ನಟ ಹಾಗೂ ಗಾಯಕನಾಗಿ ಕನ್ನಡ ಚಿತ್ರರಂಗದಲ್ಲಿ ಮಿಂಚುತ್ತಿರುವ ವಸಿಷ್ಠ ಸಿಂಹ ಈಗ ತೆಲುಗು ಚಿತ್ರರಂಗಕ್ಕೆ ಪಾದಾರ್ಪಣೆ ಮಾಡುತ್ತಿದ್ದಾರೆ. 'ಒಡೆಲಾ ರೈಲ್ವೇ ಸ್ಟೇಷನ್‌' ಎಂಬ ಶೀರ್ಷಿಕೆ ಇರುವ ಈ ಚಿತ್ರದಲ್ಲಿ ಸಿಂಹ ಇಬ್ಬರು ನಟಿಯರೊಂದಿಗೆ ಕಾಣಿಸಿಕೊಳ್ಳಲಿದ್ದಾರೆ.

'ಒಡೆಲಾ ರೈಲ್ವೇ ಸ್ಟೇಷನ್‌' ನೈಜ ಘಟನೆ ಆಧಾರಿತ ಸಿನಿಮಾ ಆಗಿದ್ದು, ಕಥೆ ಕೇಳಿದ ಕೂಡಲೇ ಸಿನಿಮಾದಲ್ಲಿ ನಟಿಸಲು ಒಪ್ಪಿಕೊಂಡರಂತೆ. ಮಾಸ್‌ ಲುಕ್‌ ಇದ್ದರೂ, ಕ್ಯೂಟ್‌ ಆಗಿ ಕಾಣಿಸುವ ವಸಿಷ್ಠ ಅವರಿಗೆ ತೆಲುಗು ಹಾಗೂ ತಮಿಳು ಚಿತ್ರರಂಗದಲ್ಲಿ ಸಿಕ್ಕಾಪಟ್ಟೆ ಬೇಡಿಕೆ ಇದೆ. 

ವಸಿಷ್ಠ ಸಿಂಹನ ಕಾಲಚಕ್ರದ ಹಾಡು;ಕೈಲಾಶ್‌ ಕೇರ್‌ ಹಾಡಿನ ಹಂಗಾಮ! 

ಪೋಸ್ಟರ್‌ ಲುಕ್‌ ಮೂಲಕ ಸಿನಿಮಾ ಅನೌನ್ಸ್ ಮಾಡಿರುವ ವಸಿಷ್ಠ ಅವರಿಗೆ ಅಭಿಮಾನಿಗಳು ಸಾಥ್ ನೀಡಿದ್ದಾರೆ. ಕಾಮೆಂಟ್‌ನಲ್ಲಿ ಅಭಿಮಾನಿಗಳು ತೆಲುಗು ಡೆಬ್ಯುಗೆ ಶುಭಾಶಯಗಳನ್ನು ಕೋರುತ್ತಿದ್ದಾರೆ. 'ನನ್ನ ಮೊದಲ ತೆಲುಗು ಡೆಬ್ಯು ಸಿನಿಮಾ ಇದು. 'ಒಡೆಲಾ ರೈಲ್ವೇ ಸ್ಟೇಷನ್‌' ಎಂದು. ಶ್ರೀಸತ್ಯ, ರಾಧಾ ಮೋಹನ್‌ ಗಾರು, ಸಂಪತ್ ಗಾರು ಹಾಗೂ ಟೀಂ ಜೊತೆ ಕೆಲಸ ಮಾಡುವುದಕ್ಕೆ ಸಂತೋಷವಾಗುತ್ತಿದೆ. ಅಶೋಕ್ ತೇಜ್ ನಿರ್ದೇಶನದ ಈ ಚಿತ್ರದಲ್ಲಿ ಹೆಬ್ಬಾ ಪಾಟೇಲ್‌ ಮತ್ತು ಪೂಜಿತಾ ಅಭಿನಯಿಸುತ್ತಿದ್ದಾರೆ. ಬರುವ ದಿನಗಳಲ್ಲಿ ಹೆಚ್ಚನ ಮಾಹಿತಿ ನೀಡುತ್ತೇನೆ,' ಎಂದು ವಸಿಷ್ಠ ಇನ್‌ಸ್ಟಾಗ್ರಾಂನಲ್ಲಿ ಪೋಸ್ಟ್ ಶೇರ್ ಮಾಡಿ ಕೊಂಡಿದ್ದಾರೆ.

"