ನಟ ಪ್ರಥಮ್ ಸುಮಾರು 35 ಕುರಿಗಳನ್ನು ಖರೀದಿಸುತ್ತಿದ್ದಾರೆ  ಇನ್ನು 3-4 ದಿನಗಳಲ್ಲಿ ಸಿಕ್ಕಾಪಟ್ಟೆ ಬ್ಯುಸಿಯಾಗಿರುತ್ತಾರಂತೆ ! 

ಸ್ಯಾಂಡಲ್‌ವುಡ್‌ನ ಒಳ್ಳೆ ಹುಡುಗ ಪ್ರಥಮ್‌ ಏನಾದರೂ ಒಂದು ಕೆಲಸ ಮಾಡುತ್ತಾ ಬ್ಯುಸಿಯಾಗಿರುತ್ತಾರೆ. ಏನೂ ಮಾಡದೆ ಒಂದು ದಿನವೂ ಕಳೆದದ್ದು ಅವರ ಚರಿತ್ರೆಯಲ್ಲಿ ಇಲ್ಲ. ಕಾಲೇಜ್‌ ಮಕ್ಕಳಿಗೆ ಎಕ್ಸಾಂ ಬೇಡ ಎಂದು ರಾಜಕಾರಣಿಗಳು ಹಾಗೂ ಸಿನಿಮಾ ಗಣ್ಯರು ಜೊತೆ ಸೇರಿ ಮಕ್ಕಳಿಗೆ ಸಹಾಯ ಮಾಡಿದ್ದರು, ಕೆಲ ದಿನಗಳ ಹಿಂದೆ ಒಂದು ಗಂಭೀರ ವಿಷಯಕ್ಕೆ ಪುರುಷರ ಪರ ಧ್ವನಿ ಎತ್ತಿದ್ದರು ಹಾಗೂ ಲಾಕ್‌ಡೌನ್ ಸಮಯದಲ್ಲಿ ನಿರ್ಗತಿಕರಿಗೆ ಫುಡ್‌ ಕಿಟ್‌ ನೀಡುವ ಮೂಲಕ ಸಹಾಯ ಮಾಡಿದ್ದರು.

ದರ್ಶನ್- ಸುದೀಪ್‌ ಸಂಬಂಧೀಕರು? ಒಳ್ಳೆ ಹುಡುಗ ಪ್ರಥಮ್‌ ಬಿಡಿಸಿಟ್ಟ ಸಂಬಂಧ!

ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಫೇಮಸ್‌ ಇರುವ ಪ್ರಥಮ್ ಶೇರ್ ಮಾಡಿಕೊಂಡ ವಿಡಿಯೋ ವೈರಲ್ ಆಗುತ್ತಿದೆ. 'ನನ್ನ account ಗೆ 35 ಕುರಿ ಮರಿಗಳು ಇನ್ನು 3-4 ದಿನಗಳಲ್ಲಿ ಸೇರಿಕೊಳ್ಳಲಿವೆ ಎಂದು ಬರೆದುಕೊಂಡಿದ್ದಾರೆ ಅಲ್ಲದೆ ಆಗ ತಾನೆ ಹುಟ್ಟಿದ ಕುರಿ ಮರಿಯನ್ನು ಹಿಡಿದುಕೊಂಡು ಸೆಲ್ಫಿಗೆ ಪೋಸ್‌ ಕೊಟ್ಟಿದ್ದಾರೆ. 

View post on Instagram

ಇನ್ನು ಸ್ಯಾಂಡಲ್‌ವುಡ್‌ನಲ್ಲಿ ಡ್ರಗ್ಸ್ ಮಾಫಿಯಾ ಇದೇ ಎಂಬ ವಿಚಾರಕ್ಕೆ ಮಾತನಾಡಿರುವ ಪ್ರಥಮ್ ಪುರುಷರ ಪರ ಧ್ವನಿ ಎತ್ತಿದ್ದಾರೆ.'ಗಂಡಸರು ಏನೇ ತಪ್ಪು ಮಾಡಿದರೂ, ಮಾಡದಿದ್ದರೂ ಅವರ ಮುಖ ತೋರಿಸಲಾಗುತ್ತದೆ. ಹೆಂಗಸರ ವಿಚಾರದಲ್ಲಿ ಹಾಗೆ ಆಗುವುದಿಲ್ಲ' ಎಂದು. ಖಾಸಗಿ ವಾಹಿನಿಯಲ್ಲಿ ಮಾತನಾಡಿದ ವಿಡಿಯೋವನ್ನು ಜನ ಎಲ್ಲೆಡಿ ಶೇರ್ ಮಾಡಿಕೊಂಡು ಪ್ರಥಮ್‌ಗೆ ಜೈಕಾರ ಹಾಕುತ್ತಿದ್ದಾರೆ.

View post on Instagram