Asianet Suvarna News Asianet Suvarna News

ಸಿಎಂ ಬೊಮ್ಮಾಯಿ ಅವರನ್ನು ಭೇಟಿಯಾದ ರಾಘವೇಂದ್ರ ರಾಜ್‌ಕುಮಾರ್!

ಕರ್ನಾಟಕದ ನೂತನ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರನ್ನು ಭೇಟಿ ಮಾಡಿದ ರಾಜ್‌ಕುಮಾರ್ ಪುತ್ರ ರಾಘವೇಂದ್ರ ರಾಜ್ ಕುಮಾರ್ ಮತ್ತು ಮೊಮ್ಮಗ. 

Kannada actor Ragavendra Rajkumar meets Karnataka CM Basavaraj Bommai vcs
Author
Bangalore, First Published Aug 7, 2021, 6:09 PM IST
  • Facebook
  • Twitter
  • Whatsapp

ಕನ್ನಡ ಚಿತ್ರರಂಗದ ಹಿರಿಯ ನಟ, ನಿರ್ಮಾಪಕ ರಾಘವೇಂದ್ರ ರಾಜ್‌ಕುಮಾರ್ ಇಂದು ಕರ್ನಾಟಕ ನೂತನ ಮುತ್ರಮಂತ್ರಿ ಬಸವರಾಜ್‌ ಬೊಮ್ಮಾಯಿ ಅವರನ್ನು ಭೇಟಿ ಮಾಡಿದ್ದಾರೆ. ಈ ವೇಳೆ ಮಾಧ್ಯಮ ಮಿತ್ರರೊಂದಿಗೆ ಮಾತನಾಡಿ, ಭೇಟಿ ಮಾಡಿದ ಕಾರಣ ತಿಳಿಸಿದ್ದಾರೆ. 

'ಸಿಎಂ ಅವರ ಇಡೀ ಕುಟುಂಬ ನಮ್ಮ ಫ್ಯಾಮಿಲಿ ಫ್ರೆಂಡ್ಸ್. ಇವರ ಮದುವೆಗೆ ನಮ್ಮ ತಂದೆ ಹೋಗಿದ್ದರು ಅವಾಗಿನಿಂದ ನಮಗೆ ತುಂಬಾ ಗೊತ್ತಿರುವವರು. ಈಗ ನಾವು ಭೇಟಿ ನೀಡಿದ್ದು ಎರಡು ಉದ್ದೇಶ. ಒಂದು ಅವರಿಗೆ ಶುಭಾಶಯಗಳ್ನು ತಿಳಿಸುವುದಕ್ಕೆ, ಇನ್ನೊಂದು ನಮ್ಮ ಎಜುಕೇಶನ್ ಸೆಂಟರ್‌ನಿಂದ ನಡೆಸಲಾಗುವ ಎಜುಕೇಶನ್ ಕಾರ್ಯಕ್ರಮಕ್ಕೆ ಆಹ್ವಾನ ನೀಡಲು ಬಂದಿದ್ದೀವಿ. ಅವರು ತಿಳಿಸುತ್ತೇನೆ ಎಂದಿದ್ದಾರೆ,' ಎಂದು ರಾಘವೇಂದ್ರ ರಾಜ್‌ಕುಮಾರ್ ಅವರು ಮಾತನಾಡಿದ್ದಾರೆ.

ಯಡಿಯೂರಪ್ಪಗೆ ಮಹತ್ವದ ಸ್ಥಾನಮಾನ ನೀಡಿದ ಬೊಮ್ಮಾಯಿ ಸರ್ಕಾರ

ರಾಘಣ್ಣನ ಜೊತೆ ಹಿರಿಯ ಪುತ್ರ ಯುವ ಕೂಡ ಸಿಎಂರನ್ನು ಭೇಟಿ ಮಾಡಿದ್ದಾರೆ. ಯುವ ಇದೀಗ ಚಿತ್ರರಂಗಕ್ಕೆ ಕಾಲಿಡುತ್ತಿರುವ ಯುವ ಪ್ರತಿಭೆ. ಸಿಎಂ ಅವರಿಗೆ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಕೂಡ ಮಾವ ಎಂದು ಕರೆಯುವ ಮೂಲಕ ಶುಭಾಶಯಗಳು ತಿಳಿಸಿದ್ದರು. ಇನ್ನು ಕನ್ನಡ ಚಿತ್ರರಂಗದ ತೆರೆದಿರುವುದರ ಬಗ್ಗೆ ರಾಘಣ್ಣರನ್ನು ಪ್ರಶ್ನೆ ಮಾಡಿದಾಗ 'ಫಿಲ್ಮಂ ಚೇಂಬರ್ ಹೇಳಿದ ರೀತಿ ನಾವು ಮಾಡುತ್ತೇವೆ,' ಎಂದು ಹೇಳಿದ್ದಾರೆ.

ಇವತ್ತು ಕನ್ನಡ ಸಿನಿ ನಿರ್ದೇಶಕ ಇಂದ್ರಜಿತ್ ಲಂಕೇಶ್ ಸಹ ಸಿಎಂ ಬೊಮ್ಮಾಯಿ ಅವರನ್ನು ಭೇಟಿಯಾಗಿದ್ದಾರೆ. ಭೇಟಿಗೆ ಕಾರಣ ತಿಳಿಸಿಲ್ಲ.

Follow Us:
Download App:
  • android
  • ios