ಈ ಚಿತ್ರಕ್ಕೆ ಹಣ ಕೊಡ್ತೇವೆ, ರೀ ರಿಲೀಸ್ ಮಾಡಿ ಎನ್ನುತ್ತಿದ್ದಾರೆ ಪ್ರೇಕ್ಷಕರು!
ಪ್ರತಿ ವಾರ ಗಾಂಧಿನಗರದಲ್ಲಿ ಚಿತ್ರಗಳು ಬಿಡುಗಡೆಯಾಗುತ್ತೆ, ಅವುಗಳಲ್ಲಿ ಕೆಲವು ಮಾತ್ರ ಗಟ್ಟಿಯಾಗಿ ನಿಲ್ಲುತ್ತವೆ ಅಷ್ಟೇ. ಮತ್ತೆ ಒಂದೋ ಎರಡೋ ಸಿನಿಮಾದ ಹೆಸರು ಅಲ್ಲಿ ಇಲ್ಲಿ ಕೇಳಿ ಬಂದು ಹಾಗೆಯೇ ಮರೆ ಆಗೋದೇ ಹೆಚ್ಚು. ಇನ್ನೂ ಚಿತ್ರ ಮಂದಿರದಿಂದ ಮರೆಯಾದ ಬಳಿಕವೂ ಮತ್ತೆ ರಿಲೀಸ್ ಮಾಡಲು ಪ್ರೇಕ್ಷಕರಿಂದ ಬೇಡಿಕೆ ಬರೋದಂತೂ ವಿರಳ. ಆ ಸಾಲಿಗೆ 'ದಿಯಾ' ಮತ್ತು 'ಲವ್ ಮಾಕ್‌ಟೈಲ್' ಚಿತ್ರಗಳು ಸೇರಿವೆ. ಈ ಚಿತ್ರಗಳನ್ನು ಪುನಾ ಬಿಡುಗಡೆ ಮಾಡಿ ಚಿತ್ರಮಂದಿರಗಳಲ್ಲಿಯೇ ನೋಡಬೇಕು ಎಂದು ಒತ್ತಾಯಿಸುತ್ತಿದ್ದಾರೆ. ಚಿತ್ರಮಂದಿರದಲ್ಲಿ ನೋಡದ ತಪ್ಪಿಗಾಗಿ ಜನರು ನಿರ್ಮಾಪಕರಿಗೆ ದುಡ್ಡು ಕೊಡಲು ಮುಂದಾಗಿದ್ದಾರೆ. ಇದಕ್ಕೆ ಎರಡು ತಂಡ ವಿಭಿನ್ನವಾಗಿ ಪ್ರತಿಕ್ರಿಯೆ ನೀಡಿದೆ.
ಸಿನಿಮಾ ಹಾಲ್‌ಗಳಿಂದ ದೂರಾದ ಮೇಲೂ 'ದಿಯಾ' ಮತ್ತು 'ಲವ್ ಮಾಕ್‌ಟೈಲ್' ಚಿತ್ರಗಳಿಗೆ ಬಾರಿ ಡಿಮ್ಯಾಂಡ್.
ಅಮೆಜಾನ್ ಪ್ರೈಮ್‌ನಲ್ಲಿ ಈ ಚಿತ್ರಗಳ ಹೆಚ್ಚು ವೀಕ್ಷಣೆ.
ಮೊಬೈಲ್‌ನಲ್ಲಿ ಫಿಲ್ಮಂಗಳನ್ನು ನೋಡಿದ ತಪ್ಪಿನ ಪಶ್ಚಾತ್ತಾಪಕ್ಕಾಗಿ ನಿರ್ಮಾಪಕರಿಗೆ ದುಡ್ಡು ಕೊಡಲು ಮುಂದಾಗುತ್ತಿದ್ದಾರೆ ಮಂದಿ.
ಸಿನಿಮಾಗಳನ್ನು ಮತ್ತೆ ಚಿತ್ರಮಂದಿರಗಳಲ್ಲಿಯೇ ನೋಡಬೇಕು ಎಂದು ರಿ ರಿಲೀಸ್‌ಗೆ ಒತ್ತಾಯ.
ನಾವು ಗೂಗಲ್ ಪೇ ಅಥವಾ ಇನ್ಯಾವುದೇ ರೀತಿಯಲ್ಲಿ ಹಣವನ್ನು ಸ್ವೀಕರಿಸುತ್ತಿಲ್ಲ, ಯಾವುದೇ ವಂದತಿ ನಂಬಬೇಡಿ - ದಿಯಾ ನಿರ್ಮಾಪಕರು
ತಾವು ಟಿಕೆಟ್ ಹಣ ಕೊಡಲು ಸಿದ್ಧರಿರುವುದಾಗಿ ಸಂದೇಶಗಳು ಬರುತ್ತಿವೆ, ಹಣ ಕಳಿಸಲು ಬಯಸುವವರಿಗಾಗಿ ಯುಪಿಐ ಐಡಿ ಇಲ್ಲಿದೆ.- ಕೃಷ್ಣ, ಲವ್ ಮ್ಯಾಕ್‌ಟೈಲ್‌ನ ನಟ ನಿರ್ಮಾಪಕ
ಚಿತ್ರಗಳ ಬಗ್ಗೆ ಸೋಶಿಯಲ್ ಮಿಡೀಯಾದಲ್ಲಿ ಬಾರಿ ಮೆಚ್ಚುಗೆ ಹರಿದಾಡುತ್ತಿದೆ.
ಇನ್ನೂ ಚಿತ್ರಮಂದಿರದಲ್ಲಿ ಇರುವಾಗಲೇ ಅಮೆಜಾನ್ ಪ್ರೈಮ್‌ನಲ್ಲಿ ಬಿಡುಗಡೆಯಾಗಿತ್ತು ಲವ್ ಮಾಕ್‌ಟೈಲ್ .
ಈಗಲೂ ಹಲವರ ಸ್ಟೇಟಸ್‌ಗಳಲ್ಲಿ ಈ ಸಿನಿಮಾ ಕ್ಲಿಪ್ಪಿಂಗ್ ಕಾಣಬಹುದು.
ಅನ್‌ಲೈನ್‌ನಲ್ಲಿ 2 ಫಿಲ್ಮಂಗಳಿಗೆ ಸಖತ್ ವಿವ್ಯೂ ,ನಂತರ ಬಾರಿ ಪಬ್ಲಿಸಿಟಿ.