Asianet Suvarna News Asianet Suvarna News

ಚಿಕ್ಕ ವಯಸ್ಸಿನಲ್ಲೇ ನಮ್ಮನ್ನಗಲಿದ ಕನ್ನಡ ಚಿತ್ರತಾರೆಗಳು; ಕಂಬನಿಯಾಗಿ ಜಾರುವ ನೆನಪುಗಳು!

ನಟಿ ಹೇಮಶ್ರೀ ಅವರು ಸಾವು ಕಂಡಾಗ ಅವರ ವಯಸ್ಸು ಕೇವಲ 30 ವರ್ಷ. ಸ್ಯಾಂಡಲ್‌ವುಡ್ ಖಳನಟರಾದ ಉದಯ್ ಹಾಗು ಅನಿಲ್ ಅವರಿಬ್ಬರೂ ದುರಂತದಲ್ಲಿ ಒಟ್ಟಿಗೇ ಸಾವನ್ನಪ್ಪಿದ್ದು ಗೊತ್ತೇ ಇದೆ. ಉದಯ್‌ ಅವರಿಗೆ ಸತ್ತಾಗ 30 ವರ್ಷ ಹಾಗೂ ಅನಿಲ್ ಅವರಿಗೆ 31 ವರ್ಷ ವಯಸ್ಸಷ್ಟೇ ಆಗಿತ್ತು. ಶೂಟಿಂಗ್..

Here is list of some sandalwood actor and actress died in early age srb
Author
First Published Aug 7, 2024, 4:49 PM IST | Last Updated Aug 7, 2024, 4:53 PM IST

ಚಿಕ್ಕ ವಯಸ್ಸಿನಲ್ಲೇ ಮೃತಪಟ್ಟಿರುವ ಕನ್ನಡದ ನಟನಟಿಯರ ಲಿಸ್ಟ್‌ ಒಂದು ಸೋಷಿಯಲ್ ಮೀಡಿಯಾದಲ್ಲಿ ತುಂಬಾ ವೈರಲ್ ಆಗುತ್ತಿದೆ. ಅದನ್ನು ನೋಡುತ್ತಿದ್ದರೆ ಎಂಥವರಿಗೂ ಕಣ್ಣೀರು ಬರುತ್ತದೆ. ಜೀವನಕ್ಕೊಂದು ಗುರಿ ಕಲ್ಪಿಸಿಕೊಂಡು, ಸ್ಯಾಂಡಲ್‌ವುಡ್‌ ಎಂಬ ಮಾಯಾನಗರಿಯಲ್ಲಿ ಮಿಂಚಲು ಅವರೆಲ್ಲರೂ ಪಟ್ಟಿರುವ ಕಷ್ಟ ಅಷ್ಟಿಷ್ಟಲ್ಲ. ಆದರೆ, ತೀರಾ ಚಿಕ್ಕ ವಯಸ್ಸಿಗೇ ಹಲವರು, ಮಧ್ಯ ವಯಸ್ಸಿಗೇ ಕೆಲವರು ಇಹಲೋಕ ತ್ಯಜಿಸಿಬಿಟ್ಟರು. 

ಅವರೆಲ್ಲರೂ ಈಗ ಬದುಕಿದ್ದರೆ, ಅಂದುಕೊಂಡ ಗುರಿ ಸಾಧಿಸಿದ್ದರೆ ಚಂದನವನದಲ್ಲಿ ಇನ್ನೂ ಬಹಳಷ್ಟು ತಾರೆಗಳು ನಲಿದಾಡುತ್ತಿದ್ದರು. ಆದರೆ, ದುರಾದೃಷ್ಟವೋ, ವಿಧಿ ಲಿಖಿತವೋ ಎಂಬಂತೆ, ಸಾಯಬಾರದ ವಯಸ್ಸಲ್ಲಿ ಅವರೆಲ್ಲರೂ ಉಸಿರು ಚೆಲ್ಲಿದ್ದಾರೆ. ಈಗ ಅವರ ನೆನಪುಗಳಷ್ಟೇ ಉಳಿದಿವೆ. ಅವೆಲ್ಲವೂ ಸಿನಿಪ್ರಿಯರನ್ನು ಅಳಿಸುವ, ಅಳಿಸಲಾಗದ ನೆನಪುಗಳು ಎನ್ನಲೇಬೇಕು. ಇತ್ತೀಚೆಗೆ, ಅಂದರೆ ಕಳೆದ ಒಂದು ದಶಕದಿಂದೀಚೆಗೆ ನಮ್ಮನ್ನಗಲಿರುವ ನಟನಟಿಯರ ಲಿಸ್ಟ್‌ ಇದು, ನೋಡಿ..

ನಿವೇದಿತಾ ಜೈನ್: ಕೊಲ್ಲೂರಿನಲ್ಲಿ ಕೇರಳದ ಜ್ಯೋತಿಷಿ ಭವಿಷ್ಯ ನುಡಿದಿದ್ರು, ಹೇಳಿದಂತೆ ಆಯ್ತು!

ನಟಿ ನಿವೇದಿತಾ ಜೈನ್ ಬದುಕಿದ್ದು ಕೇವಲ 19 ವರ್ಷ. ಅಷ್ಟರಲ್ಲೇ 12ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿ ಗಮನ ಸೆಳೆದಿದ್ದರು. ಚೇತನಾ ರಾಜ್ ಎಂಬ ನಟಿ ಕೇವಲ 21ನೇ ವಯಸ್ಸಿಗೇ ಇಹಲೋಕ ತ್ಯಜಿಸಿಬಿಟ್ಟರು. ರೇಖಾ ಸಿಂಧು ಎನ್ನುವ ಹೆಸರಿನ ನಟಿ ಬದುಕಿದ್ದು ಕೇವಲ 23 ವರ್ಷ. ನಟ ಸುನಿಲ್ ಬದುಕಿದ್ದು ಕೇವಲ 30 ವರ್ಷ. ನಟಿ ಮಾಲಾಶ್ರೀ ಜೊತೆಗೆ ಅವರು ನಟಿಸಿರುವ ಬೆಳ್ಳಿ ಕಾಲುಂಗುರ, ಮಾಲಾಶ್ರೀ ಮಾಮಾಶ್ರೀ ಹಾಗೂ ಸಿಂಧೂರ ತಿಲಕ ಮೊದಲಾದ ಸಿನಿಮಾಗಳು ಸೂಪರ್ ಹಿಟ್ ದಾಖಲಿಸದ್ದವು. 

ಇನ್ನು ನಟಿ ಹೇಮಶ್ರೀ ಅವರು ಸಾವು ಕಂಡಾಗ ಅವರ ವಯಸ್ಸು ಕೇವಲ 30 ವರ್ಷ. ಸ್ಯಾಂಡಲ್‌ವುಡ್ ಖಳನಟರಾದ ಉದಯ್ ಹಾಗು ಅನಿಲ್ ಅವರಿಬ್ಬರೂ ದುರಂತದಲ್ಲಿ ಒಟ್ಟಿಗೇ ಸಾವನ್ನಪ್ಪಿದ್ದು ಗೊತ್ತೇ ಇದೆ. ಉದಯ್‌ ಅವರಿಗೆ ಸತ್ತಾಗ 30 ವರ್ಷ ಹಾಗೂ ಅನಿಲ್ ಅವರಿಗೆ 31 ವರ್ಷ ವಯಸ್ಸಷ್ಟೇ ಆಗಿತ್ತು. ಶೂಟಿಂಗ್ ನಡೆಯುತ್ತಿದ್ದಾಗಲೇ ಅವರಿಬ್ಬರೂ ಕಂಡ ದುರಂತ ಸಾವು ಸಾಕಷ್ಟು ಸುದ್ದಿಯಾಗಿತ್ತು. ಸ್ಯಾಂಡಲ್‌ವುಡ್ ಚಿತ್ರರಂಗ ಅದು ಅಕ್ಷರಶಃ ಶೇಕ್ ಆಗಿತ್ತು. 

ಆ ಕಾಲ್ದಲ್ಲೇ ಹುಟ್ಟಿದ್ರೆ ಶಂಕರ್‌ ನಾಗ್ ಅವ್ರನ್ನೇ ಕೇಳ್ತಿದ್ದೆ: ಸಾಯಿ ಪಲ್ಲವಿ ಯಾಕೆ ಹೀಗ್ ಹೇಳಿದ್ದು?

ಬಿಗ್ ಬಾಸ್ ಖ್ಯಾತಿಯ ನಟಿ ಜಯಶ್ರೀ ರಾಮಯ್ಯ ಅವರು ತೀರಿಕೊಂಡಾಗ ಅವರಿಗಿನ್ನೂ 31 ವರ್ಷವಷ್ಟೇ ಆಗಿತ್ತು. ನಟಿ ಸೌಂದರ್ಯ ಅವರು ಸಹ ದುರಂತ ಸಾವು ಕಂಡಿದ್ದು, ಅವರಿಗೂ ಅಷ್ಟೇ, 31 ವರ್ಷವಷ್ಟೇ ಆಗಿತ್ತು. ತೆಲುಗು ಚಿತ್ರರಂಗದಲ್ಲಿ ದಶಕಗಳ ಕಾಲ ಸ್ಟಾರ್ ನಟಿಯಾಗಿ ಮೆರೆದಿದ್ದ ಸೌಂದರ್ಯ ಅವರು ಬೆಂಗಳೂರಿನಲ್ಲಿ ಹೆಲಿಕಾಫ್ಟರ್‌ ದುರಂತದಲ್ಲಿ ಅಸು ನೀಗಿದ್ದಾರೆ. ನಟಿ ಸೌಂದರ್ಯ ನಿಧನಕ್ಕೆ ತೆಲುಗು ಚಿತ್ರರಂಗವಂತೂ ಅಕ್ಷರಶಃ ನಲುಗಿ ಹೋಗಿತ್ತು. ನಟಿ ಕಲ್ಪನಾ ಬದುಕಿದ್ದು ಕೇವಲ 36 ವರ್ಷವಷ್ಟೇ!

ಇನ್ನು ಹಲವು ದಶಕಗಳ ಹಿಂದೆಯೇ ನಮ್ಮನ್ನಗಲಿದ ನಟಿ ಮಂಜುಳಾ ಅವರಿಗೆ ಸತ್ತಾಗ ಆಗಿದ್ದು ಕೇವಲ 32 ವರ್ಷ. ನಟ ನವೀನ್ ಮಯೂರ್ ಅವರೂ ಸಹ ತಮ್ಮ 32ನೇ ವಯಸ್ಸಿನಲ್ಲಿಯೇ ಇಹಲೋಕ ತ್ಯಜಿಸಿಬಿಟ್ಟರು. ಇನ್ನು ನಟ-ನಿರ್ದೇಶಕ ಶಂಕರ್‌ ನಾಗ್ ಅವರು ನಿಧನರಾದಾಗ ಅವರಿಗೆ 36 ವರ್ಷ ವಯಸ್ಸು. ಅದೇ ವಯಸ್ಸಿನಲ್ಲಿ ತೀರಿಹೋದ ಇನ್ನೊಬ್ಬರು ಸ್ಯಾಂಡಲ್‌ವುಡ್ ನಟ ಎಂದರೆ ಚಿರಂಜೀವಿ ಸರ್ಜಾ ಅವರು. ಇನ್ನೂ ಚಿತ್ರರಂಗದಲ್ಲಿ ಬೆಳೆಯುತ್ತಿರುವಾಗಲೇ ನಟ ಚಿರಂಜೀವಿ ಸರ್ಜಾ ಅವರು ದುರಂತ ಅಂತ್ಯ ಕಂಡರು. 

ಹಿಂದಿಯ ಗೋವಿಂದ ಅಪ್ಪು ಬಗ್ಗೆ ಏನಂದ್ರು, ಜಗತ್ತಿಗೇ ಗೊತ್ತಿಲ್ಲದ ಸೀಕ್ರೆಟ್ ಒಂದು ಹೊರಬಿತ್ತು!

ನಟ ಸಂಚಾರಿ ವಿಜಯ್ ನಿಧನರಾದಾಗ ಅವರಿಗಿನ್ನೂ 38 ವರ್ಷ ವಯಸ್ಸಾಗಿತ್ತು. ರಾಷ್ಟ್ರ ಪ್ರಶಸ್ತಿ ಕೂಡ ಪಡೆದಿದ್ದ ನಟ ಸಂಚಾರಿ ವಿಜಯ್ ಇನ್ನೂ ಸಾಧನೆಯ ಶಿಖರದ ಕನಸು ನನಸು ಮಾಡಿಕೊಳ್ಳುತ್ತಿದ್ದ ಹಂತದಲ್ಲೇ ಪ್ರಾಣ ಚೆಲ್ಲಿಬಿಟ್ಟರು. ಇನ್ನು ಡಾ. ಪುನೀತ್ ರಾಜ್‌ಕುಮಾರ್ ಅವರು ತಮ್ಮ 46ನೇ ವಯಸ್ಸಿನಲ್ಲಿಯೇ ಇಹಲೋಕ ತ್ಯಜಿಸಿ ಇಡೀ ಚಿತ್ರರಂಗಕ್ಕೇ ದಿಗ್ಭ್ರಮೆ ಮೂಡಿಸಿಬಿಟ್ಟರು. ಚಿಕ್ಕ ವಯಸ್ಸಿನಲ್ಲೇ ದುರಂತ ಸಾವು ಕಂಡಿರುವ ಇವರೆಲ್ಲರ ನೆನಪುಗಳು ಕನ್ನಡ ಚಿತ್ರರಂಗವನ್ನು ಹಾಗು ಸಿನಿ ಪ್ರೇಕ್ಷಕರನ್ನು ಯಾವತ್ತಿಗೂ ಕಾಡಲಿವೆ. 

Latest Videos
Follow Us:
Download App:
  • android
  • ios