ಅನುಶ್ರೀ ಬಗ್ಗೆ ಪಾಪ ಅನ್ಸುತ್ತೆ: ನಟ ಶಿವರಾಜ್‌ಕುಮಾರ್

ಡ್ರಗ್ಸ್‌ ಪ್ರಕ​ರ​ಣ​ದಲ್ಲಿ ವಿಚಾ​ರಣೆ ಎದು​ರಿ​ಸು​ತ್ತಿ​ರುವ ನಟಿ, ನಿರೂ​ಪಕಿ ಅನುಶ್ರೀ ಬಗ್ಗೆ  ಪ್ರತಿ​ಕ್ರಿ​ಯಿ​ಸಿರುವ ನಟ ಶಿವ​ರಾ​ಜ​ಕು​ಮಾರ್‌, ‘ಅನುಶ್ರೀ ಬಗ್ಗೆ ಕೇಳಿದಾಗ ನೋವಾಗುತ್ತೆ. ಪಾಪ ಅನ್ನಿಸುತ್ತೆ’ ಎಂದಿ​ದ್ದಾ​ರೆ. 

Kannada actor shivarajkumar talks about anchor anushree in druga mafia vcs

ಕಿರುತೆರೆ ಖ್ಯಾತ ನಿರೂಪಕಿ ಅನುಶ್ರೀ ಹೆಸರು ಡ್ರಗ್ಸ್  ಪ್ರಕರಣದಲ್ಲಿ ಕೇಳಿ ಬಂದ ಕಾರಣ ದುಃಖಕ್ಕೆ ಒಳಗಾಗಿದ್ದಾರೆ. ತಾನು ಯಾವುದೇ ತಪ್ಪು ಮಾಡಿಲ್ಲ ನಾನು ನಿರಪರಾಧಿ ಎಂದು ಅಳುತ್ತ ಮಾತನಾಡಿದ ವಿಡಿಯೋವನ್ನು ಶೇರ್ ಮಾಡಿಕೊಂಡಿದ್ದರು.  ಅನುಶ್ರೀ ಪರವಾಗಿ ಅಭಿಮಾನಿಗಳ ಸಂಘ ಹಾಗೂ ಇನ್ನಿತರ ನಟ-ನಟಿಯರು ನಿಂತಿದ್ದಾರೆ.

ಅನುಶ್ರೀ ಕಾಲ್‌ಲಿಸ್ಟ್‌ನಲ್ಲಿ 3 ರಾಜಕಾರಣಿಗಳ ಹೆಸರು; ಅವರೇ ಬಚಾವ್ ಮಾಡ್ತಾ ಇದ್ದಾರಾ?

ಲಂಕೇಶ್ ಆಡಿಯೋ ಬುಕ್ ಮತ್ತು App ಬಿಡುಗಡೆ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ನಟ ಶಿವರಾಜ್‌ಕುಮಾರ್ ಅನುಶ್ರೀ ಬಗ್ಗೆ ಮಾತನಾಡಿದ್ದಾರೆ. ‘ನಾನೂ ಹೆಚ್ಚಾಗಿ ಟೀವಿ ನೋಡುತ್ತಿಲ್ಲ. ಹಾಗಾಗಿ ಈ ವಿಚಾರದ ಬಗ್ಗೆ ಹೆಚ್ಚು ಗೊತ್ತಿಲ್ಲ. ಅನುಶ್ರೀ ಬಗ್ಗೆ ಕೇಳಿದಾಗ ನೋವಾಗುತ್ತೆ. ಪಾಪ ಅನ್ನಿಸುತ್ತೆ. ಪೊಲೀಸ್‌ ಡಿಪಾರ್ಟ್‌ಮೆಂಟ್‌ ಇದನ್ನೆಲ್ಲಾ ನೋಡಿಕೊಳ್ಳುತ್ತದೆ. ಅದು ಅವರ ಕೆಲಸ. ನನಗೆ ಎಲ್ಲರೂ ಒಳ್ಳೆಯವರಾಗಿಯೇ ಕಾಣುತ್ತಾರೆ. ದೇವರು ಆದಷ್ಟು ಬೇಗ ಯಾರದ್ದೂ ತಪ್ಪಿಲ್ಲ ಎಂದು ಆರೋಪ ಮುಕ್ತವಾಗಿ ಹೊರಗೆ ಬರುವಂತೆ ಮಾಡಲಿ ಎನ್ನುವುದೇ ನನ್ನ ಆಶಯ’ ಎಂದ​ರು.

Kannada actor shivarajkumar talks about anchor anushree in druga mafia vcs

ಕಾರ್ಯಕ್ರಮದಲ್ಲಿ ಮಾತನಾಡಿದ ಇಂದ್ರಜಿತ್ ಲಂಕೇಶ್‌ ಯಾಕೆ ಹೆಣ್ಣು ಮಕ್ಕಳನ್ನು ಮಾತ್ರ ಟಾರ್ಗೇಟ್ ಮಾಡುತ್ತಿದ್ದಾರೆ ಎಂದು ಪ್ರಶ್ನಿಸಿದ್ದಾರೆ. 'ಡ್ರಗ್ಸ್ ಮಾಫಿಯಾದಲ್ಲಿ ಸಾಕಷ್ಟು ಜನರು ಇದ್ದಾರೆ ಬರೀ ನಟಿಯರೇ ಡ್ರಗ್ಸ್ ಜಾಲದಲ್ಲಿ ಇರೋದಾ? ರಾಜಕಾರಣಿಗಳ ಮಕ್ಕಳೂ ಇದ್ದಾರೆ. ಇಲ್ಲಿ ಯಾರೇ ತಪ್ಪು ಮಾಡಿದ್ದರೂ ಶಿಕ್ಷಯಾಗಲೇ ಬೇಕು' ಎಂದು ಹೇಳಿದ್ದಾರೆ.

ಅನುಶ್ರೀ ಅರೆಸ್ಟ್ ತಡೆಯುತ್ತಿರುವ ಆ 'ಶುಗರ್ ಡ್ಯಾಡಿ' ಯಾರು? 

ಅನುಶ್ರೀ ವಿಡಿಯೋ ವೈರಲ್:

ಪ್ರಕರಣಕ್ಕೆ ಸಂಬಂಧಿಸಿದ ತನಿಖೆಯಲ್ಲಿ ಭಾಗಿಯಾಗಿದ್ದ ನಂತರ ಅನುಶ್ರೀ ಈ ವಿಚಾರವಾಗಿ ಎಲ್ಲಿಯೂ ಮಾತನಾಡಿರಲಿಲ್ಲ. ಆದರೆ ಕೆಲ ಮಾಧ್ಯಮಗಳು ಹಾಗೂ ಲೇಖನಗಳಲ್ಲಿ ತಪ್ಪು ಮಾಹಿತಿ ಉಲ್ಲೇಖಿಸುತ್ತಿರುವ ಕಾರಣ ಮನಸ್ಸಿಗೆ ನೋವಾಗಿದೆ ಎಂದು ವಿಡಿಯೋದಲ್ಲಿ ಮಾತನಾಡಿದ್ದಾರೆ. '12 ವರ್ಷ ಹಿಂದೆ ನಾನು ಗೆದ್ದು ಪಡೆದ ಸಂತೋಷ ಇಂದು ನನಗೆ ಮುಳುವಾಗುತ್ತದೆ ಎಂದು ಗೊತ್ತಿಲ್ಲ. ಮೂರು ವರ್ಷ ಹಿಂದೆ ಅವರ ಡ್ಯಾನ್ಸ್‌ ಶಾಲೆ ಉದ್ಘಾಟನೆ ಕಾರ್ಯಕ್ರಮಕ್ಕೆ ಹೋಗಿದ್ದೆ ಅಷ್ಟು ಬಿಟ್ಟರೆ ಯಾವ ಸಂಪರ್ಕ ಇರಲಿಲ್ಲ ಎಂದು ಅಳುತ್ತ ಮಾತನಾಡಿದ್ದಾರೆ. ತಮ್ಮ ಕುಟುಂಬದವರ ಹಳೆ ಹರಕೆ ತೀರಿಸಲು ಕೆಲ ದಿನಗಳ ಹಿಂದೆ ಶ್ರೀರಂಗಪಟ್ಟಣದ ನಿಮಿಷಾಂಬ ದೇವಾಲಯಕ್ಕೆ ಭೇಟಿ ನೀಡಿದ್ದರು.

"

Latest Videos
Follow Us:
Download App:
  • android
  • ios