ಸಾವು ನೋವಿನಲ್ಲಿ ಹುಟ್ಟುಹಬ್ಬವೇಕೆ?: ಪ್ರಜ್ವಲ್ ದೇವರಾಜ್
ಕಳೆದ ವರ್ಷದಂತೆ ಈ ವರ್ಷವೂ ಹುಟ್ಟುಹಬ್ಬಕ್ಕೆ ಬ್ರೇಕ್ ಹಾಕಿದ ನಟ ಪ್ರಜ್ವಲ್ ದೇವರಾಜ್.
ಕೊರೋನಾ ಎರಡನೇ ಅಲೆ ಜನರಿಗೆ ತಂದಿಟ್ಟ ಸಂಕಷ್ಟದಿಂದ ಜನರು ಕಷ್ಟದಲ್ಲಿದ್ದಾರೆ. ಅದರಲ್ಲೂ ಕನ್ನಡ ಚಿತ್ರರಂಗದ ಪ್ರತಿಭಾವಂತ ನಟರು, ನಿರ್ದೇಶಕರು ಹಾಗೂ ನಿರ್ಮಾಪಕರನ್ನು ಕಳೆದುಕೊಂಡಿದ್ದೇವೆ. ಈ ಕಾರಣಕ್ಕೆ ಅನೇಕ ಸೆಲೆಬ್ರಿಟಿಗಳು ಹುಟ್ಟುಹಬ್ಬ ಆಚರಣೆಗೆ ಬ್ರೇಕ್ ಹಾಕುತ್ತಿದ್ದಾರೆ. ಜುಲೈ 2ರಂದು ನಟ ಗಣೇಶ್ ಕೂಡ ಹುಟ್ಟುಹಬ್ಬ ಆಚರಿಸಿಕೊಂಡಿಲ್ಲ, ಜುಲೈ 4ರಂದು ಪ್ರಜ್ವಲ್ ಕೂಡ ಆಚರಿಸಿಕೊಳ್ಳುತ್ತಿಲ್ಲ.
ಪ್ರಜ್ವಲ್ ಮಾತು:
ಹಿಂದಿನ ವರ್ಷ ನನ್ನ ಹುಟ್ಟುಹಬ್ಬದ ದಿನ ನನ್ನ ಅಭಿಮಾನಿಗಳೆಲ್ಲರೂ ರಾಜ್ಯದ್ಯಾಂತ ಬಡ ಶಾಲಾ ಮಕ್ಕಳಿಗೆ ಪೆನ್ನು ವಿತರಿಸಿದ್ದು, ನನಗೆ ಸಂತಸ ತಂದಿದೆ. ಅದರಲ್ಲೂ ನೀವು ನೀಡಿದಂತಹ ಪೆನ್ನು ಪುಸ್ತಕ ಪರಿಕರಗಳನ್ನು ನಾನು ದತ್ತು ಪಡೆದ ಶಾಲಾ ಮಕ್ಕಳಿಗೆ ವಿತರಿಸಿದಾಗ ಆ ಮಕ್ಕಳು ಸಂತೋಷ ಪಟ್ಟಿದ್ದು, ಅವರ ಸಂತೋಷದಲ್ಲಿ ನಾನು ಭಾಗಿಯಾಗಿದ್ದು ನಿಜವಾಗಿಯೂ ಖುಷಿಯ ವಿಚಾರ. ಆದರೆ ಈಗಿನ ಪರಿಸ್ಥಿತಿ ಹಿಂದಿನ ವರ್ಷದ ಪರಿಸ್ಥಿತಿಗಿಂತ ಮಿಷಮಿಸಿರುವುದು ಎಲ್ಲರಿಗೂ ತಿಳಿದಿರುವ ವಿಷಯ. ಕೆಟ್ಟ ಪರಿಸ್ಥಿತಿಯಲ್ಲಿ ಇಷ್ಟೊಂದು ಸಾವು ನೋವುಗಳ ಮಧ್ಯೆ ನನ್ನ ಹುಟ್ಟುಹಬ್ಬ ಆಚರಿಸಿಕೊಳ್ಳುವುದು ಎಷ್ಟು ಸಮಂಜಸ? ಆದ್ದರಿಂದ ಈ ಪರಿಸ್ಥಿತಿಯಲ್ಲಿ ನನ್ನ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳದಿರಲು ನಿರ್ಧರಿಸಿದ್ದೇನೆ,' ಎಂದು ಪ್ರಜ್ವಲ್ ಹೇಳಿದ್ದಾರೆ.
ಪ್ರಜ್ವಲ್ ದೇವರಾಜ್ 35ನೇ ಚಿತ್ರದ ಪೋಸ್ಟ್ ಬಗ್ಗೆ ಹೆಚ್ಚಿದೆ ನಿರೀಕ್ಷೆ!
'ನನ್ನ ಹುಟ್ಟುಹಬ್ಬಕ್ಕೆ ಹಾರ, ಕೇಕ್ ಹಾಗೂ ಉಡುಗೊರೆಗಾಗಿ ಖರ್ಚು ಮಾಡುವ ಹಣವನ್ನು ಕೊರೋನಾದಿಂದ ಬಳಲಿರುವ ಜನರಿಗೆ ಸಹಾಯ ಹಸ್ತ ನೀಡಿದರೆ ಅದೇ ನನಗೆ ನೀವು ತೋರಿಸುವ ಪ್ರೀತಿಯ ಅಭಿಮಾನ. ಆದ್ದರಿಂದ ದಯವಿಟ್ಟು ಅಭಿಮಾನಿಗಳು ಕೊರೋನಾ ಸಂತ್ರಸ್ತರಿಗೆ ಸಹಾಯ ಹಸ್ತ ನೀಡುವ ಮೂಲಕ ನನ್ನ ಹುಟ್ಟುಹಬ್ಬಕ್ಕೆ ಹರಿಸಿ, ಹಾರೈಸಿ ಎಂದು ಕೇಳಿಕೊಳ್ಳುತ್ತೇನೆ,' ಎಂದು ಪ್ರಜ್ವಲ್ ಬರೆದುಕೊಂಡಿದ್ದಾರೆ.