ಕಾಪಿರೈಟ್ ಬಗ್ಗೆ ಸಿನಿಮಾದಲ್ಲಿರುವವರಿಗೆ ನಾಲೆಡ್ಜ್ ಇಲ್ಲ, ಎಲ್ಲವೂ ಕೋರ್ಟಲ್ಲಿ ನೋಡಿಕೊಳ್ಳುವೆ: ರಕ್ಷಿತ್ ಶೆಟ್ಟಿ

ವಿವಾದಲ್ಲಿ ಸಿಲುಕಿರುವ ನಟ,ನಿರ್ದೇಶಕ ರಕ್ಷಿತ್ ಶೆಟ್ಟಿ ಯಶವಂತಪುರ ಪೊಲೀಸ್ ಠಾಣೆಗೆ  ವಿಚಾರಣೆಗೆ ಹಾಜರಾಗಿದ್ದಾರೆ. ಕಾಪಿ ರೈಟ್ಸ್ ಉಲ್ಲಂಘನೆ ಆರೋಪದಲ್ಲಿ ಸಿಲುಕಿರುವ ನಟನಿಗೆ ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ನೀಡಲಾಗಿತ್ತು.

Kannada actor Rakshit Shetty visit Yeshwanthpur police station for investigation over copyright violation  case gow

ಬೆಂಗಳೂರು (ಆ.2): ವಿವಾದಲ್ಲಿ ಸಿಲುಕಿರುವ ನಟ,ನಿರ್ದೇಶಕ ರಕ್ಷಿತ್ ಶೆಟ್ಟಿ ಯಶವಂತಪುರ ಪೊಲೀಸ್ ಠಾಣೆಗೆ  ವಿಚಾರಣೆಗೆ ಹಾಜರಾಗಿದ್ದಾರೆ. ಕಾಪಿ ರೈಟ್ಸ್ ಉಲ್ಲಂಘನೆ ಆರೋಪದಲ್ಲಿ ಸಿಲುಕಿರುವ ನಟನಿಗೆ ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ನೀಡಲಾಗಿತ್ತು. ನವೀನ್ ಕುಮಾರ್ ಎಂಬುವವರು ದೂರು ನೀಡಿದ ಹಿನ್ನೆಲೆಯಲ್ಲಿ ಸಂಕಷ್ಟ ಎದುರಿಸುತ್ತಿದ್ದಾರೆ ಸಿಂಪಲ್ ಸ್ಟಾರ್.

ಪೊಲೀಸ್‌ ಠಾಣೆಯಿಂದ ವಿಚಾರಣೆ ಮುಗಿಸಿ ಹೊರಬಂದಿರುವ ನಟ, ಮೂರ್ನಾಲ್ಕು ಹಳೆ ಹಾಡುಗಳನ್ನ ಬ್ಯಾಕ್ ಗ್ರೌಂಡ್ ನಲ್ಲಿ ಬಳಸುವ ಸನ್ನಿವೇಶವಿತ್ತು. ಹಾಡುಗಳ ಬಳಕೆಗೆ ಪರ್ಮೀಷನ್ ತೆಗದುಕೊಳ್ಳೋದಕ್ಕೆ ರಾಜೇಶ್ ಅವರಿಗೆ ಹೇಳಿದ್ದೆ. ರಾಜೇಶ್ ಅವರು ಫೋನ್ ಮಾಡಿದಾಗ ದೊಡ್ಡ ಮೊತ್ತಕ್ಕೆ ಡಿಮ್ಯಾಂಡ್ ಬಂತು. ಅಷ್ಟು ಕೊಡುವ ಅವಶ್ಯಕತೆಯಿಲ್ಲ. ಮೂರ್ನಾಲ್ಕು ಬಾರಿ ಮಾತುಕತೆಯಾಗಿತ್ತು. ಒಂದು ಹಾಡು ಬ್ಯಾಕ್ ಗ್ರೌಂಡ್ ನಲ್ಲಿ ಬಂದಿದೆ. ಕಾಪಿ ರೈಟ್ ವಾಯ್ಲೇಷನ್ ಅಲ್ಲ ಇದು. ಕಾಪಿ ರೈಟ್ ಆ್ಯಕ್ಟ್ ಏನೇಳುತ್ತೆ ಕೋರ್ಟ್ ನಲ್ಲಿ ನೋಡೋಣ. ಕಾಪಿರೈಟ್ ಬಗ್ಗೆ ಸಿನಿಮಾದಲ್ಲಿರುವವರಿಗೆ ನಾಲೆಡ್ಜ್ ಇಲ್ಲ. ಹಳೇ ಸಿನಿಮಾ ಹಾಡುಗಳನ್ನು ಬಳಸಿಕೊಳ್ಳುವುದು ತಪ್ಪಾ? ಕೋರ್ಟ್ ತೀರ್ಮಾನ ಮಾಡಲಿ. ಕಿರಿಕ್ ಪಾರ್ಟಿ ವಿಚಾರದಲ್ಲೂ ಸರಿ ಅಂತಾ ಕೋರ್ಟ್ ನಿಂದ ತೀರ್ಪು ಬಂದಿತ್ತು. ಆ ಬಳಿಕ ಹೊರಗೆ ಸಂಧಾನ ಮಾತುಕತೆಯಾಗಿತ್ತು. ಸ್ಟೇಷನ್ ನಲ್ಲಿ ಸ್ಟೇಟ್ ಮೆಂಟ್ ನೀಡಿದ್ದೇನೆ. ಮುಂದೆ ಕಾನೂನು ಹೋರಾಟ ಕೋರ್ಟ್ ನಲ್ಲಿ ನಡೆಸಲಾಗುವುದು. ನಮಗೂ ಅರ್ಥವಾಗಲಿ ಯಾವುದೂ ಬಳಸಬೇಕು ಯಾವುದು ಬಳಸಬಾರದು ಅಂತಾ. ನಮ್ಮ ಪ್ರಕಾರ ಇದು ಸರಿ ಅಂತಾ ವಾದ ಮಾಡ್ತೀನಿ ಎಂದಿದ್ದಾರೆ.

ಒಂದು ಗಂಟೆಗೂ ಹೆಚ್ಚು ಕಾಲ ಯಶವಂತಪುರ ಪೊಲೀಸರಿಂದ‌ ನಟ ರಕ್ಷಿತ್ ಶೆಟ್ಟಿ ವಿಚಾರಣೆ ನಡೆದಿದ್ದು, ಬ್ಯಾಚುಲರ್ ಪಾರ್ಟಿ ಸಿನಿಮಾದಲ್ಲಿ ಗಾಳಿಮಾತು ಹಾಗು ನ್ಯಾಯ ಎಲ್ಲಿದೆ ಎಂಬ ಎರಡು ಹಾಡು ಅನುಮತಿಯಿಲ್ಲದೆ ಬಳಕೆ ಮಾಡಿಕೊಂಡ ಆರೋಪ ಬಗ್ಗೆ ಪೊಲೀಸರು ಪ್ರಶ್ನಿಸಿದ್ದಾರೆ. ಈ ವೇಲೆ ಸಿನಿಮಾ ತೆರೆಕಾಣುವುದಕ್ಕೂ ಮುನ್ನ MRT  ಸಂಸ್ಥೆಯ ಮುಖ್ಯಸ್ಥರೊಂದಿಗೆ ಮಾತುಕತೆ ನಡೆಸಿದ್ದೇವೆ ಅಂತ ಉತ್ತರ ನೀಡಿದ್ದಾರೆ. ಬ್ಯಾಚುಲರ್ ಪಾರ್ಟಿ ಸಿನಿಮಾದಲ್ಲಿ ನಾವು ಹಾಡು ಬಳಕೆ ಮಾಡುವ ಕುರಿತು ಮಾತುಕತೆ ನಡೆಸಿದ್ದೆವು. ಆದರೆ ಅವರು ನಮ್ಮ ಮುಂದೆ ಇಟ್ಟ ಶುಲ್ಕ ನಮ್ಮ ಬಡ್ಜೆಟ್ ಅನ್ನು ಮೀರಿತ್ತು. ಎಂ ಆರ್ ಟಿ ಸಂಸ್ಥೆ ಶುಲ್ಕದ ಕುರಿತಾಗಿ ಮರು ಮಾತುಕತೆಗೆ ಅವರು ತಯಾರಿರರಿಲ್ಲ. ಈಗ ನಮ್ಮ ಮೇಲೆ ಹಾಡಿನ ಉಲ್ಲಂಘನೆಯ ಆರೋಪ ಮಾಡಿದ್ದಾರೆ ಎಂದು ಚಿತ್ರದಲ್ಲಿ ಬಳಕೆಯಾಗಿರುವ ಹಾಡಿನ ತುಣುಕುಗಳ  ರಕ್ಷಿತ್ ಶೆಟ್ಟಿ ಪೊಲೀಸ್ ವಿಚಾರಣೆ ವೇಳೆ ತೋರಿಸಿದ್ದಾರೆ.

ರಕ್ಷಿತ್ ಕಾಪಿ ರೈಟ್ಸ್ ಉಲ್ಲಂಘನೆ ಆರೋಪದಲ್ಲಿ ಸಿಲುಕಿದ್ದು,  ಎರಡು ಸಾಂಗ್ ಕಾಪಿ ರೈಟ್ಸ್ ಉಲ್ಲಂಘನೆಯ ಆರೋಪ ಕೇಳಿ ಬಂದಿತ್ತು.  ಬ್ಯಾಚುಲರ್ಸ್ ಪಾರ್ಟಿ ಸಿನಿಮಾಗಾಗಿ  ನ್ಯಾಯ ಎಲ್ಲಿದೆ ಸಾಂಗ್ ಅನಧಿಕೃತವಾಗಿ ಬಳಕೆ ಮಾಡಲಾಗಿದೆ ಎಂದು ಆರೋಪವಿದೆ. ರಕ್ಷಿತ್ ಶೆಟ್ಟಿ ಒಡೆತನದ ಪರಂವಾ ಸ್ಟುಡಿಯೋಸ್ ನಿರ್ಮಾಣ ಮಾಡಿರುವ  ‘ಬ್ಯಾಚುಲರ್‌ ಪಾರ್ಟಿ’ ಸಿನಿಮಾದಲ್ಲಿ ‘ನ್ಯಾಯ ಎಲ್ಲಿದೆ’, ‘ಒಮ್ಮೆ ನಿನ್ನನ್ನು..’ ಹಾಡುಗಳ ಬಳಕೆ. ಅನುಮತಿ ಪಡೆಯದೆ ,ಕಾನೂನು ಬಾಹಿರವಾಗಿ ಬಳಕೆ ಮಾಡಿಕೊಂಡಿದ್ದಾರೆಂದು ಆರೋಪಿಸಿ ಕೇಸ್ ದಾಖಲಾಗಿದೆ.

ದೀಪಿಕಾ ಪಡುಕೋಣೆ ಗರ್ಭಿಣಿಯಾಗಿರುವ ಬಗ್ಗೆ ಐವಿಎಫ್ ತಜ್ಞೆ ಅನುಮಾನ, ಬೇಬಿ ಬಂಪ್‌ ಶೇಪ್ ಬಗ್ಗೆ ಕಮೆಂಟ್‌!

ಈ ಸಂಬಂಧ MRT ಮ್ಯೂಸಿಕ್ ಸಂಸ್ಥೆಯ ನವೀನ್ ಕುಮಾರ್ ದೂರು ನೀಡಿದ್ದರು. ಯಶವಂತಪುರ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ಆಗಿತ್ತು. ಕಾಪಿ ರೈಟ್ಸ್ ಆ್ಯಕ್ಸ್ ಸೆ. 63 ರಡಿ ಅನುಮತಿ ಇಲ್ಲದೇ ಹಾಡು ಬಳಕೆ ಮಾಡಿದ ಆರೋಪದಲ್ಲಿ ನಟ ರಕ್ಷಿತ್ ಶೆಟ್ಟಿ ವಿರುದ್ಧ ಕೇಸ್ ದಾಖಲು ಮಾಡಲಾಗಿತ್ತು.

2024ರಲ್ಲಿ ಪ್ರೆಗ್ನೆನ್ಸಿ ಅನೌನ್ಸ್ ಮಾಡಿದ ಕನ್ನಡ ನಟಿಯರ ಸಾಲಿಗೆ ಹರ್ಷಿಕಾ ಸೇರ್ಪಡೆ, ಯಾರೆಲ್ಲ ಇದ್ದಾರೆ?

ಸಿನೆಮಾ ತಯಾರಾಗುವ ಸಮಯದಲ್ಲಿ ನವೀನ್ ಕುಮಾರ್ ಎಂಬುವವರ ಜೊತೆ ಹಾಡುಗಳ ಬಗ್ಗೆ ಮಾತುಕತೆ ನಡೆದಿತ್ತು. ನವೀನ್ ಕುಮಾರ್ ಹಾಡುಗಳ ಕಾಪಿರೈಟ್ ಪಡೆದು ಮಾರಾಟ ಮಾಡ್ತಿದ್ದ ಬ್ಯುಸಿನೆಸ್ ಮೆನ್  ಇವರ ಜೊತೆ ಹಾಡಿಗೆ ಸಂಬಂಧಿಸಿದ ಮಾತುಕತೆ ನಡೆದಿತ್ತು. ಆದರೆ ನಾನಾ ಕಾರಣಕ್ಕೆ ಈ ಡೀಲ್ ಮುರಿದು ಬಿದ್ದಿತ್ತು. ಆದರೂ ಆ ಹಾಡನ್ನ ಮಾಲೀಕರ ಅನುಮತಿ ಇಲ್ಲದೆ ಬಳಕೆ ಮಾಡಲಾಗಿದ್ದು, ಚಿತ್ರದಲ್ಲಿ ಎರಡೂ ಹಾಡುಗಳನ್ನ ಬಳಕೆ ಮಾಡಿದ್ದಾರೆಂದು ನವೀನ್ ರಿಂದ ಯಶವಂತಪುರ ಪೊಲೀಸ್ ಠಾಣೆಯಲ್ಲಿ ಎಫ್ ಐ ಆರ್ ದಾಖಲಾಗಿತ್ತು.

ಈ ಹಿಂದೆ ಕಿರಿಕ್ ಪಾರ್ಟಿಯಲ್ಲಿ ಹಂಸಲೇಖರ ಒಂದು ಟ್ಯೂನ್ ಕದ್ದರು ಎಂದು  ಆರೋಪಿಸಲಾಗಿತ್ತು. ಹೀಗಾಗಿ ಇದು ಎರಡನೇ ಬಾರಿಗೆ ರಕ್ಷಿತ್ ವಿರುದ್ಧ ಕಾಪಿ ರೈಟ್‌ ದೂರು ದಾಖಲಾಗುತ್ತಿರುವುದು.

Latest Videos
Follow Us:
Download App:
  • android
  • ios