ಯಶಸ್ವಿ ಶಸ್ತ್ರಚಿಕಿತ್ಸೆ ಮುಗಿಸಿದ ಶಿವರಾಜ್ ಕುಮಾರ್ ಇದೀಗ ಅಮೆರಿಕದಿಂದ ಬೆಂಗಳೂರಿಗೆ ಆಗಮಿಸಿದ್ದಾರೆ. ಶಿವರಾಜ್ ಕುಮಾರ್ ಅದ್ಧೂರಿ ಸ್ವಾಗತಕ್ಕೆ ಕಿಕ್ಕಿರಿದು ಅಭಿಮಾನಿಗಳು ಸೇರಿದ್ದಾರೆ.
ಬೆಂಗಳೂರು(ಜ.26) ಆರೋಗ್ಯ ಸಮಸ್ಯೆಯಿಂದ ಕಳೆದ ಕೆಲ ದಿನಗಳಿಂದ ಅಮೆರಿದ ಕ್ಯಾನ್ಸರ್ ಆಸ್ಪತ್ರೆಯಲ್ಲಿ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದ ಸ್ಯಾಂಡಲ್‌ವುಡ್ ನಟ ಶಿವರಾಜ್ ಕುಮಾರ್ ಇದೀಗ ಸಂಪೂರ್ಣ ಚೇತರಿಸಿಕೊಂಡು ತವರಿಗೆ ಆಗಮಿಸಿದ್ದಾರೆ. ಶಿವರಾಜ್ ಕುಮಾರ್ ಅಮೆರಿಕದಿಂದ ಪ್ರಯಾಣ ಬೆಳೆಸಿದ ವಿಮಾನ ಇದೀಗ ಬೆಂಗಳೂರಿನ ಕೆಂಪೇಗೌಡ ವಿಮಾನ ನಿಲ್ದಾಣದಲ್ಲಿ ಲ್ಯಾಂಡ್ ಆಗಿದೆ. ಶಿವರಾಜ್ ಕುಮಾರ್‌ನನ್ನು ವಿಮಾನ ನಿಲ್ದಾಣದಲ್ಲೇ ಅದ್ಧೂರಿ ಸ್ವಾಗತಕ್ಕೆ ಅಭಿಮಾನಿಗಳು ತಯಾರಿ ಮಾಡಿದ್ದರು. ಆದರೆ ವಿಮಾನ ನಿಲ್ದಾಣದಲ್ಲಿ ಹೈಅಲರ್ಟ್ ಘೋಷಿಸಲಾಗಿದೆ. ಹೀಗಾಗಿ ಸಾದಹಳ್ಳಿ ಟೋಲ್ ಬಳಿ ಅದ್ಧೂರಿ ಸ್ವಾಗತ್ಕೆ ಅಭಿಮಾನಿಗಳು ಸಜ್ಜಾಗಿದ್ದಾರೆ.
ಗಣರಾಜ್ಯೋತ್ಸವದ ಹಿನ್ನಲೆಯಲ್ಲಿ ವಿಮಾನ ನಿಲ್ದಾಣದಲ್ಲಿ ಹೈಅಲರ್ಟ್ ಘೋಷಿಸಲಾಗಿದೆ. ಹೀಗಾಗಿ ವಿಮಾನ ನಿಲ್ದಾಣದಲ್ಲಿ ಯಾವುದೇ ರೀತಿಯ ಸಂಭ್ರಮಾಚರಣೆಗೆ, ಸ್ವಾಗತಕ್ಕೆ ಅವಕಾಶವಿಲ್ಲ. ಈ ಕಾರಣದಿಂದ ಅಭಿಮಮಾನಿಗಳು ಸಾದಹಳ್ಳಿ ಟೋಲ್ ಬಳಿ ಅದ್ಧೂರಿ ಸ್ವಾಗತಕ್ಕೆ ಮುಂದಾಗಿದ್ದಾರೆ.
ಜೀ ಕನ್ನಡ ಸಾಮ್ರಾಜ್ಯದಲ್ಲಿ ಭೈರತಿ ರಣಗಲ್‌ನ ಆಡಳಿತ: ಡಬಲ್ ಶೇಡ್‌ನಲ್ಲಿ ಶಿವಣ್ಣ!
ಇಂದು ಬೆಳಗ್ಗೆ 8.50ಕ್ಕೆ ಶಿವರಾಜ್ ಕುಮಾರ್ ಪ್ರಯಾಣಿಸಿದ ವಿಮಾನ ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಲ್ಯಾಂಡ್ ಆಗಿದೆ. ಟರ್ಮಿನಲ್ 2 ಮುಖಾಂತರ ಶಿವರಾಜ್ ಕುಮಾರ್ ನಿಲ್ದಾಣದಿಂದ ಹೊರಬರಲಿದ್ದಾರೆ. ಇನ್ನು ಸಾದಹಳ್ಳಿ ಟೋಲ್‌ನಿಂದ ಶಿವರಾಜ್ ಕುಮಾರ್ ಮನೆಯವರೆಗೆ ಅದ್ಧೂರಿ ಸ್ವಾಹತಕ್ಕೆ ಅಭಿಮಾನಿಗಳು ತಯಾರಿ ಮಾಡಿಕೊಂಡಿದ್ದಾರ.
ಮೂತ್ರ ಕೋಶದ ಕ್ಯಾನ್ಸರ್ ಸಂಬಂಧ ಶಿವರಾಜ್ ಕುಮಾರ್ ಡಿಸೆಂಬರ್ 18 ರಂದು ಬೆಂಳೂರಿನಿಂದ ಅಮೆರಿಕಕ್ಕೆ ಪ್ರಯಾಣ ಮಾಡಿದ್ದರು. ಡಿಸೆಂಬರ್ 24ರಂದು ಶಿವರಾಜ್ ಕುಮಾರ್‌ಗೆ ಶಸ್ತ್ರಚಿಕಿತ್ಸೆ ಮಾಡಲಾಗಿತ್ತು. ಆರೋಗ್ಯ ಸಂಬಂಧ ಶಿವರಾಜ್ ಕುಮಾರ್ 6 ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು. ಶಸ್ತ್ರಚಿಕಿತ್ಸೆ ಬಳಿಕ ವಿಶ್ರಾಂತಿಗೆ ಜಾರಿದ್ದ ಶಿವರಾಜ್ ಕುಮಾರ್ ಇದೀಗ ಚೇತಿರಿಸಿಕೊಂಡು ತವರಿಗೆ ವಾಪಾಸ್ ಆಗಿದ್ದಾರೆ.
ಇತ್ತ ಶಿವರಾಜ್ ಕುಮಾರ್ ಆಗಮನ ಅಭಿಮಾನಿಗಳ ಸಂಭ್ರಮಕ್ಕೆ ಪಾರವೇ ಇಲ್ಲದಂತಾಗಿದೆ. ಕರ್ನಾಟಕ ನೆಚ್ಚಿನ ಹಾಗೂ ಹೈ ಎನರ್ಜಿಟಿಕ್ ನಟನಾಗಿ ಗುರುತಿಸಿಕೊಂಡಿರುವ ಶಿವರಾಜ್ ಕುಮಾರ್ ಸ್ವಾಗತಕ್ಕೆ ಅಭಿಮಾನಿಗಳು ಕೇಕ್, ಹಾರ, ಹೂವುಗಳನ್ನು ತಂದಿದ್ದಾರೆ.ಶಿವರಾಜ್ ಕುಮಾರ್ ಅಭಿಮಾನಿಗಳು ಈಗಾಗಲೇ ಶಿವರಾಜ್ ಕುಮಾರ್‌ಗೆ ಜೈಕಾರ ಕೂಗುತ್ತಿದ್ದಾರೆ. ಶಿವರಾಜ್ ಕುಮಾರ್ ಮೆರವಣಿಗೆಗೆ ಒಪ್ಪಲ್ಲ, ಹೀಗಾಗಿ ಸಾದಹಳ್ಳಿ ಟೋಲ್ ಬಳಿ ಸ್ವಾಗತ ಮಾಡಲಾಗುತ್ತದೆ. ಹಾರ ಹಾಕಿ, ಕೇಕ್ ಕತ್ತರಿಸಲಾಗುತ್ತದೆ. ಹೂವು ಮಳೆ ಸುರಿಸಲಾಗುತ್ತದೆ ಎಂದು ಶಿವರಾಜ್ ಕುಮಾರ್ ಅಭಿಮಾನಿ ಹೇಳಿದ್ದಾರೆ.ನಮ್ಮ ಖುಷಿಗೆ ನಾವು ಸಂಭ್ರಮಾಚರಣೆ ಮಾಡುತ್ತಿದ್ದೇವೆ. ಶಿವರಾಜ್ ಕುಮಾರ್ ಯಶಸ್ವಿ ಶಸ್ತ್ರಚಿಕಿತ್ಸೆ ಬಳಿಕ ತವರಿಗೆ ಆಗಮಿಸುತ್ತಿರುವುದೇ ನಮಗೆ ಖುಷಿಯ ವಿಚಾರ ಎಂದು ಶಿವರಾಜ್ ಕುಮಾರ್ ಅಭಿಮಾನಿ ಹೇಳಿದ್ದಾರೆ.
ರಾಮ್ ಚರಣ್-ಶಿವರಾಜ್‌ಕುಮಾರ್ ನಟಿಸುತ್ತಿರೋ RC16ಗೆ ಸಿನಿಮಾಗೆ ಬಿಗ್ ಶಾಕ್
