ಬೆಂಗಳೂರು(ಅ. 02)   ಡ್ರಗ್ಸ್ ಪ್ರಕರಣಕ್ಕೆ ಸಂಬಂಧಿಸಿ ನಿರೂಪಕಿ ಅನುಶ್ರೀ ಸಿಸಿಬಿ ಪೊಲೀಸರ  ವಿಚಾರಣೆ ಎದುರಿಸಿದ್ದಾರೆ.  ಸಂಜನಾ ಮೇಲೆ ಆರೋಪಗಳ ಸುರಿಮಳೆ ಮಾಡಿದ್ದ ವಕೀಲ, ಸಾಮಾಜಿಕ ಕಾರ್ಯಕರ್ತ ಪ್ರಶಾಂತ್ ಸಂಬರಗಿ ಅನುಶ್ರೆಈ ವಿಚಾರದಲ್ಲಿ ಮತ್ತೊಂದು ಬಾಂಬ್ ಸಿಡಿಸಿದ್ದಾರೆ.

'ಸ್ಯಾಂಡಲ್ ವುಡ್ ಡ್ರಗ್ಸ್ ದಂಧೆ ಪ್ರಕರಣದಲ್ಲಿ ನಟಿ ಹಾಗೂ ನಿರೂಪಕಿ ಅನುಶ್ರೀ ಬಂಧನವಾಗದಂತೆ ಆಕೆಯ ರಕ್ಷಣೆಗೆ ಶುಗರ್ ಡ್ಯಾಡಿಯೊಬ್ಬರು ನಿಂತಿದ್ದಾರೆ' ಎಂದು ವಕೀಲ ಪ್ರಶಾಂತ್ ಸಂಬರಗಿ ಟ್ವೀಟ್ ಮಾಡಿರುವುದು ಸುದ್ದಿ ಸ್ಫೋಟಕ್ಕೆ ಕಾರಣವಾಗಿದೆ.

ಕೈಮುಗಿದು ಕಣ್ಣೀರು ಹಾಕಿದ ಅನುಶ್ರೀ

ಆದರೆ ಇನ್ನು ಮುಂದೆ ಈ ಆಟ ನಡೆಯುವುದಿಲ್ಲ. ಹೆಚ್ಚು ದಿನ ಕಾಲ  ಬಂಧನ ತಡೆಯಲು ಸಾಧ್ಯವಿಲ್ಲ.  ಆಕೆಯ ಬಳಿ ಅಡಗಿರುವ ಇನ್ನಷ್ಟು ಮಾಹಿತಿ ಹೊರಕ್ಕೆ ಬರಲಿದೆ ಎಂದಿದ್ದಾರೆ.

ಇಲ್ಲಿಯವರೆಗೂ ಅನುಶ್ರೀ ಬಂಧನವಾಗದಂತೆ ಷುಗರ್ ಡ್ಯಾಡಿಯೊಬ್ಬರು ತಡೆಯುತ್ತಿದ್ದಾರೆ. ಇನ್ನು ಮುಂದೆ ಅದು ಸಾಧ್ಯವಾಗುವುದಿಲ್ಲ, ಆಕೆಯ ತಪ್ಪಿಗೆ ಶಿಕ್ಷೆಯಾಗುವುದು ನಿಶ್ಚಿತ. ಅನುಶ್ರೀಯ ಮತ್ತಷ್ಟು ರಹಸ್ಯಗಳು ಬಯಲಾಗುವುದು ಖಚಿತ ಎಂದು ಅವರು ಟ್ವೀಟ್ ನಲ್ಲಿ ಬರೆದುಕೊಂಡಿದ್ದಾರೆ.

ಮತ್ತೊಂದು ಟ್ವೀಟ್ ನಲ್ಲಿ ಡ್ರಗ್ಸ್ ಪೆಡ್ಲರ್ ಜೊತೆಗೆ ಅನುಶ್ರೀ ಇರುವ ಫೋಟೋವೊಂದನ್ನು ಸಂಬರಗಿ ಹಂಚಿಕೊಂಡಿದ್ದಾರೆ.  ಸಿಸಿಬಿಯಿಂದ ನೊಟೀಸ್ ಬಂದಿದ್ದು ನೋವಾಗಿಲ್ಲ, ನಂತರ ನನ್ನನ್ನು ಬಿಂಬಿಸಿದ ರೀತಿ ಬೇಸರ ತಂದಿದೆ ಎಂದು ಅನುಶ್ರೀ ವಿಡಯೋ ಮೂಲಕ ಎದುರಿಗೆ ಬಂದು  ಕಣ್ಣೀರು ಇಟ್ಟಿದ್ದರು.