ರಾಜ್‌ಕುಮಾರ್ ಕ್ಯಾಲೆಂಡರ್‌ ಬಿಡುಗಡೆ ಕಾರ್ಯಕ್ರಮದಲ್ಲಿ ಬಾಸ್ ಬಿರುದಿಗೆ ಕಿತ್ತಾಡುತ್ತಿರುವವರಿಗೆ  ಜನರಿಗೆ ಉತ್ತರ ಕೊಟ್ಟ ಶಿವಣ್ಣ...

ಹ್ಯಾಟ್ರಿಕ್ ಹೀರೋ ಶಿವರಾಜ್‌ಕುಮಾರ್‌ (Shivarajkumar) ಮೈಸೂರಿನ ಇಟ್ಟಿಗೆಗೂಡು ಬಡಾವಣೆಯಲ್ಲಿ ನವೆಂಬರ್ 28ರಂದು ಡಾ.ರಾಜ್‌ಕುಮಾರ್ ಕ್ಯಾಲೆಂಡರ್‌ನ (Dr Rajkumar Calender) ಅದ್ಧೂರಿಯಾಗಿ ಬಿಡುಗಡೆ ಮಾಡಿದ್ದಾರೆ. ಈ ವೇಳೆ ಬಾಸ್ ಹೆಸರಿನ ಪಟ್ಟಕ್ಕೆ ಆಗುತ್ತಿರುವ ಜಗಳದ ಬಗ್ಗೆ ರಿಯಾಕ್ಟ್‌ ಮಾಡಿದ್ದಾರೆ. ಶಿವಣ್ಣ ಹೇಳಿರುವ ಬಾಸ್ ಯಾರು ಗೊತ್ತಾ? 

'ಎಲ್ಲರಿಗೂ ಬಾಸ್‌ ಒಬ್ಬರೇ ಅದು ದೇವರು. ಯಾಕೆ ಬಾಸ್ ಬಾಸ್ ಅಂತಾ ಒದ್ದಾಡ್ತೀರಾ? ಎಲ್ಲರ ಮನೆಯಲ್ಲೂ ಒಬ್ಬೊಬ್ಬ ಬಾಸ್‌ ಇರುತ್ತಾನೆ. ಎಲ್ಲರ ಹೃದಯದಲ್ಲೂ ಒಬ್ಬ ಬಾಸ್‌ ಇರ್ತಾನೆ. ಮನೆಗೆ ಅವನೇ ಬಾಸ್. ನಾನೊಬ್ಬನೇ ಬಾಸ್ ಅಲ್ಲ' ಎಂದು ಶಿವರಾಜ್‌ಕುಮಾರ್ ಮಾತನಾಡಿದ್ದಾರೆ.

ಮೈಸೂರಿನಲ್ಲಿರುವ ರಿಫ್ರೆಶ್‌ಮೆಂಟ್‌ ಮಾಲೀಕರಾದ ವಿಶ್ವ ಎಂಬುವವರು ಈ ಕಾರ್ಯಕ್ರಮವನ್ನು ಅದ್ಧೂರಿಯಾಗಿ ಆಯೋಜಿಸಿದ್ದರು. ಅಲ್ಲಿದ್ದ ಯುವಕನೊಬ್ಬ ನಮ್ಮ ಬಾಸ್ ವಿಶ್ವ ಎನ್ನುತ್ತಿದ್ದರು ಆಗ ಶಿವಣ್ಣ ಬಾಸ್ ವಿಚಾರದ ಬಗ್ಗೆ ಚರ್ಚೆ ಮಾಡಿದ್ದಾರೆ. 

ಅಂದಹಾಗೆ ಶಿವಣ್ಣ ನಟಿಸಿರುವ ವೇದ (Vedha) ಸಿನಿಮಾ ಡಿಸೆಂಬರ್ 23ರಂದು ರಾಜ್ಯಾದ್ಯಂತ ಬಿಡುಗಡೆ ಕಂಡಿದೆ. ಸಿನಿಮಾ ಸೂಪರ್ ಹಿಟ್ ಎನ್ನುತ್ತಿರುವ ವೀಕ್ಷಕರ ಜೊತೆ ಕರ್ನಾಟಕದ ಅನೇಕ ಪ್ರದೇಶಗಳಲ್ಲಿ ಮತ್ತೊಮ್ಮೆ ಸಿನಿಮಾ ಪ್ರಚಾರ ಮಾಡುತ್ತಿದ್ದಾರೆ. ಎ.ಹರ್ಷ (A Harsha) ನಿರ್ದೇಶನ ಮಾಡಿರುವ ಈ ಚಿತ್ರದಲ್ಲಿ ಜಾನವಿ ಮತ್ತು ಅದಿತಿ ಸಾಗರ್ (Aditi Sagar) ನಟಿಸಿದ್ದಾರೆ. ಪದೇ ಪದೇ ಹರ್ಷ ಜೊತೆ ಸಿನಿಮಾ ಮಾಡುತ್ತಿರುವುದು ಯಾಕೆ ಎಂದು ಪ್ರಶ್ನಿಸಿದಾಗ 'ಇನ್ನೂ ಹತ್ತು ಸಿನಿಮಾ ಒಟ್ಟಿಗೆ ಮಾಡ್ತೀವಿ ನಮಗೇನಾದರೂ ಹೊಟ್ಟೆಕಿಚ್ಚಾ?ಅವರ ಜೊತೆ ಯಾವಾಗಲೂ ನನಗೆ ಕಂಫರ್ಟ್‌ ಆಗಿರುತ್ತದೆ' ಎಂದು ಶಿವಣ್ಣ ಹೇಳಿದ್ದಾರೆ.

ಟ್ವಿಟರ್ ವಿಮರ್ಶೆ:

ಈ ಸಿನಿಮಾದಲ್ಲಿ ಶಿವಣ್ಣ ಜೊತೆಗೆ ನಾಯಕಿಯಾಗಿ ಗಾನವಿ (Ghanavi Lakshman) ನಟಿಸಿದ್ದಾರೆ. ಇನ್ನೂ ಶ್ವೇತಾ ಚಂಗಪ್ಪ ಮತ್ತು ಅದಿತಿ ಸಾಗರ್ ಪ್ರಮುಖ ಪಾತ್ರದಲ್ಲಿ ಮಿಂಚಿದ್ದಾರೆ. ಈ ಸಿನಿಮಾ ನೋಡಿ ಅಭಿಮಾನಿಯೊಬ್ಬ ಟ್ವಿಟ್ಟರ್ ನಲ್ಲಿ ಬರೆದುಕೊಂಡಿದ್ದಾರೆ. ಮೊದಲ ಅರ್ಥ ಸ್ವಲ್ಪ ನಿಧಾನವಾಗಿದೆ. ಇಂಟರ್‌ವಲ್ ಬೆಂಕಿ. ಎರಡನೇ ಭಾಗ ಸಖತ್ ಕ್ರೂರವಾಗಿದೆ. ಅನಗತ್ಯ ಹಾಡುಗಳು ಮತ್ತು ಕಾಮಿಡಿ ಕಥೆಯ ಗತಿಯನ್ನೇ ಬದಲಾಯಿಸಿದೆ. ಹಳೆಯ ವಿಷಯಕ್ಕೆ ಹೊಸ ಟಚ್ ನೀಡಲಾಗಿದೆ' ಎಂದು ಹೇಳಿದ್ದಾರೆ.

Vedha: ಒಂದು ಚಿಕ್ಕ ಪಾತ್ರನೂ ತುಂಬಾ ಪ್ರಮುಖವಾಗುತ್ತೆ: ವೇದ ಸಿನಿಮಾ ಕುರಿತು ಶಿವಣ್ಣ ಮಾತು

ಶಿವಣ್ಣ 125ನೇ ಸಿನಿಮಾ ಆಗಿರುವ ವೇದಾಗೆ ಪತ್ನಿ ಗೀತಾ ಶಿವರಾಜ್‌ಕುಮಾರ್ (Geetha Shivarajkumar) ನಿರ್ಮಾಣ ಮಾಡಿದ್ದಾರೆ. ನಿರ್ಮಾಪಕಿ ಗೀತಾ ಶಿರಾಜ್‌ಕುಮಾರ್‌, ‘ನಿರ್ದೇಶಕ ಎ ಹರ್ಷ ಎಲ್ಲವನ್ನು ಹೇಳಿಕೊಡುತ್ತಿದ್ದರು. ಹೀಗಾಗಿ ನನಗೆ ಸಿನಿಮಾ ನಿರ್ಮಾಣದ ಕಷ್ಟಗಳು ಗೊತ್ತಾಗಲಿಲ್ಲ. ಚಿತ್ರದಲ್ಲಿ ನಟಿಸಿರುವ ಪ್ರತಿಯೊಬ್ಬರು ನಮ್ಮ ಮನೆಯ ಕುಟುಂಬದವರಂತೆ ಆಗಿದ್ದಾರೆ. ಮನೆಮಂದಿ ಸೇರಿ ಮಾಡಿರುವ ಸಿನಿಮಾ ಇದು’ ಎಂದರು.