ಪುನೀತ್ ರಾಜ್‌ಕುಮಾರ್ ಕೊನೆಯ ಚಿತ್ರ ಗಂಧದ ಗುಡಿ ನಾಳೆ ರಿಲೀಸ್ ಆಗುತ್ತಿದೆ. 200 ಚಿತ್ರಮಂದಿರಗಳಲ್ಲಿ ಕರ್ನಾಟಕದ ಸಂಪತ್ತು ಅನಾವರಣಗೊಳ್ಳಲಿದೆ. ಈ ಚಿತ್ರಕ್ಕೆ ಈಗಾಲೇ ಭಾರತೀಯ ಸಿನಿ ರಂಗದ ದಿಗ್ಗಜರು ಶುಭಕೋರಿದ್ದಾರೆ. ಇಷ್ಟೇ ಅಲ್ಲ ಟೀಂ ಇಂಡಿಯಾ ಕ್ರಿಕೆಟಿಗರು ಗಂಧದಗುಡಿ ಯಶಸ್ಸಿಗೆ ಹಾರೈಸಿದ್ದಾರೆ.
ಬೆಂಗಳೂರು(ಅ.27): ಪುನೀತ್ ರಾಜ್‌ಕುಮಾರ್ ಕೊನೆಯ ತಿತ್ರ ಗಂಧದಗುಡಿ. ಕರ್ನಾಟಕ ಸಸ್ಯ, ಜೀವರಾಶಿಗಳು, ಸೌಂದರ್ಯವನ್ನು ಸೆರೆಹಿಡಿದಿರುವ ಈ ಚಿತ್ರ ನಾಳೆ(ಅ.28) 200 ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗುತ್ತಿದೆ. ಚಿತ್ರಕ್ಕಾಗಿ ಅಭಿಮಾನಿಗಳು ಕಾಯುತ್ತಿದ್ದಾರೆ. ಪುನೀತ್ ರಾಜ್‌ಕುಮಾರ್ ಅವರನ್ನು ನೈಜವಾಗಿ ತೆರಮೇಲೆ ನೋಡುವ ಕಾತರ ಹೆಚ್ಚಾಗಿದೆ. ಬಾಲಿವುಡ್, ಕಾಲಿವುಡ್, ಟಾಲಿವುಡ್ ಸೇರಿದಂತೆ ಭಾರತೀಯ ಸಿನಿಮಾ ದಿಗ್ಗಜರು ಅಪ್ಪು ಗಂಧದಗುಡಿ ಚಿತ್ರಕ್ಕೆ ಶುಭಕೋರಿದ್ದಾರೆ. ಇದೀಗ ಟೀಂ ಇಂಡಿಯಾ ಕ್ರಿಕೆಟಿಗರು ಪುನೀತ್ ರಾಜ್‌ಕುಮಾರ್ ಗಂಧದಗುಡಿ ಚಿತ್ರದ ಯಶಸ್ಸಿಗೆ ಹಾರೈಸಿದ್ದಾರೆ. ಇಷ್ಟೇ ಅಲ್ಲ ನಗುಮುಖದ ಪುನೀತ್ ರಾಜ್‌ಕುಮಾರ್‌ನನ್ನು ನೆನೆಪಿಸಿಕೊಂಡಿದ್ದಾರೆ.
ಟೀಂ ಇಂಡಿಯಾ ಮಾಜಿ ಕೋಚ್, ದಿಗ್ಗಜ ಕ್ರಿಕೆಟಿಗ ಅನಿಲ್ ಕುಂಬ್ಳೆ, ಅಪ್ಪು ಗಂಧದಗುಡಿ ಚಿತ್ರ ನೋಡು ಕಾತರನಾಗಿದ್ದೇನೆ. ಇಡೀ ಚಿತ್ರತಂಡಕ್ಕೆ ಶುಭಾಶಯಗಳು ಎಂದು ಟ್ವೀಟ್ ಮಾಡಿದ್ದಾರೆ. ಕನ್ನಡದ ಅತ್ಯುತ್ತಮ ಚಿತ್ರಗಳನ್ನು ಅನಿಲ್ ಕುಂಬ್ಳೆ ವೀಕ್ಷಿಸಿ ಮೆಚ್ಚುಗೆ ವ್ಯಕ್ತಪಡಿಸಿ ಹಲವು ಉದಾಹರಣಗಳಿವೆ. ಇದೀಗ ಗಂಧದಗುಡಿ ಚಿತ್ರಕ್ಕಾಗಿ ಕಾಯುತ್ತಿರುವುದಾಗಿ ಹೇಳಿದ್ದಾರೆ.
Puneeth Rajkumar: ಗಂಧದ ಗುಡಿ ಟ್ರೈಲರ್‌ಗೆ ಪ್ರಧಾನಿ ಮೋದಿ ಮೆಚ್ಚುಗೆ
ಟೀಂ ಇಂಡಿಯಾ ಮಾಜಿ ಕ್ರಿಕೆಟಿಗ ವಿವಿಎಸ್ ಲಕ್ಷ್ಣಣ್ ಗಂಧದಗುಡಿ ಚಿತ್ರಕ್ಕೆ ಶುಭಹಾರೈಸಿದ್ದಾರೆ. ಇದೇ ವೇಳೆ ಅಪ್ಪು ನೆನೆಪಿಸಿಕೊಂಡಿದ್ದಾರೆ. ನಮಗೆ ಯಾವಾಗಲು ನಿಷ್ಕಲ್ಮಶ ನಗು ಹಾಗೂ ನಿಸ್ವಾರ್ಥ ಪ್ರೀತಿಯನ್ನು ನೀಡಿ ನಮ್ಮ ಪ್ರೀತಿಯ ಪುನೀತ್ ರಾಜ್‌ಕುಮಾರ್ ಅವರನ್ನು ಅಪ್ಪಿಕೊಳ್ಳವ ಸಮಯವಿದು. ಕರ್ನಾಟದಶ್ರೀಮಂತ ವನ್ಯಜೀವಿ ಮತ್ತು ಪರಂಪರಗೆ ನೀಡಿದ ಗೌವ ಗಂಧದಗುಡಿ. ಅಕ್ಟೋಬರ್ 28ಕ್ಕೆ ವಿಶ್ವಾದ್ಯಂತ ಚಿತ್ರ ಬಿಡುಗಡೆಯಾಗುತ್ತಿದೆ. ತಂಡಕ್ಕೆ ಶುಭಹಾರೈಸುತ್ತೇನೆ ಎಂದು ಲಕ್ಷ್ಣಣ್ ಟ್ವೀಟ್ ಮಾಡಿದ್ದಾರೆ.
ನರ್ತಕಿ ಚಿತ್ರಮಂದಿರದಲ್ಲಿ ಪುನೀತ್ ಬೃಹತ್ ಕಟೌಟ್
ಪುನೀತ್ ರಾಜ್‌ಕುಮಾರ್ ನಟನೆಯ ‘ಗಂಧದ ಗುಡಿ’ ಚಿತ್ರ ಅಕ್ಟೋಬರ್ 28ಕ್ಕೆ ಬಿಡುಗಡೆ ಆಗುತ್ತಿದೆ. ಈ ಹಿನ್ನೆಲೆಯಲ್ಲಿ ಬೆಂಗಳೂರಿನ ನರ್ತಕಿ ಥಿಯೇಟರ್ ಆವರಣದಲ್ಲಿ 80 ಅಡಿ ಎತ್ತರ ಇರುವ ಪುನೀತ್ ಅವರ ಬೃಹತ್ ಕಟೌಟ್ ರಾರಾಜಿಸುತ್ತಿದೆ. ಪುನೀತ್ ಸಮಾಧಿ ಇರುವ ಕಂಠೀರವ ಸ್ಟುಡಿಯೋ ಆವರಣದಲ್ಲಿ 75 ಕಟೌಟ್‌ಗಳನ್ನು ಇಡಲಾಗುತ್ತಿದೆ. ರಾಜ್ಯದೆಲ್ಲೆಡೆ ಪುನೀತ್ ಹವಾ ಶುರುವಾಗಿದ್ದು, ವಿವಿಧೆಡೆ ಅಪ್ಪು ಕಟೌಟ್‌ಗಳು ಗಮನಸೆಳೆಯುತ್ತಿವೆ. ಈಗಾಗಲೇ ‘ಗಂಧದ ಗುಡಿ’ ಚಿತ್ರದ ಪ್ರೀಮಿಯರ್ ಶೋಗೆ ಬುಕಿಂಗ್ ತೆರೆಯಲಾಗಿದ್ದು, 24 ಗಂಟೆ ಮೊದಲೇ ಬಹುತೇಕ ಟಿಕೆಟ್‌ಗಳು ಸೋಲ್ಡ್‌ಔಟ್ ಆಗಿವೆ. ‘ಗಂಧದ ಗುಡಿ’ ಚಿತ್ರವನ್ನು ಪಿಆರ್‌ಕೆ ಬ್ಯಾನರ್‌ನಲ್ಲಿ ಅಶ್ವಿನಿ ಪುನೀತ್ ರಾಜ್‌ಕುಮಾರ್ ನಿರ್ಮಿಸಿದ್ದು, ಅಮೋಘವರ್ಷ ನಿರ್ದೇಶನ ಮಾಡಿದ್ದಾರೆ.
Gandhada Gudi ಪ್ರೀಮಿಯರ್ ಶೋ ಟಿಕೆಟ್‌ಗಳು ಸೋಲ್ಡ್ ಔಟ್; ನಾಳೆ 200 ಥಿಯೇಟರ್‌ಗಳಲ್ಲಿ ರಿಲೀಸ್!
ಅಮೋಘವರ್ಷ ನಿರ್ದೇಶನದ, ಪುನೀತ್‌ರಾಜ್‌ಕುಮಾರ್ ಅವರು ಕಾಣಿಸಿಕೊಂಡಿರುವ ಕೊನೆಯ ಚಿತ್ರ ‘ಗಂಧದಗುಡಿ’. ಕೊರೋನಾ ಸಂದರ್ಭದಲ್ಲಿ ಗುಡ್ಡ, ಕಾಡು, ಅರಣ್ಯ ಸುತ್ತಾಡಿ ಅದನ್ನು ತಮ್ಮ ಕ್ಯಾಮೆರಾದಲ್ಲಿ ಸೆರೆ ಹಿಡಿಯುವಾಗಲೇ ಇದೊಂದು ಸಾಕ್ಷ್ಯ ಚಿತ್ರ ಮಾಡುವ ಯೋಚನೆ ಹೊಳೆದು, ಅದನ್ನು ‘ಗಂಧದಗುಡಿ’ ಹೆಸರಿನಲ್ಲಿ ಪ್ರೇಕ್ಷಕರ ಮುಂದೆ ತರುವ ಯೋಚನೆ ಮಾಡಿದ್ದರು ಪುನೀತ್ ರಾಜ್‌ಕುಮಾರ್. ಓಟಿಟಿ ಅಥವಾ ತಮ್ಮದೇ ಪಿಆರ್‌ಕೆ ಯೂಟ್ಯೂಬ್ ಚಾನಲ್‌ನಲ್ಲಿ ಬಿಡುಗಡೆ ಮಾಡುವ ಪ್ಲಾನ್ ಮಾಡಿಕೊಂಡಿದ್ದರು. ಆದರೆ, ಪುನೀತ್‌ರಾಜ್‌ಕುಮಾರ್ ಅಗಲಿದ ಮೇಲೆ ಈ ಸಾಕ್ಷ್ಯ ಚಿತ್ರಕ್ಕೆ ಸಿನಿಮಾ ರೂಪ ಕೊಟ್ಟು ಟೀಸರ್, ಟ್ರೇಲರ್ ಈಗಾಗಲೇ ಬಿಡುಗಡೆ ಮಾಡಿದ್ದಾರೆ. ಕರ್ನಾಟಕದ ಪ್ರಕೃತಿ ಸೌಂದರ್ಯವನ್ನು ದರ್ಶನ ಮಾಡುವ ಗಂಧದಗುಡಿ ಚಿತ್ರಮಂದಿರಗಳಲ್ಲಿ ಇದೇ ಅಕ್ಟೋಬರ್ 29ಕ್ಕೆ ತೆರೆ ಕಾಣುತ್ತಿದೆ. ಅದರ ಪ್ರೀ ರಿಲೀಸ್ ಈವೆಂಟ್ ಪುನೀತ ಪರ್ವ ಹೆಸರಿನಲ್ಲಿ ನಡೆಯಿತು.
