ಸೈಬರ್ ಕ್ರೈಂ ಕುರಿತು ವಿಜಯ ರಾಘವೇಂದ್ರ ಹೊಸ ಸಿನಿಮಾ ಗ್ರೇ ಗೇಮ್ಸ್
- ವಿಜಯ ರಾಘವೇಂದ್ರ ನಟನೆಯ ಹೊಸ ಚಿತ್ರ ‘ಗ್ರೇ ಗೇಮ್ಸ್’
- ಡಾ.ರಾಜ್ ಕುಟುಂಬದ ನಾಲ್ಕನೇ ತಲೆಮಾರಿನ ನಟ ಜೈ ಮುಖ್ಯಪಾತ್ರದಲ್ಲಿ
ಸೈಬರ್ ಕ್ರೈಮ್ (Cyber Crime) ಕಥಾಹಂದರದಲ್ಲಿ ವಿಜಯ ರಾಘವೇಂದ್ರ ನಟನೆಯ ಹೊಸ ಚಿತ್ರ ‘ಗ್ರೇ ಗೇಮ್ಸ್’. ಹಿಂದೆ ಆಯನ ಚಿತ್ರ ನಿರ್ದೇಶಿಸಿದ್ದ ಗಂಗಾಧರ್ ಸಾಲಿಮಠ್ ಈ ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳಿದ್ದಾರೆ. ಭಾವನಾ(Bhavana) ಚಿತ್ರದ ನಾಯಕಿ. ಡಾ.ರಾಜ್ ಕುಟುಂಬದ ನಾಲ್ಕನೇ ತಲೆಮಾರಿನ ನಟ ಜೈ ಮುಖ್ಯಪಾತ್ರದಲ್ಲಿ ನಟಿಸಿದ್ದಾರೆ. ಶ್ರೀಮುರಳಿ ಅವರು ಕ್ಲಾಪ್ ಮಾಡುವ ಮೂಲಕ ಚಿತ್ರತಂಡಕ್ಕೆ ಶುಭ ಕೋರಿದರು.
ಮುಹೂರ್ತದ ಬಳಿಕ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ವಿಜಯ ರಾಘವೇಂದ್ರ, ‘ಇದರಲ್ಲಿ ಸೈಕಾಲಜಿಸ್ಟ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದೇನೆ. ಸೈಬರ್ ಜಗತ್ತು ನಮ್ಮನ್ನಾಳುವ ಈ ಕಾಲವಿದು. ಯುವಕರು ಅದಕ್ಕೆ ಬಲಿಬಿದ್ದಾಗ ಅವರು ಮಾತ್ರವಲ್ಲ, ಪೋಷಕರು, ಇಡೀ ಕುಟುಂಬ, ಸಮಾಜ ಅದರ ಪರಿಣಾಮ ಎದುರಿಸುತ್ತದೆ. ಅದನ್ನು ಈ ಸಿನಿಮಾದಲ್ಲಿ ಹೇಳಿದ್ದೇವೆ. ಸೈಬರ್ ಗೇಮ್ ಜಾಲಕ್ಕೆ ಸಿಲುಕುವ 20ರ ಹರೆಯದ ಹುಡುಗನ ಪಾತ್ರದಲ್ಲಿ ನನ್ನ ಅಕ್ಕನ ಮಗ ಜೈ ನಟಿಸಿದ್ದಾನೆ’ ಎಂದರು.
ಜಾಕಿ ಧರಿಸಿದ ಇಷ್ಟು ಚಿಕ್ಕ ಡ್ರೆಸ್‌ಗೆ ಬರೋಬ್ಬರಿ 3 ಲಕ್ಷ..! ಡ್ರೆಸ್ ಹೇಗಿದೆ ನೋಡಿ
ನಾಯಕಿ ಭಾವನಾ, ‘ಸೈಬರ್ ಕ್ರೈಮ್ ಇನ್‌ವೆಸ್ಟಿಗೇಶನ್ ಮಾಡುವ ಟಫ್ ಪೊಲೀಸ್ ಆಫೀಸರ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದೇನೆ. ರಾಘವೇಂದ್ರ ರಾಜ್‌ಕುಮಾರ್ ಜೊತೆ ಸಾಕಷ್ಟುಸಿನಿಮಾ ಮಾಡೋದು ಅಂತಾಗಿ ಕೊನೇ ಕ್ಷಣಕ್ಕೆ ಮಿಸ್ ಆಗಿತ್ತು. ಇದೀಗ ಮತ್ತೆ ಅವರೊಂದಿಗೆ ನಟಿಸೋದು ಖುಷಿ ಕೊಟ್ಟಿದೆ’ ಎಂದು ಹೇಳಿದರು.
ನಿರ್ದೇಶಕ ಗಂಗಾಧರ್ ಸಾಲಿಮಠ್ ಮಾತನಾಡಿ, ‘ಇದು ಸೈಬರ್ ಕ್ರೈಮ್ ಕತೆಯುಳ್ಳ ಚಿತ್ರವಾದರೂ ಫ್ಯಾಮಿಲಿ ಡ್ರಾಮಾ ಥರದ ಕತೆ ಇದೆ. ಯುವ ಜನಾಂಗದ ದಿಕ್ಕುತಪ್ಪಿಸುತ್ತಿರುವ ಸೈಬರ್ ಗೇಮ್ಸ್ ಕತೆ ಇದೆ’ ಎಂದರು.
ಚಿತ್ರಕ್ಕೆ ಧ್ರುವ ಸರ್ಜಾ ಸಂಭಾವನೆ ಎಷ್ಟು ?
ನಿರ್ಮಾಪಕ ಆನಂದ್ ಎಚ್ ಮುಗದ್, ನಟಿ ಅಪರ್ಣಾ, ಹಿರಿಯ ಪೊಲೀಸ್ ಅಧಿಕಾರಿ ಬಿ ಕೆ ಶಿವರಾಮ್, ಹಿರಿಯ ನಿರ್ಮಾಪಕ ಚಿನ್ನೇಗೌಡ, ಸಿನಿಮಟೋಗ್ರಾಫರ್ ವರುಣ್ ಮತ್ತಿತರರು ಉಪಸ್ಥಿತರಿದ್ದರು. ಇಂದಿನಿಂದ ಬೆಂಗಳೂರು ಆಸುಪಾಸಿನಲ್ಲಿ ಚಿತ್ರೀಕರಣ ನಡೆಯಲಿದೆ.