Asianet Suvarna News Asianet Suvarna News

ಈ ವಿಚಾರಕ್ಕೆ ಮೊನ್ನೆ ನನ್ಗೂ ನನ್ನ ಹೆಂಡ್ತಿಗೂ ಜಗಳ ಆಯ್ತು, ಸ್ವಿಗ್ಗಿಯಲ್ಲಿ ಊಟ ತರ್ಸ್ಕೊಂಡೆ: ಪ್ರಥಮ್

ನಮ್ಮ ಮನೆಯಲ್ಲೂ ಜಗಳ ಆಗುತ್ತೆ ಆದರೆ ಅದನ್ನು ಹೇಗೆ ಸರಿ ಮಾಡುತ್ತೀವಿ ಅನ್ನೋದು ಮುಖ್ಯ ಎಂದು ತಮ್ಮ ಮನೆ ವಿಚಾರವನ್ನು ಒಳ್ಳೆ ಹುಡುಗ ಪ್ರಥಮ್ ಬಿಚ್ಚಿಟ್ಟಿದ್ದಾನೆ.
 

Kannada actor Olle hudga pratham opens up about small fight with his wife vcs
Author
First Published Jun 21, 2024, 11:33 AM IST

ಕನ್ನಡ ಚಿತ್ರರಂಗದ ಒಳ್ಳೆ ಹುಡುಗ ಪ್ರಥಮ್‌ಗೆ ಕೆಲವು ದಿನಗಳಿಂದ ಸ್ಟಾರ್ ನಟನ ಅಭಿಮಾನಿಗಳಿಂದ ಜೀವನ ಬೇದರಿಕೆ ಬರುತ್ತಿದೆ ಎಂದು ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಸಮದಯಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಪ್ರಥಮ್ ಹೆಂಡ್ತಿಯನ್ನು ಹೇಗೆ ನೋಡಿಕೊಳ್ಳಬೇಕು ಹಾಗೂ ಜನರ ಜೊತೆ ಹೇಗಿರಬೇಕು ಎಂದು ತಮ್ಮ ಜೀವನದ ಉದಾಹರಣೆ ಕೊಟ್ಟಿದ್ದಾರೆ. 

'ಗಂಡ ಹೆಂಡ್ತಿ ನಡುವೆ ಆಗಾಗ ಜಗಳ ಆಗುತ್ತೆ ಅದು ತುಂಬಾ ಕಾಮನ್. ಮೊನ್ನೆ ನನಗೂ ನನ್ನ ವೈಫ್‌ಗೂ ಜಗಳ ಆಯ್ತು. ಇಲ್ಲಿ ಎಲ್ಲ ಶ್ರೇಷ್ಠ ಅಂತಲ್ಲ ನಾವೂ ಜಗಳ ಮಾಡ್ತೀವಿ ಆದರೆ ನಮ್ಮ ಜಗಳ ಯಾವ ರೀತಿ ಗೊತ್ತಾ? ಮೊನ್ನೆ ಜೋರಾಗಿ ಮಳೆ ಬಂತು ಅಲ್ವಾ ಆಗ ಸಮದಯಲ್ಲಿ ನನ್ನ ಹೆಂಡತಿ ಅವರ ಅಪ್ಪ ಮದುವೆ ಸಮಯದಲ್ಲಿ 300 ರೂಪಾಯಿಗೆ ಎರಡು ಸೀರೆ ಕೊಡಿಸಿದ್ದಾರೆ ಅದನ್ನು ಆಕೆ ನೆಲದ ಮೇಲೆ ಇಟ್ಟು ದೇವಸ್ಥಾನಕ್ಕೆ ಹೋಗಿ ಬರ್ತೀನಿ ಅಂತ ಹೋಗಿದ್ದಾಳೆ. ಈಗ ಮಳೆ ನನ್ನ ಕೇಳಿಕೊಂಡು ಬರುತ್ತಾ? ತುಂಬಾ ಜೋರಾಗಿ ಮಳೆ ಬಂದು ಬಟ್ಟೆಗೆ ಮಳೆ ನೀರು ಬಿದ್ದು ಒಂದು ಚೂರು ಬಣ್ಣ ಬಿಟ್ಟುಕೊಂಡಿತ್ತು. ನಿಮ್ಮಿಂದ ನನ್ನ ಸೀರೆ ಬಣ್ಣ ಹೋಗ್ಬಿಟ್ಟಿದೆ ನಿಮ್ಮ ಮನೆಗೆ ಬಂದಿದ್ದಕ್ಕೆ ಹೀಗೆ ಆಯ್ತು ನನಗೆ 13 ಸಾವಿರ ರೂ. ಕೊಡಿ ಅಂದ್ರ...13 ಸಾವಿರನಾ? ಸಿದ್ಧಾರಾಮಯ್ಯ ಅಣ್ಣ ಕೊಡೋದು 2 ಸಾವಿರ ಮಾತ್ರ ಒಂದು ಕೆಲಸ ಮಾಡು ನೀನು ನಿಮ್ಮ ಊರಿಗೆ ಹೋಗು 6-7 ತಿಂಗಳು ಇದ್ದು 13 ಸಾವಿರ ತಗೊಂಡು ಬಾ ಅಂತ ಹೇಳಿದೆ. ಇಲ್ಲ ನಿಮ್ಮ ಮನೆಯಲ್ಲಿ ಆಗಿರುವುದು ನೀವು ದುಡ್ಡಿ ಕೊಡಿ ಅಂದ್ರು ನಾನು ಕೊಡಲ್ಲ ಅಂತ' ಎಂದು ಕನ್ನಡ ಖಾಸಗಿ ಚಾನೆಲ್ ಸಂದರ್ಶನದಲ್ಲಿ ಪ್ರಥಮ್ ಮಾತನಾಡಿದ್ದಾರೆ.

ತಪ್ಪು ಮಾಡಿಲ್ಲ ಅಂದ್ರೆ ದಾನಧರ್ಮ ಕಾಪಾಡುತ್ತೆ, ದರ್ಶನ್‌ಗೆ ಆಕೆ ವಿಜಯವೂ ಆಗಿ ಲಕ್ಷ್ಮಿಯೂ ಆಗಿದ್ರು: ಅನುಷಾ ರೈ

'ಮಳೆ ಜೋರಾಗಿ ಬಂದ ಕಾರಣ ಮನೆಯಲ್ಲಿ ಅಡುಗೆ ಮಾಡಲ್ಲ ಅಂತ ಅವ್ರು ಕೂತ್ಕೊಂಡ್ರು ಅಡುಗೆ ಮಾಡಲ್ಲ ಹೌದಾ ಮಾಡಬೇಡಪ್ಪ ಅಂತ ಹೇಳಿ ಸ್ವಿಗ್ಗಿಯಲ್ಲಿ ಊಟ ಆರ್ಡರ್ ಮಾಡಿದೆ. ಆ ಜೋರು ಮಳೆಯಲ್ಲಿ ಊಟ ತಗೊಂಡು ಬಂದ ವ್ಯಕ್ತಿಯನ್ನು ನೋಡಿ ತುಂಬಾ ಬೇಸರ ಆಯ್ತು ಆಗ ನನ್ನ ಸಿನಿಮಾ ಚಿತ್ರೀಕರಣಕ್ಕೆ ಒಂದು ಜಾಕೆಟ್ ತಂದಿದ್ದೆ ಅದನ್ನು ಅವನಿಗೆ ಕೊಟ್ಟು. ನಾವು ಜನಗಳನ್ನು ಹಾಗೆ ನೋಡಿಕೊಳ್ಳಬೇಕು ಹೆಂಡತಿಯನ್ನು ಹೀಗೆ ನೋಡಿಕೊಳ್ಳಬೇಕು. ಅದು ಬಿಟ್ಟು ಹೆಂಡತಿಗೆ ಹೊಡೆಯುವುದು ಜನರಿಗೆ ಅವಾಜ್ ಹಾಕುವುದು ಸರಿ ಅಲ್ಲ' ಎಂದು ಪ್ರಥಮ್ ಹೇಳಿದ್ದಾರೆ. 

Latest Videos
Follow Us:
Download App:
  • android
  • ios