ನಿಖಿಲ್ ಕುಮಾರಸ್ವಾಮಿ ಕೈಯಲ್ಲಿ ಕಾಸಿದ್ರೂ, ಒಂದಿಷ್ಟು ಪವರ್ ಇದ್ರೂ ಸ್ಟಾರ್ ಇರದ ಕಾರಣವೋ ಏನೋ ಹೋದಲ್ಲೆಲ್ಲ ಹೊಡೆಸ್ಕೊಂಡಿದ್ದೇ ಜಾಸ್ತಿ. ಮಗನನ್ನು ಸಿನಿಮಾಕ್ಕೆ ತರಬೇಕು, ಆತ ಸ್ಟಾರ್ ನಟ ಆಗ್ಬೇಕು ಅಂತೆಲ್ಲ ಕನಸು ಕಂಡು ಕುಮಾರಸ್ವಾಮಿ ಅವರು ಮಗನನ್ನು ಬಹಳ ಅದ್ಧೂರಿಯಾಗಿ ಇಂಡಸ್ಟ್ರಿಗೆ ಲಾಂಚ್ ಮಾಡ್ತಾರೆ. ಆದ್ರೇನು ಮಾಡಾಣ, ಮೊದಲ ಸಿನಿಮಾ ಜಾಗ್ವಾರ್ ಸಖತ್ ಅದ್ದೂರಿಯಾಗೇನೋ ಚಿತ್ರೀಕರಣ ಮುಗಿಸಿಕೊಂಡು ಬಿಡುಗಡೆಯಾಯ್ತು. ಆದ್ರೆ ಸಿನಿಮಾ ಗ್ರ್ಯಾಂಡ್ ಏನೋ ಆಗಿದೆ, ಆದರೆ ಇದರಲ್ಲಿ ಆತ್ಮನೇ ಇಲ್ಲ ಅಂತ ಕಮೆಂಟ್ ಕೇಳಿಬಂತು. ಸಿನಿಮಾ ಮಕಾಡೆ ಮಲಕ್ಕೊಳ್ತು ಅನ್ನೋದನ್ನ ಸಪರೇಟಾಗೇನೋ ಹೇಳ್ಬೇಕಾಗಿಲ್ಲ. ಸಿನಿಮಾ ಸೋಲನ್ನು ಅವರಿವರ ಮೇಲೆ ಹಾಕುವ ಪ್ರಯತ್ನವೂ ನಡೀತು. ಇರಲಿ, ಆಮೇಲೆ ಬಂದ ಎರಡನೇ ಸಿನಿಮಾ ' ಸೀತಾರಾಮ ಕಲ್ಯಾಣ' ದ ಒಂದು ಸಾಂಗ್ ಸಖತ್ ಹಿಟ್ ಆಯ್ತು. ಇವತ್ತಿಗೂ ಈ ಹಾಡು ಆಗಾಗ ಕೇಳಿ ಬರ್ತಾ ಇರುತ್ತೆ. - 'ನಿನ್ನ ರಾಜ ನಾನು, ನನ್ನ ರಾಣಿ ನಾನು' ಎಂಬ ಹಾಡು ಅವರು ಟ್ಯೂನ್‌ನಿಂದಾಗಿ ಸಖತ್ ಪಾಪ್ಯುಲರ್ ಆಯ್ತು. ಡಿಂಪಲ್ ಕ್ವೀನ್ ರಚಿತಾ ಆಕ್ಟಿಂಗ್ ಬಗ್ಗೆ ಒಳ್ಳೆಯ ಮಾತು ಕೇಳಿಬಂತು. ಆದರೆ ನಿಖಿಲ್ ಗೆ ಅಂಥಾ ಬ್ರೇಕ್ ಏನೂ ಸಿಗಲಿಲ್ಲ. ಥಿಯೇಟರ್ ಗಳಲ್ಲಿ ಎವರೇಜ್ ಆಗಿ ಓಡಿತು. ಆಮೇಲೆ ಬಂದ ಮುನಿರತ್ನ ಕುರುಕ್ಷೇತ್ರದಲ್ಲಿ ಅಭಿಮನ್ಯುವಾಗಿ ಕಾಣಿಸಿಕೊಂಡರು ನಿಖಿಲ್. ಇದು ಸಿನಿಮಾ ಕತೆ ಆಯ್ತು. 

ಕೊನೆಗೂ ಧೈರ್ಯ ಮಾಡಿ ತಾನೇ ಕೂದಲು ಕಟ್ ಮಾಡಿಕೊಂಡ ನಟಿ ಐಶಾನಿ ಶೆಟ್ಟಿ! 

ಅಷ್ಟೊತ್ತಿಗೇ ಎಂಪಿ ಎಲೆಕ್ಷನ್ ಬಂತಾ, ಅಪ್ಪ ಅಮ್ಮನ ಅತಿ ಮುದ್ದಿನ ಮಗ ಮಂಡ್ಯದಲ್ಲಿ ಕಂಟೆಸ್ಟ್ ಮಾಡೇ ತೀರ್ತೀನಿ ಅಂತ ಹೊರಟ್ರು. ಸುಮಲತಾ ಎದುರು ಗೆಲುವಿಗಾಗಿ ಏನೆಲ್ಲ ಗಿಮಿಕ್ ಮಾಡಿದ್ರೂ ಏನೂ ಗಿಟ್ಟಲಿಲ್ಲ. ಹೀಗೆ ಸೋಲಿನ ಮೇಲೆ ಸೋಲುಂಡ ಬಳಿಕ ಮದುವೆಯಾದ್ರು. ಆದೇನೋ ಗೊತ್ತಿಲ್ಲ, ಮದುವೆ ಆದ್ಮೇಲೆ ನಿಖಿಲ್ ಫುಲ್ ಚೇಂಜ್ ಆಗಿದ್ದಾರೆ ಅನ್ನೋ ಮಾತು ಕೇಳಿ ಬರ್ತಿದೆ. ಸಿಂಪಲ್ ಆಗಿ ಮದ್ವೆ ಆಗಿದ್ದು, ಮದುವೆ ಅಂತ ಕೂಡಿಟ್ಟ ಹಣವನ್ನ ಬಡವರಿಗೆ ಹಂಚಿದ್ದು, ಬೆಂಗಳೂರಿಗಿಂತ ಹೆಚ್ಚಾಗಿ ಗ್ರಾಮೀಣ ಭಾಗಗಳಲ್ಲೇ ಹೆಚ್ಚೆಚ್ಚು ಕಾಣಿಸಿಕೊಂಡಿದ್ದು, ಎಲ್ಲಕ್ಕಿಂತ ಹೆಚ್ಚಾಗಿ ಸಾಂಪ್ರದಾಯಿಕ ಹಿನ್ನೆಲೆಯ ರೇವತಿಯನ್ನು ಮದುವೆಯಾಗಿ ಜನ ಸೇವೆಯಲ್ಲಿ ತೊಡಗಿದ್ದು ನಿಖಿತ್ ಚಾರ್ಮ್ ಒಂದೊಂದೇ ಸ್ಟೆಪ್ ಮೇಲೇರಲು ಕಾರಣವಾಯ್ತು. ಎಲ್ಲೋ ಒಂದು ಕಡೆ ನಿಖಿಲ್ ರೈತರ ಹುಡುಗನ ಇಮೇಜ್ ಬೆಳೆಸಿಕೊಳ್ತಾ ಇದ್ದಾರೆ. ಮುಂದಿನ ಎಲೆಕ್ಷನ್ ನಲ್ಲಿ ಇದು ಅವರಿಗೆ ಪ್ಲಸ್ ಪಾಯಿಂಟ್ ಆಗಲಿದೆ ಅನ್ನೋ ನಂಬಿಕೆ ಹಲವರು. ಇದರ ಜೊತೆಗೆ ಸೋಷಲ್ ಮೀಡಿಯಾದಲ್ಲಿ ನಿಖಿಲ್ ಸಖತ್ ಆಕ್ಟಿವ್ ಆಗ್ತಿದ್ದಾರೆ. ಸೋಷಲ್ ಮೀಡಿಯಾದಲ್ಲಿ ಅವರ ಫಾಲೋವರ್ಸ್ ದಿನೇ ದಿನೇ ಹೆಚ್ಚಾಗುತ್ತಿದ್ದಾರೆ. ಮನೆಗೆ ಕಾಲಿಟ್ಟ ಮಹಾಲಕ್ಷ್ಮಿ ರೇವತಿಯಿಂದ ನಿಖಿಲ್ ಗ್ರಾಫ್ ಏರ್ತಾ ಇದೆ ಅನ್ನೋ ಲೆಕ್ಕಾಚಾರ ಕೆಲವರದ್ದು. 

'Beast' ಜೊತೆ ವಿಜಯ್ ದೇವರಕೊಂಡ ಶರ್ಟ್‌ಲೆಸ್‌ ಪೋಸ್‌

ಇನ್‌ಸ್ಟಾಗ್ರಾಮ್‌ನಲ್ಲಿ ಆಗಾಗ ಫೋಟೋಗಳನ್ನು ಅಪ್ ಲೋಡ್ ಮಾಡ್ತಿರುತ್ತಾರೆ ನಿಖಿಲ್. ಅದರಲ್ಲಿ ಲೇಟೆಸ್ಟ್ ಆಗಿರೋದು ಕುರಿಮರಿ ಹಿಡ್ಕೊಂಡು ನಸುನಗುತ್ತಾ ಹಳ್ಳಿ ಹುಡುಗನ ಪೋಸ್ ನೀಡ್ತಿರೋ ನಿಖಿಲ್ ಫೋಟೋ. ಅಫ್‌ಕೋರ್ಸ್ ಅವರು ಪೋಸ್ಟ್ ಮಾಡ್ತಿರೋ ಹೆಚ್ಚಿನೆಲ್ಲ ಫೋಟೋಗಳು ಗ್ರಾಮೀಣ ಹಿನ್ನೆಲೆಯಲ್ಲೇ ಇವೆ. ಈ ಫೋಟೋದ ಜೊತೆಗೆ ನಿಖಿಲ್ ವೇದಾಂತದ ನುಡಿಗಳನ್ನೂ ಆಡಿದ್ದಾರೆ. - 'ಜೀವನದಲ್ಲಿ ಯಾವುದೂ ಶಾಶ್ವತವಲ್ಲ. ಚಿಂತೆ ಇಲ್ಲದಿರೋ ವ್ಯಕ್ತಿನೇ ಇಲ್ಲ. ಜೀವನದಲ್ಲಿ ಸವಾಲುಗಳು ಏನೇ ಇರಲಿ. ನಾವು ಎದೆಗುಂದದೇ ಎದುರಿಸಬೇಕು ಅನ್ನುವ ನುಡಿಗಳನ್ನಾಡಿನ್ನಾಡಿದ್ದಾರೆ. ಈ ಮಾತನ್ನು ಅವರು ತನಗೆ ತಾನೇ ಹೇಳ್ಕೊಂಡಿದ್ದಾರಾ ಅಥವಾ ಸಮಾಜಕ್ಕೆ ಸಂದೇಶ ನೀಡ್ತಿದ್ದಾರಾ ಅನ್ನೋ ಡೌಟ್ಸ್ ಕೆಲವರಿಗಿದೆ.

 


ಬಿಗ್‌ಬಾಸ್‌ ಬ್ಯೂಟಿಯ ಬರ್ತ್‌ಡೇ ಫನ್..! ಇಲ್ಲಿವೆ ಚಂದದ ಫೋಟೋಸ್ 

ಏನೇ ಇರಲಿ, ಈ ಮೂಲಕ ನಿಖಿಲ್ ಮತ್ತಷ್ಟು ಒಳ್ಳೆ ಹುಡ್ಗನಾಗಿ ಕಾಣ್ತಿರೋದಂತೂ ನಿಜ.  ರಾಜ್‌ಕುಮಾರ್ ಕವಿರತ್ನ ಕಾಳಿದಾಸ ಫಿಲಂನಲ್ಲಿ ಕುರುಬನಾಗಿ ಕಾಣಿಸಿಕೊಂಡು ಸಕತ್‌ ಪಾಪ್ಯುಲರ್ ಆದ್ರು. ಅದೇ ಥರ ಸಿನಿಮಾ ಮಾಡೋ ಯೋಚನೆ ಏನಾದ್ರೂ ಇರಬಹುದಾ? ಅಥವಾ ಮುಂದಿನ ಎಲೆಕ್ಷನ್ ಗಮನದಲ್ಲಿಟ್ಕೊಂಡು ಹೀಗೆ ಮಾಡ್ತಿದಾರಾ? ಉತ್ರ ನಿಖಿಲ್ಲೇ ಕೊಡ್ಬೇಕು.