ಅಲ್ಲಿ ರವಿಚಂದ್ರನ್ ಮಾತುಗಳೇ ಮಜಾ ಆಗಿದ್ದವು. ‘ಒಂದಲ್ಲ ಎರಡಲ್ಲ ಹದಿನೆಂಟು ಸಿನಿಮಾ ಸೋತರೂ ದ್ವಾರಕೀಶ್ ಧೃತಿಗೆಟ್ಟಿಲ್ಲ. ಸೋಲೋ, ಗೆಲುವೋ ನಿರಂತರವಾಗಿ ಸಿನಿಮಾ ಮಾಡುತ್ತಲೇ ಬಂದಿದ್ದಾರೆ. ಯಾಕಂದ್ರೆ ಅವರಿಗೆ ಧೈರ್ಯ ಜಾಸ್ತಿ’ ಎಂದು ಬಣ್ಣಿಸಿದರು.

'ಕೆಟ್ಟದ್ದಕ್ಕೂ, ಒಳ್ಳಯದ್ದಕ್ಕೂ ನಾನೇ ಕಾರಣವಂತೆ, ಇದೆಲ್ಲ ಹೇಗೆ ಸಾಧ್ಯ!'

ಅಷ್ಟೇ ಅಲ್ಲ, ಮುಂದಿ ನದು ಕಾಮಿಡಿ ಕಿಕ್. ‘ದ್ವಾರಕೀಶ್ ಅವರಿಗೆ ಬೇರೆ ವಿಷಯದಲ್ಲೂ ಧೈರ್ಯ ಜಾಸ್ತಿ’ ಅಂತ ಪರೋಕ್ಷವಾಗಿ ದ್ವಾರಕೀಶ್ ಅವರ ಖಾಸಗಿ ಬದುಕಿನ ಸಂಗತಿ
ಗಳನ್ನು ಕೆದಕಿ ಕಾಲೆಳೆದು ತಮಾಷೆ ಮಾಡಿದಾಗ ಇಡೀ ಸಭಾಂಗಣ ನಗೆಗಡಲಲ್ಲಿ ತೇಲಿತು.

ರಚಿತಾ ರಾಮ್ ಸ್ಯಾಂಡಲ್‌ವುಡ್ ಶ್ರೀದೇವಿ ಅಂದ್ರು ಖ್ಯಾತ ನಿರ್ದೇಶಕ!

ಇದು ಆಗಿದ್ದು ‘ದ್ವಾರಕೀಶ್ ಚಿತ್ರ’ ಸಂಸ್ಥೆಯ ಬಹು ನಿರೀಕ್ಷಿತ ಚಿತ್ರ ‘ಆಯುಷ್ಮಾನ್‌ಭವ’ ಆಡಿಯೋ ಲಾಂಚ್ ಸಂದರ್ಭ. ಈ ಕಾರ್ಯಕ್ರಮಕ್ಕೆ ರವಿಚಂದ್ರನ್ ಅತಿಥಿ ಆಗಿ ಬಂದಿದ್ದರು. ಅಲ್ಲಿ ಅವರು ಹೊಸ ಗೆಟಪ್‌ನಲ್ಲಿ ಕಾಣಿಸಿಕೊಂಡರು. ಇಷ್ಟು ದಿನ ‘ರವಿ ಬೋಪಣ್ಣ’ ಚಿತ್ರಕ್ಕಾಗಿ ಬಿಳಿ ದಾಡಿ ಬಿಟ್ಟ ಲುಕ್ ನಲ್ಲಿದ್ದರು. ಇದಕ್ಕಿದ್ದಂತೆ ಸ್ಟೈಲಿಶ್ ಆಗಿ ಮೀಸೆ ಬಿಟ್ಟು ಸಿಂಗಂ ಸ್ಟೈಲ್‌ನಲ್ಲಿ ಎಂಟ್ರಿ ಕೊಟ್ಟರು. ಇಡೀ ಸಭಿಕರ ಗಮನವೇ ಅವರ ಮೇಲೆ ಬಿತ್ತು. ಆಮೇಲೆ ಮಾತು ಶುರು ಮಾಡಿ, ‘ಆಪ್ತಮಿತ್ರ ಚಿತ್ರ ನಾನೇ ಮಾಡಬೇಕಿತ್ತು. ಆದರೆ ಅವತ್ತು ಅದಕ್ಕೆ ಯೋಗೇಶ್ ಕೈ ಹಾಕಿದ್ರು. ಆಯ್ತು ಚಿನ್ನ ನೀನೇ ಮಾಡು ಅಂದೆ. ಹಾಗೆ ಹೇಳುವಾಗ ಅವರಿಗೆ ಒಂದು ಮಾತು ಹೇಳಿದ್ದೆ.

ಈ ಸಿನಿಮಾ ಗೆದ್ದೇ ಗೆಲ್ಲುತ್ತೆ, ನೋಡ್ತೀರು ಅಂದಿದ್ದೆ. ಅದು ನಿಜವಾಯ್ತು. ಇವತ್ತು ಕೂಡ ಅಂತಹದ್ದೇ ನಂಬಿಕೆ ನನಗೆ ಆಯುಷ್ಮಾನ್ ಭವ ಚಿತ್ರದ ಮೇಲಿದೆ. ಈ ಸಿನಿಮಾ ಮಾಡಿದವರ ಮುಖದಲ್ಲಿ ನಗು ಇದೆ. ಸಂತೋಷ ಇದೆ. ಇದೆಲ್ಲ ಇದ್ದಾಗ ಈ ಸಿನಿಮಾ ಕೂಡ ಆಪ್ತಮಿತ್ರದಷ್ಟೇ ಗೆಲುವು ಕಾಣುತ್ತೆ’ ಅಂತ