ಪಾಂಡಿಚೆರಿಯಲ್ಲಿ ನಟ ನವೀನ್ ಶಂಕರ್ ಜೊತೆ ಅಮೃತಾ ಪ್ರೇಮ್ ನಟನೆ ತರಬೇತಿ; 2ನೇ ಚಿತ್ರಕ್ಕೆ ಸಹಿ ಹಾಕಲು ಸಿಗ್ನಲ್ ಕೊಟ್ಟಿದ್ದು ಯಾರು?
ಎರಡನೇ ಚಿತ್ರಕ್ಕೆ ಸಹಿ ಹಾಕಿದ ಅಮೃತಾ ಪ್ರೇಮ್. ಅಪ್ಪನ ಒಪ್ಪಿಗೆ ಇಲ್ಲದೆ ಎಂದೂ ಮುಂದುವರೆಯದ ಮಕ್ಕಳು.....
ಟಗರು ಪಲ್ಯ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ ಲವ್ಲಿ ಸ್ಟಾರ್ ಪ್ರೇಮ್ ಮುದ್ದಿನ ಮಗಳ ಅಮೃತಾ. 'ಮೊದಲ ಚಿತ್ರಕ್ಕೆ ಜನರು ಕೊಟ್ಟ ಪ್ರೀತಿ ಮತ್ತು ಪ್ರತಿಕ್ರಿಯೆನ್ನು ನಿರೀಕ್ಷೆ ಮಾಡಿರಲಿಲ್ಲ' ಎಂದು ಹೇಳುವ ಅಮೃತಾ ಫಸ್ಟ್ ಸಿನಿಮಾದಿಂದ ವೀಕ್ಷಕರು ಮತ್ತು ಪ್ರಶಸ್ತಿಗಳನ್ನು ಗಿಟ್ಟಿಸಿಕೊಂಡಿದ್ದಾರೆ. ರಕ್ಷಿತ್ ನಾಗರಾಜ್ ಮತ್ತು ಕ್ರಿಸ್ಟೋಫರ್ ಜೊತೆ ತಮ್ಮ ಎರಡನೇ ಚಿತ್ರಕ್ಕೆ ಅಮೃತಾ ಸಹಿ ಹಾಕಿದ್ದಾರೆ. ಅಷ್ಟೇ ಅಲ್ಲ ತಂದೆ ಪ್ರೇಮ್ ಕಥೆ ಕೇಳಿ ಸಿಗ್ನಲ್ ಕೊಟ್ಟ ಮೇಲೆ ಅಮೃತಾ ಸಿನಿಮಾ ಪ್ರಾಜೆಕ್ಟ್‌ಗಳಲ್ಲಿ ಮುಂದುವರೆಯುವುದು....
'ನನ್ನ ಲಿಮಿಟ್ ಮೀರಿ ನಾನು ಸಿನಿಮಾಗಳಲ್ಲಿ ನಟಿಸಬೇಕು ಹೊಸ ಪಾತ್ರಗಳನ್ನು ಆಯ್ಕೆ ಮಾಡಿಕೊಳ್ಳಬೇಕು. ಸದ್ಯ ಪಕ್ಕದ ಮನೆ ಹುಡುಗಿ ಪಾತ್ರಗಳಲ್ಲಿ ಕಾಣಿಸಿಕೊಳ್ಳುತ್ತಿರುವ ಖುಷಿ ಕೂಡ ಇದೆ. ಸರಳ ಪಾತ್ರಗಳಿಂದ ವೀಕ್ಷಕರ ಮನಸ್ಸಿಗೆ ಹತ್ತಿರವಾಗುತ್ತಿರುವೆ. ನನ್ನ ಪಾತ್ರಕ್ಕಿಂತ ಹೆಚ್ಚಾಗಿ ನನ್ನ ಮುಂದಿನ ಚಿತ್ರದ ಕಥೆಯನ್ನು ಇಷ್ಟ ಪಡುತ್ತೀನಿ' ಎಂದು ಟೈಮ್ಸ್ ಆಫ್ ಇಂಡಿಯಾ ಸಂದರ್ಶನದಲ್ಲಿ ಅಮೃತಾ ಪ್ರೇಮ್ ಮಾತನಾಡಿದ್ದಾರೆ.
'ಪ್ರತಿಯೊಬ್ಬರು ತಮ್ಮ ಡೆಬ್ಯೂ ಸಿನಿಮಾ ಮಾಡುವಾಗ ಭಯದಿಂದ ಶುರು ಮಾಡುತ್ತಾರೆ. ನಮಗೆ ಧೈರ್ಯ ಇರುವುದಿಲ್ಲ ಹೀಗಾಗಿ ಟ್ರಯಲ್ ಆಂಡ್ ಎರರ್ ಮಾಡುತ್ತಲೇ ಇರುತ್ತೀವಿ. ಎರಡನೇ ಸಿನಿಮಾ ತುಂಬಾ ಮುಖ್ಯವಾಗುತ್ತದೆ. ಮೊದಲನೇ ಚಿತ್ರದಿಂದ ಏನು ಕಲಿತಿರುವೆ ಅದನ್ನು ಅಳವಡಿಸಿಕೊಳ್ಳಲು ಎರಡನೇ ಚಿತ್ರದಲ್ಲಿ ಅವಕಾಶ ಸಿಗುತ್ತದೆ. ನಾನು ಒಳ್ಳೆ ಕಥೆಗಳನ್ನು ಆಯ್ಕೆ ಮಾಡಿಕೊಳ್ಳುವ ವ್ಯಕ್ತಿ ಎಂದು ಈಗಾಗಲೆ ಹಲವರು ತಲೆಯಲ್ಲಿದೆ ಅದನ್ನು ಜವಾಬ್ದಾರಿಯಿಂದ ನಿಭಾಯಿಸಬೇಕು. ಎರಡನೇ ಚಿತ್ರಕ್ಕೆ ಸಿಹಿ ಮಾಡಲು ತುಂಬಾ ಸಮಯ ತೆಗೆದುಕೊಳ್ಳಲು ಕಾರಣವಿದೆ....ವೀಕ್ಷಕರ ನಿರೀಕ್ಷೆ ಹುಸಿ ಆಗಬಾರದು. ನಿರ್ದೇಶಕ ಮಹೇಶ್ ಸರ್ ಹಲವು ಹಿಟ್ ಸಿನಿಮಾಗಳನ್ನು ನೀಡಿದ್ದಾರೆ ಅವರೊಟ್ಟಿಗೆ ಕೆಲಸ ಮಾಡುತ್ತಿರುವುದಕ್ಕೆ ತುಂಬಾ ಖುಷಿ ಇದೆ' ಎಂದು ಅಮೃತಾ ಹೇಳಿದ್ದಾರೆ.
ತರುಣ್- ಸೋನಲ್ ಚರ್ಚ್ ವೆಡ್ಡಿಂಗ್ ಫೋಟೋ ವೈರಲ್; ಮಂಗಳೂರಿಗೆ ಕಾಲಿಡುತ್ತಿದ್ದಂತೆ ಹೇರ್‌ಸ್ಟೈಲ್ ಬದಲಾಯಿಸಿದ
'ತಂದೆ ಸಿನಿಮಾರಂಗದಲ್ಲಿ ಇದ್ದರೂ ಕೂಡ ನಾನು ಯಾವತ್ತೂ ಸಿನಿಮಾ ಸರ್ಕಲ್‌ಗೆ ಹತ್ತಿರವಿರಲಿಲ್ಲ. ಮಕ್ಕಳು ವಿದ್ಯಾಭ್ಯಾಸದ ಕಡೆ ಹೆಚ್ಚಿಗೆ ಗಮನ ಕೊಡಬೇಕು ಎಂದು ಅಪ್ಪ ಹೇಳುತ್ತಿದ್ದರು. ನನ್ನ ಮೊದಲ ಚಿತ್ರದ ನಂತರ ಸಾಕಷ್ಟು ಕಲಾವಿದರನ್ನು ಭೇಟಿ ಮಾಡಿರುವ ಖುಷಿ ಇದೆ. ಈಗಲೂ ಸೆಲೆಬ್ರಿಟಿಗಳನ್ನು ಭೇಟಿ ಮಾಡಿದಾಗ ತುಂಬಾ ಖುಷಿಯಾಗುತ್ತದೆ. ಇನ್ನಿತರ ಸೆಲೆಬ್ರಿಟಿಗಳು ಕೊಡುವ ಸಲಹೆ ನನಗೆ ತುಂಬಾ ಸಹಾಯ ಮಾಡಿದೆ. ಕಳೆದ ತಿಂಗಳು ಪಾಂಡಿಚೆರಿಯಲ್ಲಿ ನಾನು ರಂಗಭೂಮಿ ತರಬೇತಿ ಪಡೆದುಕೊಂಡೆ, ಆಗ ನನ್ನೊಟ್ಟಿಗೆ ತಮ್ಮ ಏಕಾಂತ್ ಮತ್ತು ನಟ ನವೀನ್ ಶಂಕರ್ ಇದ್ದರು. ಪ್ರತಿಯೊಬ್ಬರನ್ನು ಒಂದೇ ತರ ನೋಡಿಕೊಳ್ಳುತ್ತಿದ್ದ ಕಾರಣ ಹಲವು ವಿಚಾರಗಳನ್ನು ಕಲಿಯಲು ಅವಕಾಶ ಸಿಕ್ಕಿತ್ತು' ಎಂದಿದ್ದಾರೆ ಅಮೃತಾ.