Asianet Suvarna News Asianet Suvarna News

ಪ್ರೊ.ನಂಜುಂಡಸ್ವಾಮಿ ಪಾತ್ರದಲ್ಲಿ ಕಾಣಿಸಿಕೊಳ್ಳಬೇಕಿತ್ತು ಸಂಚಾರಿ ವಿಜಯ್

ತೆರೆ ಮೇಲೆ ಬರಬೇಕಿದೆ ರೈತ ನಾಯಕನ ಬಯೋಪಿಕ್. ಎಂ.ಡಿ. ನಂಜುಂಡ ಸ್ವಾಮಿ ಪಾತ್ರ ಸಂಚಾರಿ ವಿಜಯ್ ಮಾಡಬೇಕಿತ್ತು.

Kannada actor Sanchari Vijay was supposed to play Prof MD Nanjundaswamy biopic vcs
Author
Bangalore, First Published Jun 19, 2021, 10:13 AM IST
  • Facebook
  • Twitter
  • Whatsapp

ಇಹಲೋಕ ತ್ಯಜಿಸಿರುವ ಸಂಚಾರಿ ವಿಜಯ್ ಅವರಲ್ಲಿ ವಿವಿಧ ಪಾತ್ರಗಳನ್ನು ನಟಿಸುವ ಕನಸುಗಳಿದ್ದವು. ಅಂಥ ಕನಸಿನ ಕತೆಗಳಲ್ಲಿ ಒಂದು ಪ್ರೊ. ಎಂ.ಡಿ. ನಂಜುಂಡ ಸ್ವಾಮಿ ಬಯೋಗ್ರಫಿಯಲ್ಲಿ ನಟಿಸುವುದು ಒಂದು. ಇದಕ್ಕಾಗಿ ಮಾತುಕತೆ ಕೂಡ ಮಾಡುತ್ತಿದ್ದರು. ಈ ವಿಚಾರವನ್ನು ಸ್ವತಃ ಪ್ರೊಫೆಸರ್ ಅವರ ಪುತ್ರ ಪಚ್ಚೆ ನಂಜುಂಡಸ್ವಾಮಿ.

ಯೂಟ್ಯೂಬ್‌ಗೆ ಬಂತು ಸಂಚಾರಿ ವಿಜಯ್ ನಟನೆಯ 'ನಾನು ಅವನಲ್ಲ ಅವಳು' ಸಿನಿಮಾ! 

ಈ ವಿಚಾರ ಫೇಸ್‌ಬುಕ್‌ನಲ್ಲಿ ಬರೆದುಕೊಂಡಿರುವ ಅವರು, ತಮ್ಮ ತಂದೆ ಪಾತ್ರದಲ್ಲಿ ನಟಿಸಬೇಕಿದ್ದು ನಟ ಸಂಚಾರಿ ವಿಜಯ್ ಎಂದು ಹೇಳಿಕೊಂಡಿದ್ದಾರೆ. ‘ನಾತಿಚರಾಮಿ ಚಿತ್ರದ ಎಡಿಟಿಂಗ್ ನಡೆಯುತ್ತಿದ್ದ ಸಂದರ್ಭ. ಆಗ ಪ್ರೊಫೆಸರ್ ಬಯೋಪಿಕ್ ಸಿನಿಮಾ ಮಾಡುವ ಆಸೆ ಇದೆ ಎಂದು ಹೇಳಿಕೊಂಡಿದ್ದು ನಿರ್ದೇಶಕ ಮಂಸೋರೆ. ಆ ನಂತರ ಅವರು ನಮ್ಮ ಮನೆಗೆ ಬಂದಾಗ ಅಪ್ಪನ ಕುರಿತು ಮಾಹಿತಿ, ಪುಸ್ತಕಗಳನ್ನು ಕೊಟ್ಟೆ. ಆಗ ಪ್ರೊಫೆಸರ್ ಪಾತ್ರದಲ್ಲಿ ಯಾರು ಮಾಡಲಿದ್ದಾರೆ ಎಂದು ಕೇಳಿದಾಗ ಸಂಚಾರಿ ವಿಜಯ್ ಎಂದರು. ಒಳ್ಳೆಯ ಆಯ್ಕೆ. ಅದ್ಭುತ ಕಲಾವಿದ ಅನಿಸಿತು’ ಎಂದು ಪಚ್ಚೆ ನಂಜುಂಡಸ್ವಾಮಿ ಬರೆದುಕೊಂಡಿದ್ದಾರೆ.

Follow Us:
Download App:
  • android
  • ios