Asianet Suvarna News Asianet Suvarna News

ಡಾಲಿಯ 'ರತ್ನನ್ ಪ್ರಪಂಚ'ದ ಬಗ್ಗೆ ಪುನೀತ್ ಮೆಚ್ಚುಗೆಯ ಟ್ವೀಟ್

'ರತ್ನನ್ ಪ್ರಪಂಚ ಸಿನೆಮಾವನ್ನು ನೋಡಿದೆ.  ಅದ್ಭುತವಾದ ಪ್ರದರ್ಶನ, ಖುಷಿ ಆಯಿತು. ಧನಂಜಯ, ರೆಬಾ ಮೊನಿಕಾ, ಪ್ರಮೋದ್ ಮಂಜು, ಉಮಾಶ್ರೀ ಅವರು, ರವಿಶಂಕರ್, ಶ್ರುತಿ ಮೇಡಂ, ಅನುಪ್ರಭಾಕರ್, ಅಚ್ಯುತ್ ಎಲ್ಲರೂ ತುಂಬಾ ಚೆನ್ನಾಗಿ ನಟಿಸಿದ್ದಾರೆ.

Kannada Actor Puneet acclaimed tweet about Rathnan Prapancha movie
Author
Bangalore, First Published Oct 22, 2021, 11:38 AM IST
  • Facebook
  • Twitter
  • Whatsapp

ಡಾಲಿ ಧನಂಜಯ್ (Dolly Dhananjay) ಎಸಿಪಿ ಪೊಲೀಸ್ ಪಾತ್ರದಲ್ಲಿ ನಟಿಸಿರುವ 'ಸಲಗ' (Salaga) ಚಿತ್ರ ಬಿಡುಗಡೆಯಾಗಿ ಭರ್ಜರಿ ಪ್ರದರ್ಶನ ಕಾಣುತ್ತಿದ್ದರೆ, ಇತ್ತ ಅವರ ಅಭಿನಯದ ಮತ್ತೊಂದು ಚಿತ್ರ ಸದ್ದಿಲ್ಲದೇ ಓಟಿಟಿ ಫ್ಲಾಟ್‌ಪಾರ್ಮ್‌ನಲ್ಲಿ ಬಿಡುಗಡೆಯಾಗಿದೆ. ಧನಂಜಯ ಎಂದಾಗ ಅವರು ಮಾಡುವ ಪಾತ್ರದ ಖಡಕ್​ ಲುಕ್‌ ಕಣ್ಣೆದುರೇ ಹಾದು ಹೋಗುತ್ತದೆ. ಹಾಗೂ ಸಿನಿಮಾದಿಂದ ಸಿನಿಮಾಗೆ ಭಿನ್ನ ಪಾತ್ರ ಆಯ್ಕೆ ಮಾಡಿಕೊಳ್ಳುತ್ತಾರೆ. ಈಗ ಧನಂಜಯ್ ರಗಡ್​ ಅವತಾರ ಬಿಟ್ಟು ಹೊಸ ಪಾತ್ರ ಆಯ್ಕೆ ಮಾಡಿಕೊಂಡಿದ್ದಾರೆ. ಹೌದು!  ಧನಂಜಯ್ ಅಭಿನಯದ 'ರತ್ನನ್ ಪ್ರಪಂಚ'  (Rathnan Prapancha)ಚಿತ್ರ ಅಮೆಜಾನ್ ಪ್ರೈಮ್‌ನಲ್ಲಿ (Amazon Prime) ಬಿಡುಗಡೆಯಾಗಿದೆ. 

ಅಮೆಜಾನ್ ಪ್ರೈಮ್‌ನಲ್ಲಿ ಅ. 22ರಂದು ರತ್ನನ್ ಪ್ರಪಂಚ ಬಿಡುಗಡೆ

ಬಿಡುಗಡೆಯಾಗಿರುವ 'ರತ್ನನ್ ಪ್ರಪಂಚ'ವನ್ನು ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ (Puneeth Rajkumar) ವೀಕ್ಷಿಸಿ ಚಿತ್ರದ ಬಗ್ಗೆ ಟ್ವೀಟ್‌ವೊಂದನ್ನು (Tweet) ಹಂಚಿಕೊಂಡಿದ್ದಾರೆ. 'ರತ್ನನ್ ಪ್ರಪಂಚ ಸಿನೆಮಾವನ್ನು ನೋಡಿದೆ.  ಅದ್ಭುತವಾದ ಪ್ರದರ್ಶನ, ಖುಷಿ ಆಯಿತು. ಧನಂಜಯ, ರೆಬಾ ಮೊನಿಕಾ, ಪ್ರಮೋದ್ ಮಂಜು, ಉಮಾಶ್ರೀ ಅವರು, ರವಿಶಂಕರ್, ಶ್ರುತಿ ಮೇಡಂ, ಅನುಪ್ರಭಾಕರ್, ಅಚ್ಯುತ್ ಎಲ್ಲರೂ ತುಂಬಾ ಚೆನ್ನಾಗಿ ನಟಿಸಿದ್ದಾರೆ.  ಅದ್ಭುತವಾದ ಸಂಭಾಷಣೆ, ಛಾಯಾಗ್ರಹಣ ಮತ್ತು ಸಂಗೀತವಿದೆ.  ಮತ್ತು ಇಡೀ ಚಿತ್ರತಂಡಕ್ಕೆ ಒಳ್ಳೆದಾಗಲಿ' ಎಂದು ಟ್ವೀಟ್ ಮಾಡಿದ್ದಾರೆ.
 


'ರತ್ನನ್ ಪ್ರಪಂಚ' ಸಿನಿಮಾದಲ್ಲಿ ಧನಂಜಯ್​ ಅವರು ರತ್ನಾಕರನಾಗಿ ಮಧ್ಯಮ ವರ್ಗದ ಕುಟುಂಬದ ವ್ಯಕ್ತಿಯಾಗಿ ನಟಿಸಿದ್ದಾರೆ. ಉಮಾಶ್ರೀ (Umashree) ಅವರು ಧನಂಜಯ ಅವರ ತಾಯಿಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. 'ದಯವಿಟ್ಟು ಗಮನಿಸಿ' ಸಿನಿಮಾದ ಮೂಲಕ ನಿರ್ದೇಶಕರಾದ ರೋಹಿತ್ ಪದಕಿ ಅವರು ಈ ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳಿದ್ದಾರೆ.  ಕಾರ್ತಿಕ್​ ಹಾಗೂ ಯೋಗಿ ಜಿ. ರಾಜ್​ ಅವರು ಚಿತ್ರವನ್ನು ನಿರ್ಮಿಸಿದ್ದು, ಅಜನೀಶ್​ ಲೋಕನಾಥ್​ ಸಂಗೀತ ನೀಡಿದ್ದಾರೆ. ಈ ಸಿನಿಮಾದಲ್ಲಿ ಧನಂಜಯ್​ಗೆ ನಾಯಕಿಯಾಗಿ ರೆಬಾ ಜಾನ್ ನಟಿಸಿದ್ದಾರೆ.

'ರತ್ನನ್‌ ಪ್ರಪಂಚ'ಕ್ಕೆ ಎಂಟ್ರಿ ಕೊಟ್ಟ ಮಲಯಾಳಂ ಬೆಡಗಿ ರೆಬಾ ಜಾನ್‌!

ಇನ್ನು ದುನಿಯಾ ವಿಜಯ್ ನಟಿಸಿ, ನಿರ್ದೇಶಿಸಿರುವ 'ಸಲಗ' ಸಿನಿಮಾದಲ್ಲಿ ಪೊಲೀಸ್​ ಅಧಿಕಾರಿಯ ಪಾತ್ರದಲ್ಲಿ ಕಾಣಿಸಿಕೊಂಡಿರುವ ಡಾಲಿ ಧನಂಜಯ್‌ಗೆ ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗಿತ್ತು. ಸದ್ಯ ಧನಂಜಯ್ ಅವರು ಸಾಲು ಸಾಲು ಸಿನಿಮಾಗಳಲ್ಲಿ ನಟಿಸುತ್ತಿದ್ದು, ಬಡವ ರಾಸ್ಕಲ್ (Badava Rascal)​, ಮಾನ್ಸೂನ್ ರಾಗ (Monsoon Raga) ಸೇರಿದಂತೆ ಹೆಡ್​ ಬುಷ್ (Head Bush)​ ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ಡಾಲಿ ಧನಂಜಯ್ ಅಭಿನಯದ 'ಹೆಡ್​ ಬುಷ್'​ ಸಿನಿಮಾಕ್ಕೆ ಅಗ್ನಿ ಶ್ರೀಧರ್ ಕತೆ ಬರೆದಿದ್ದು, ಶೂನ್ಯ ಬಾರಿಗೆ ನಿರ್ದೇಶನ ಮಾಡುತ್ತಿದ್ದಾರೆ. ಚಿತ್ರದಲ್ಲಿ ವಸಿಷ್ಠ ಸಿಂಹ, ಲೂಸ್ ಮಾದ ಯೋಗೇಶ್, ಬಾಲು ನಾಗೇಂದ್ರ, ಶ್ರುತಿ ಹರಿಹರನ್, ರಘು ಮುಖರ್ಜಿ ಸೇರಿದಂತೆ ದೊಡ್ಡ ತಾರಾಬಳಗವಿದೆ.

Follow Us:
Download App:
  • android
  • ios