ಸೃಜನ್ ಲೋಕೇಶ್ ಯೂಟ್ಯೂಬ್ ಚಾನಲ್ ಆರಂಭ!
ಮೀರಿಸಲು ಅಸಾಧ್ಯವಾದ ಕಾಮಿಡಿ ಟೈಮಿಂಗ್, ಸ್ನೇಹಿತರ ಬಳಗವನ್ನು ಮರುಳುಗೊಳಿಸುವ ಗಾಯನ ಪ್ರತಿಭೆ, ನಟನೆಯಲ್ಲಿ ಪ್ರೇಕ್ಷಕರನ್ನು ಮಂತ್ರಮುಗ್ಧಗೊಳಿಸುವ ನಟನಾ ಚಾತುರ್ಯ ಹೊಂದಿರುವ ಸೃಜನ್ ಲೋಕೇಶ್ ತಮ್ಮ ಹೊಸ ಯೂಟ್ಯೂಬ್ ಚಾನಲ್ ಆರಂಭಿಸಿದ್ದಾರೆ.
ಪ್ರವಾಸ, ಕಲೆ, ಜೀವನ ಕುರಿತ ಕುತೂಹಲಕರ ಕಾರ್ಯಕ್ರಮಗಳನ್ನು ಈ ತಮ್ಮ ಚಾನಲ್‌ನಲ್ಲಿ ಪ್ರಸಾರ ಮಾಡುವ ಆಲೋಚನೆ ಅವರದು. ಯೂಟ್ಯೂಬ್‌ಗೆ ಹೋಗಿ ಸೃಜನ್ ಲೋಕೇಶ್ ಅಫೀಷಿಯಲ್ ಅಂತ ಟೈಪ್ ಮಾಡಿ ಅವರ ಚಾನಲ್‌ಗೆ ಚಂದಾದಾರರಾಗಬಹುದು.ಜುಲೈ 4ರಂದು ಈ ಚಾನಲ್‌ನಲ್ಲಿ ಮೊದಲ ವಿಡಿಯೋ ಪ್ರಸಾರವಾಗಲಿದೆ. ಗಿರಿಜಾ ಲೋಕೇಶ್ ಅವರು ಪ್ರಾಸ್ತಾವಿಕವಾಗಿ ತಮ್ಮ ಕುಟುಂಬದ ಕತೆಯನ್ನು ಹೇಳಲಿದ್ದಾರೆ. ಅಲ್ಲಿಂದ ನಂತರ ತಿಂಗಳಿಗೆ ಏಳು ವಿವಿಧ ಕಾರ್ಯಕ್ರಮಗಳು ಈ ಚಾನಲಲ್ಲಿ ಪ್ರಸಾರವಾಗಲಿದೆ.
ಸೃಜನ್ ಲೋಕೇಶ್ ಒಳ್ಳೆಯ ನಟ, ನಿರೂಪಕನಷ್ಟೇ ಅಲ್ಲ. ಅವರು ರೈಡರ್, ಟ್ರಾವೆಲರ್ ಮತ್ತು ಒಳ್ಳೆಯ ಕುಕ್ ಕೂಡ. ಅವರ ಈ ಎಲ್ಲಾ ಪ್ರತಿಭೆಯ ಅನಾವರಣ ಇಲ್ಲಿ ನಡೆಯಲಿದೆ. ಅಲ್ಲದೇ ಗಿರಿಜಾ ಲೋಕೇಶ್ ಅವರು ಕೂಡ ನಿಯಮಿತವಾಗಿ ಇಲ್ಲಿ ಕತೆ ಹೇಳಲಿದ್ದಾರೆ. ಅನುಭವ ಹಂಚಿಕೊಳ್ಳಲಿದ್ದಾರೆ.
ಶ್ವೇತಾ ಚಂಗಪ್ಪ ಹುಟ್ಟು ಹಬ್ಬಕ್ಕೆ ಮಧ್ಯರಾತ್ರಿ ಸರ್ಪ್ರೈಸ್ ಕೊಟ್ಟ ಸೃಜನ್ ಲೋಕೇಶ್!
‘ನನಗೆ ಅನೇಕ ಐಡಿಯಾಗಳು ಬರುತ್ತಿರುತ್ತವೆ. ಅದನ್ನು ಜಗತ್ತಿಗೆ ಹೇಳಬೇಕು. ಬದುಕಿನ ಕತೆಯನ್ನು ನಿರೂಪಿಸಬೇಕು. ಈ ಮೂಲಕ ಜನರಿಗೆ ಹೊಸ ರೀತಿಯ ಮನರಂಜನೆ ಜೊತೆಗೆ ಕಿಂಚಿತ್ ಆದರೂ ಜ್ಞಾನ ಹಂಚುವ ಕೆಲಸ ಸಾಧ್ಯವಾದರೆ ಅದೇ ಈ ಪ್ರಯತ್ನದ ಸಾರ್ಥಕತೆ’ ಎನ್ನುತ್ತಾರೆ ಸೃಜನ್ ಲೋಕೇಶ್. ಮೂಲತಃ ಕನಸುಗಾರನಾದ ಸೃಜನ್ ಅವರಿಗೆ ಈ ಯೂಟ್ಯೂಬ್ ಚಾನಲ್ ಮುಖಾಂತರ ಅನೇಕ ವಿಭಿನ್ನ ರೀತಿಯ ಕಾರ್ಯಕ್ರಮಗಳನ್ನು ಮಾಡುವ ಆಲೋಚನೆ ಇದೆ. ಕುತೂಹಲ ಇರುವವರು ಸೃಜನ್ ಲೋಕೇಶ್ ಅಫೀಷಿಯಲ್ ಯೂಟ್ಯೂಬ್ ಚಾನಲ್ ಸಬ್‌ಸ್ಕ್ರೈಬ್ ಮಾಡಿಕೊಳ್ಳಬಹುದು.