ಭೀಕರ ಅಪಘಾತದಲ್ಲಿ ಬಲಗಾಲು ಕಳೆದುಕೊಂಡ ಯುವ ನಟ ಸೂರಜ್ ರಾಜ್‌ಕುಮಾರ್!

ಬೈಕ್ ಅಪಘಾತದಲ್ಲಿ ಬಲಗಾಲು ಕಳೆದುಕೊಂಡ ಯುವ ನಟ ಸೂರಜ್. ಮೈಸೂರಿನ ಆಸ್ಪತ್ರೆಗೆ ಭೇಟಿ ನೀಡಿದ ಶಿವಣ್ಣ ದಂಪತಿ... 
 

Kannada actor Sooraj met with accident lost leg vcs

ಭಗವಾನ್ ಶ್ರೀ ಕೃಷ್ಣ ಪರಮಾತ್ಮ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿರುವ ನಟ ಸೂರಜ್ ಬೈಕ್ ಅಪಘಾತದಲ್ಲಿ ಗಂಭೀರ ಗಾಯಗೊಂಡಿದ್ದಾರೆ. ಡಾ. ಪಾರ್ವತಮ್ಮ ರಾಜ್‌ಕುಮಾರ್ ತಮ್ಮನ ಮಗ ಸೂರಜ್‌ ಚಿತ್ರರಂಗದಲ್ಲಿ ಒಳ್ಳೆ ನಂಟು ಹೊಂದಿದ್ದಾರೆ. ಸ್ಟಾರ್ ನಟರ ಜೊತೆ ಓಡಾಡಿಕೊಂಡು ಸಿನಿಮಾ ಕ್ಷೇತ್ರದಲ್ಲಿ ತೊಡಗಿಸಿಕೊಂಡಿದ್ದರು.

ಮೈಸೂರು ನಂಜನಗೂಡು ರಸ್ತೆಯಲ್ಲಿ ಬೈಕ್‌ನಲ್ಲಿ ಪ್ರಯಾಣ ಮಾಡುತ್ತಿದ್ದ ಸೂರಜ್‌ಗೆ ಟಿಪರ್ ಲಾರಿ ಗುದ್ದಿದೆ. ಭೀಕರ ಅಪಘಾತದಲ್ಲಿ ಸೂರಜ್ ಬಲಗಾಲಿಗೆ ಪೆಟ್ಟು ಬಿದ್ದಿದೆ. ತಕ್ಷಣವೇ ಮೈಸೂರಿನ ಖಾಸಗಿ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಗಿದೆ. ಪೆಟ್ಟು ಬಲವಾಗಿರುವ ಕಾರಣ ಮಂಡಿವರೆಗೂ ಬಲಗಾಲನ್ನುಕತ್ತರಿಸಿದ್ದಾರೆ ವೈದ್ಯರು ಎನ್ನಲಾಗಿದೆ. 

ಸೂರಜ್‌ನ ನೋಡಲು ಈಗಾಗಲೆ ಮೈಸೂರಿಗೆ ಶಿವರಾಜ್‌ಕುಮಾರ್, ನಿರ್ಮಾಪಕ ಚಿನ್ನೆಗೌಡ ಹೋಗಿದ್ದಾರೆ. ಆಸ್ಪತ್ರೆ ಬುಲೆಟಿನ್ ರಿಲೀಸ್ ಮಾಡಬೇಕಿದೆ. ಹೆಚ್ಚಿನ ಮಾಹಿತಿ ಲಭ್ಯವಿಲ್ಲ.

 

Latest Videos
Follow Us:
Download App:
  • android
  • ios