Asianet Suvarna News Asianet Suvarna News

ಸಾಮಾಜಿಕ ಜಾಲತಾಣದಲ್ಲಿ ಪುನೀತ್ 'ಜೇಮ್ಸ್' ಫೋಟೋ ವೈರಲ್

ಇಬ್ಬರು ಹುಡುಗಿಯರು ಗ್ರೇ ಕಲರ್ ಶಾರ್ಟ್ ಟಾಪ್, ಬ್ಲಾಕ್ ಕಲರ್ ಪ್ಯಾಂಟ್ ಹಾಗೂ ಬ್ಲಾಕ್ ಕಲರ್ ಜಾಕೆಟ್ ತೊಟ್ಟು, ಕೈಯಲ್ಲಿ ಗನ್ ಹಿಡಿದುಕೊಂಡು ಪುನೀತ್ ಅಕ್ಕಪಕ್ಕ ನಿಂತು ಕೊಟ್ಟಿರುವ ಪೋಸ್ ವೈರಲ್ ಆಗಿದೆ.

Kannada Actor Puneeth Rajkumar James Movie Photo viral In social Media
Author
Bangalore, First Published Oct 21, 2021, 2:22 PM IST
  • Facebook
  • Twitter
  • Whatsapp

ಸ್ಯಾಂಡಲ್‍ವುಡ್‌ನ ಪವರ್ ಸ್ಟಾರ್, ದೊಡ್ಮನೆ ಹುಡುಗ ಪುನೀತ್ ರಾಜ್‌ಕುಮಾರ್ (Puneeth Rajkumar) ಅಭಿನಯದ 'ಜೇಮ್ಸ್‌' (James) ಚಿತ್ರದ ಚಿತ್ರೀಕರಣ ಭರದಿಂದ ಸಾಗುತ್ತಿದ್ದು, ಈ ಮಧ್ಯೆ ಚಿತ್ರದ ಪೋಟೋವೊಂದು ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ (Viral) ಆಗಿದೆ. ಹೌದು! 'ಜೇಮ್ಸ್' ಚಿತ್ರದ ಚಿತ್ರೀಕರಣದ ವೇಳೆ ಪುನೀತ್ ಜೊತೆ ವಿದೇಶಿ ಹುಡುಗಿಯರು ಕ್ಲಿಕ್ಕಿಸಿಕೊಂಡಿರುವ ಫೋಟೋ ವೈರಲ್ ಆಗಿದೆ. ಹಾಗೂ ಈ ಇಬ್ಬರು ಹುಡುಗಿಯರು ಗ್ರೇ ಕಲರ್ ಶಾರ್ಟ್ ಟಾಪ್, ಬ್ಲಾಕ್ ಕಲರ್ ಪ್ಯಾಂಟ್ ಹಾಗೂ ಬ್ಲಾಕ್ ಕಲರ್ ಜಾಕೆಟ್ ತೊಟ್ಟು, ಕೈಯಲ್ಲಿ ಗನ್ ಹಿಡಿದುಕೊಂಡು ಪುನೀತ್ ಅಕ್ಕಪಕ್ಕ ನಿಂತು ಪೋಸ್ (Pose) ನೀಡಿರುವುದನ್ನು ಕಾಣಬಹುದಾಗಿದೆ. ಒಟ್ಟಾರೆ ಈ ಫೋಟೋಗೆ ಅಭಿಮಾನಿಗಳು (Fans) ಥ್ರಿಲ್ ಆಗಿದ್ದು, ಸಿನಿಮಾದ ಬಗ್ಗೆ ಮತ್ತಷ್ಟು ನಿರೀಕ್ಷೆ ಹೆಚ್ಚಾಗುತ್ತಿದೆ.

'ಜೇಮ್ಸ್' ಚಿತ್ರದಲ್ಲಿ ಶರತ್ ಕುಮಾರ್ ವಿಲನ್!

ನಿರ್ದೇಶಕ ಚೇತನ್ ಕುಮಾರ್ (Chetan Kumar) 'ಜೇಮ್ಸ್ ಸಿನಿಮಾ' ಮೂಲಕ ಇದೇ ಮೊದಲ ಬಾರಿಗೆ ಪುನೀತ್‍ಗೆ ಆ್ಯಕ್ಷನ್ ಕಟ್ ಹೇಳುತ್ತಿದ್ದಾರೆ. ಈ ಹಿಂದೆ ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಅಭಿನಯಿಸಿದ್ದ ಬಹದ್ದೂರ್ (Bahaddur), ಭರ್ಜರಿ (Bharjari) ಹಾಗೂ ನಟ ಶ್ರೀ ಮುರಳಿ ಅಭಿನಯಿಸಿದ್ದ ಭರಾಟೆ (Bharate) ಸಿನಿಮಾವನ್ನು ಚೇತನ್ ನಿರ್ದೇಶಿಸಿದ್ದರು. ಈ ಚಿತ್ರದಲ್ಲಿ ಪುನೀತ್‌ ವಿಶೇಷ ಸ್ಟಂಟ್ಸ್‌, ಹೈವೋಲ್ಟೇಜ್‌ ಆ್ಯಕ್ಷನ್‌ ಜೊತೆಗೆ ವಿಭಿನ್ನ ಗೆಟಪ್‌ನಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಕಾಲಿವುಡ್‌ ನಟಿ ಪ್ರಿಯಾ ಆನಂದ್ (Priya Anand)​ ಜೇಮ್ಸ್​ನಲ್ಲಿ ನಾಯಕಿಯಾಗಿ ಎರಡನೇ ಬಾರಿಗೆ ಪುನೀತ್ ಜೊತೆ ನಟಿಸುತ್ತಿದ್ದಾರೆ. 'ರಾಜಕುಮಾರ' (Rajakumara) ಸಿನಿಮಾದಲ್ಲಿ ಪುನೀತ್​ ಜೊತೆ ಪ್ರಿಯಾ ಆನಂದ್​ ಅಭಿನಯಿಸಿದ್ದರು.

ವೈರಲ್ ಆಯ್ತು ಪುನೀತ್ ರಾಜ್‌ಕುಮಾರ್ ವರ್ಕೌಟ್ ವಿಡಿಯೋ!

'ರಾಜಕುಮಾರ' ಚಿತ್ರದಲ್ಲಿ ಪುನೀತ್ ತಂದೆಯಾಗಿ ಅಭಿನಯಿಸಿದ್ದ, ಹಿರಿಯ ತಮಿಳು ನಟ ಶರತ್ ಕುಮಾರ್ (Sarathkumar) ಈ ಚಿತ್ರದಲ್ಲಿ ಸ್ಟೈಲಿಶ್ ವಿಲನ್ (Vilain) ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ಅಕ್ರಮಣಕಾರ ಸ್ವಭಾವದ ಪಾತ್ರ ಎನ್ನಲಾಗಿದೆ. ಬಹುತೇಕ ಮಾತಿನ ಭಾಗದ ಚಿತ್ರೀಕರಣ ಮುಗಿದಿದ್ದು, ಹಾಡುಗಳು ಬಾಕಿ ಇವೆ. ಮಂಗಳೂರು ಹಾಗೂ ವಿದೇಶಗಳಲ್ಲಿ ಹಾಡುಗಳನ್ನು ಚಿತ್ರೀಕರಿಸುವ ಪ್ಲ್ಯಾನ್‌ ಅನ್ನು ಚಿತ್ರತಂಡ ಹಾಕಿಕೊಂಡಿದೆ. ಅಲ್ಲದೇ ಚಿತ್ರದ ಸ್ಯಾಟಲೈಟ್ ಹಕ್ಕುಗಳು 15 ಕೋಟಿಗೆ ಮಾರಾಟವಾಗಿದೆ. 

 

ಇದುವರೆಗೆ ಮಾರಾಟವಾದ ಪುನೀತ್ ಅವರ ಚಿತ್ರಗಳಲ್ಲೇ ಇದು ಅತ್ಯಧಿಕ ಮೊತ್ತ ಎನ್ನಲಾಗುತ್ತಿದೆ.  ಚಿತ್ರಕ್ಕೆ ಎ. ಹರ್ಷ ನೃತ್ಯ ನಿರ್ದೇಶಿಸಲಿದ್ದು, ಸ್ಟಂಟ್ ಮಾಸ್ಟರ್ ವಿಜಯ್ ಫೈಟಿಂಗ್ ದೃಶ್ಯಾವಳಿಗಳನ್ನು ನಿರ್ದೇಶಿಸಲಿದ್ದಾರೆ ಹಾಗೂ ನಿರ್ಮಾಪಕ ಕಿಶೋರ್ ಪತಿಕೊಂಡ (Kishor Patikonda) ಬಂಡವಾಳ ಹೂಡಿದ್ದಾರೆ. 'ಟಗರು' ಖ್ಯಾತಿಯ ಚರಣ್ ರಾಜ್ ಸಂಗೀತ ಸಂಯೋಜನೆ, ಶ್ರೀಷ ಛಾಯಾಗ್ರಹಣ, ರವಿಸಂತೆ ಹೈಕ್ಲು ಕಲಾ ನಿರ್ದೇಶನ ಸೇರಿದಂತೆ ದೀಪು ಎಸ್‌.ಕುಮಾರ್‌ ಸಂಕಲನ ಇರುವ ಈ ಚಿತ್ರದಲ್ಲಿ ತೆಲುಗು ನಟ ಶ್ರೀಕಾಂತ್, ಆದಿತ್ಯ ಮೆನನ್, ಅನು ಪ್ರಭಾಕರ್, ರಂಗಾಯಣ ರಘು ಮತ್ತು ಮುಕೇಶ್ ರಿಷಿ ಸೇರಿದಂತೆ ದೊಡ್ಡ ತಾರಾಗಣವಿದೆ.


"

Follow Us:
Download App:
  • android
  • ios