Asianet Suvarna News Asianet Suvarna News

ಇದ್ದಕ್ಕಿದ್ದಂತೆ 'ಮ್ಯಾಕ್ಸ್‌' ಶೂಟಿಂಗ್ ನಿಂತಿದ್ದಕ್ಕೆ ಕಾರಣ ಬಿಚ್ಚಿಟ್ಟ ಸುದೀಪ್; ಅಪ್ಡೇಟ್‌ ನೋಡಿ ಫ್ಯಾನ್ಸ್‌ ಖುಷ್!

ಪದೇ ಪದೇ ಮಾಹಿತಿ ಕೇಳುತ್ತಿದ್ದ ಅಭಿಮಾನಿಗಳಿಗೆ ಸಿಹಿ ಸುದ್ದಿ ಕೊಟ್ಟ ಕಿಚ್ಚ ಸುದೀಪ್. ಮ್ಯಾನ್ಸ್‌ ಸಿನಿಮಾ ಶೀಘ್ರದಲ್ಲಿ....

Kannada actor Sudeep begins Max film shooting and gives update to fans vcs
Author
First Published Jan 16, 2024, 9:49 AM IST | Last Updated Jan 16, 2024, 9:49 AM IST

ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಮ್ಯಾಕ್ಸ್‌ ಚಿತ್ರದ ಬಗ್ಗೆ ಅಭಿಮಾನಿಗಳಿಗೆ ಕ್ಯೂರಿಯಾಸಿಟಿ ಹೆಚ್ಚಿದೆ. ಬಿಗ್ ಬಾಸ್ ರಿಯಾಲಿಟಿ ಶೋನಲ್ಲಿ ನೋಡುತ್ತಿದ್ದೀವಿ ಕೆಸಿಸಿ ಕ್ರಿಕೆಟ್ ಪಂದ್ಯಾವಳಿಗಳಲ್ಲಿ ನೋಡಿದ್ದೀವಿ ಆದರೆ ಸಿನಿಮಾ ಯಾವಾಗ? ಸಿನಿಮಾ ರಿಲೀಸ್ ಆಗಿ ತುಂಬಾ ದಿನವಾಯ್ತು....ಫ್ಲೀಸ್ ಮಾಹಿತಿ ಕೊಡಿ ಎಂದು ಫ್ಯಾನ್ಸ್‌ ಕ್ಲಬ್‌ಗಳಲ್ಲಿ ಮನವಿ ಮಾಡಿಕೊಂಡಿದ್ದರು. ಹೀಗಾಗಿ ಟ್ವೀಟ್ ಮಾಡುವ ಮೂಲಕ ಪ್ರತಿಕ್ರಿಯೆ ನೀಡಿದ್ದಾರೆ.

'ಮ್ಯಾಕ್ಸ್‌ ಚಿತ್ರದ ಬಗ್ಗೆ ಮಾಹಿತಿ ನೀಡಿ ಎಂದು ಎಲ್ಲರೂ ಪದೇ ಪದೇ ಕೇಳುತ್ತಿದ್ದೀರಿ. ಚಿತ್ರೀಕರಣ ನಡೆಯುತ್ತಿದೆ, ಅಪ್ಡೇಟ್ ನೀಡಲೇ ಬೇಕು ಅನ್ನೋ ಕಾರಣಕ್ಕೆ ಸುಮ್ಮನೆ ಏನೆಂದು ಅಪ್ಡೇಟ್ ನೀಡಬೇಕು? ಚಿತ್ರೀಕರಣ ನಡೆಯುತ್ತಿದೆ, ಕಥೆಗೆ ಅಗತ್ಯವಿರುವ ಸಮಯ ತೆಗೆದುಕೊಳ್ಳುತ್ತಿದೆ. ಅಭಿಮಾನಿಗಳು ಮತ್ತು ಸ್ನೇಹಿತರು ಪ್ರೀತಿ ಮತ್ತು ಕ್ಯೂರಿಯಾಸಿಟಿಯನ್ನು ಚಿತ್ರತಂಡ ಅರ್ಥ ಮಾಡಿಕೊಳ್ಳುತ್ತಿದೆ. ಸಿನಿಮಾ ಕಂಪ್ಲೀಟ್ ಆಗದ ಕಾರಣ ಏನೆಂದು ಅಪ್ಡೇಟ್ ನೀಡಬಹುದು? ನವೆಂಬರ್‌ ತಿಂಗಳ ಮಳೆ ಅಬ್ಬರಕ್ಕೆ ಕೆಲವು ವಾರಗಳು ಮಿಸ್ ಆಯ್ತು...ಅಲ್ಲದೆ ಮಳೆ ಪರಿಣಾಮಕ್ಕೆ ಡಿಸೆಂಬರ್ ತಿಂಗಳಿನಲ್ಲೂ ಚಿತ್ರೀಕರಣ ಮಿಸ್ ಆಗಿದೆ. ಖುಷಿ ವಿಚಾರ ಏನೆಂದರೆ ಸಿನಿಮಾ ಚಿತ್ರೀಕರಣ ಸ್ಮೂಟ್ ಆಗಿ ನಡೆಯುತ್ತಿದೆ. ರೆಡಿಯಾದ ಮೇಲೆ ಮಾಹಿತಿಯನ್ನು ನೀಡಲು ಚಿತ್ರ ತಂಡ ಯೋಚಿಸುವುದಿಲ್ಲ. ಅಲ್ಲಿವರೆಗೂ ನನ್ನಿಂದ ನಿಮಗೆ ಬಿಗ್ ಹಗ್' ಎಂದು ಕಿಚ್ಚ ಸುದೀಪ್ ಟ್ವೀಟ್ ಮಾಡಿದ್ದಾರೆ. 

ರಾಕಿಂಗ್ ಸ್ಟಾರ್ ಮನೆಯಲ್ಲಿ ಸಂಕ್ರಾಂತಿ ಬಲು ಜೋರು: ಮಡದಿ, ಮಕ್ಕಳ ಜೊತೆ ಗಾಳಿಪಟ ಹಾರಿಸಿದ ಯಶ್!

' ಸಂಕ್ರಾಂತಿ ಹಬ್ಬದ ನಂತರ ಮ್ಯಾಕ್ಸ್‌ ದಿ ಮೂವಿ ಕ್ಲೈ ಮ್ಯಾಕ್ಸ್‌ ಚಿತ್ರೀಕರಣ ಶುರುವಾಗಲಿದೆ. ಕಲಾವಿದರ ಪಾತ್ರಗಳಿಗೆ ವಾಯ್ಸ್‌ ಓವರ್ ನೀಡಲಾಗಿದೆ. ಉಳಿದ ಭಾಗದ ಚಿತ್ರೀಕರಣ ನಡೆಯುತ್ತಿದೆ' ಎಂದು ಸುದೀಪ್ ಹೇಳಿದ್ದಾರೆ. 

ಎಳ್ಳು ಬೆಲ್ಲ ತಿಂದು ಮುದ್ದು- ಮುದ್ದಾಗಿ ಮಾತನಾಡೋಣ: ಸಂಕ್ರಾಂತಿ ಹಬ್ಬಕ್ಕೆ ರಿಷಬ್ ಶೆಟ್ಟಿ ಮಕ್ಕಳ ವಿಶ್!

ಈ ಹಿಂದೆ ಮ್ಯಾಕ್ಸ್‌ ಸಿನಿಮಾದ ಅನೌನ್ಸ್‌ಮೆಂಟ್ ಅದ್ಧೂರಿಯಾಗಿ ನಡೆಯಿತ್ತು. ಅಲ್ಲದೆ ಚಿಕ್ಕದೊಂದು ತುಣುಕಿನ ಲುಕ್ ಸಖತ್ ವೈರಲ್ ಆಗಿತ್ತು. ಕಿಚ್ಚನ ಗೆಟಪ್ ಅನೇಕರಿಗೆ ಇಷ್ಟವಾಗಿತ್ತು. ಅದಾದ ಮೇಲೆ ಮ್ಯಾಕ್ಸ್‌ ಬಗ್ಗೆ ಯಾವ ಮಾಹಿತಿ ಇರಲಿಲ್ಲ.... ಈಗ ಕಿಚ್ಚನ ಉತ್ತರ ನೋಡಿ ಅಭಿಮಾನಿಗಳು ಖುಷಿಯಾಗಿದ್ದಾರೆ. 

 

Latest Videos
Follow Us:
Download App:
  • android
  • ios