ ಗೆಳೆಯರು. ಇಬ್ಬರು ಒಟ್ಟಾಗಿ 7 ವರ್ಷವಿದ್ದಾಗ ಡ್ಯಾನ್ಸ್‌ವೊಂದನ್ನು ಮಾಡಿದ್ದರಂತೆ. ಅದಾದ 25 ವರ್ಷದ ಬಳಿಕೆ ಕಾಮನ್ ಫ್ರೆಂಡ್ಸ್ ಮೂಲಕ ಮತ್ತೆ ಮೀಟ್ ಆಗಿ, ಸ್ನೇಹ ಮುಂದುವರಿಸಿದ್ದರು. ನಂತರ ಪ್ರೀತಿ ಅಂಕುರಿಸಿ, ಇದೀಗ ಈ ಜೋಡಿ ದಾಂಪತ್ಯಕ್ಕೆ ಕಾಲಿಟ್ಟಿದೆ.

ಬ್ಯಾಚುಲರ್ ಲೈಫ್‌ಗೆ ಬೈ; ನಟ ವಿನಾಯಕ್‌ ಜೋಶಿ ಸಂಗಾತಿ ಇವರೇ!

ನಮ್ಮೂರ ಮಂದಾರ ಹೂವೇ ಚಿತ್ರದಲ್ಲಿ ಬಾಲ ನಟನಾಗಿ ಅಭಿನಯಿಸಿ, ಎಲ್ಲರ ಗಮನ ಸೆಳೆದ ವಿನಾಯಕ್ ಜೋಶಿ ಅನೇಕ ಕನ್ನಡ ಹಾಗೂ ತಮಿಳು ಚಿತ್ರಗಳಲ್ಲಿ ನಟಿಸಿದ್ದಾರೆ. ಅಲ್ಲದೇ ಬಿಗ್‌ಬಾಸ್‌ನಲ್ಲಿಯೂ ಸ್ಪರ್ಧಿಯಾಗಿದ್ದರು. ತಮ್ಮ ವಾಕ್ಚತುರ್ಯದಿಂದ ನಿರೂಪಕರಾಗಿಯೂ ಜೋಶಿ ಕನ್ನಡಿಗರ ಮನ ಗೆದ್ದಿದ್ದಾರೆ. ಇನ್ನು ವರ್ಷಾ ವಿಶ್ವದಲ್ಲೇ ಬ್ಯಾಡ್ಮಿಂಟನ್‌ ಕಾಂಪಿಟೇಟಿವ್‌ ಟೂರ್ನಮೆಂಟ್‌ನಲ್ಲಿ 120ನೇ Rank ಪಡೆದುಕೊಂಡಿದ್ದಾರೆ.

ಈ ನವ ಜೋಡಿಗೆ ಶುಭವಾಗಲಿ. ದಾಂಪತ್ಯ ಜೀವನ ಸುಖವಾಗಿರಲಿ ಎಂದು ಸುವರ್ಣ ನ್ಯೂಸ್.ಕಾಮ್ ಸಹ ಹಾರೈಸುತ್ತದೆ.