ಸ್ಯಾಂಡಲ್‌ವುಡ್ ಎಂಗ್‌ ಚಾರ್ಮ್‌ ನಿಖಿಲ್‌ ಕುಮಾರಸ್ವಾಮಿ ಹಾಗೂ ರೇವತಿ ಏಪ್ರಿಲ್‌ 17ರಂದು ಹಸೆಮಣೆ ಏರಲಿದ್ದಾರೆ. ಗೌಡರ ಕುಟುಂಬದ ಮದುವೆಯಾದ ಕಾರಣ ಅದ್ಧೂರಿಯಾಗಿ ರಾಮನಗರದಲ್ಲಿ ನಡೆಯಬೇಕು ಎಂದು ನಿರ್ಧರಿಸಿದ್ದಾರೆ. 

ನಿಶ್ಚಿತಾರ್ಥದಲ್ಲಿ ಅಪ್ಸರೆಯಂತೆ ಕಂಗೊಳಿಸಿದ ರೇವತಿ; ಮೇಕಪ್ ಆರ್ಟಿಸ್ಟ್ ಇವರೇ!

ರಾಜಕೀಯವಾಗಿ ಮಾತ್ರವಲ್ಲದೇ ಭಾವನಾತ್ಮಕವಾಗಿ ರಾಮನಗರ ಹಾಗೂ ಚನ್ನಪಟ್ಟಣದ ಜನತೆಯೊಂದಿಗೆ ನಂಟು ಹೊಂದಿರುವ ಕುಮಾರಸ್ವಾಮಿ ಕುಟುಂಬ ಪ್ರತೀ ಮನೆಗೂ ಆಮಂತ್ರಣ ಪತ್ರಿಕೆ ಜೊತೆ ಸೀರೆ, ಶರ್ಟ್‌ ಹಾಗೂ ಪಂಚೆಯನ್ನು ನೀಡಲಾಗುತ್ತದೆ ಎನ್ನಲಾಗಿದೆ.

ರೇವತಿ ಬಂದಿದ್ದೇ ತಡ ರಾಜಕಾರಣಿಯಾಗಿದ್ದ ನಿಖಿಲ್ ಕವಿಯಾಗ್ಬಿಟ್ರು!

ಈಗಾಗಲೇ 8 ಲಕ್ಷಕ್ಕೂ ಹೆಚ್ಚು ಆಮಂತ್ರಣ ಪತ್ರಿಕೆ ಸಿದ್ಧವಾಗಿದೆ. ಪ್ರತೀ ಹಳ್ಳಿಯ ಮುಖಂಡರ ಜೊತೆ ಚರ್ಚಿಸಿ ಎಷ್ಟು ಮನೆಗಳಿವೆ ಎಂದು ಮಾಹಿತಿ ಪಡೆದುಕೊಂಡಿದ್ದಾರಂತೆ. ರಾಮನಗರದಲ್ಲಿ ಸುಮಾರು 68 ಸಾವಿರ ಮನೆಗಳು ಹಾಗೂ ಚನ್ನಪಟ್ಟಣದಲ್ಲಿ ಸುಮಾರು 70 ಸಾವಿರ ಮನೆಗಳಿದೆ ಎಂಬ ಮಾಹಿತಿ ಇದೆ. ಅಷ್ಟೇ ಅಲ್ಲದೇ ಮದುವೆಗೆ ಲಕ್ಷಾಂತರ ಜನರು ಆಗಮಿಸುವ  ನಿರೀಕ್ಷೆ ಇದ್ದು, ಸುಮಾರು 1 ಸಾವಿರಕ್ಕೂ ಹೆಚ್ಚು ಅಡುಗೆ ಭಟ್ಟರನ್ನು ವ್ಯವಸ್ಥೆ ಮಾಡಲಾಗುತ್ತದೆಯಂತೆ!