ಹಾಸ್ಯ ನಟ ಮೋಹನ್ ಜುನೇನಾ ಅವರು ಬರವಣಿಗೆ ಮತ್ತು ಫ್ಯಾಮಿಲಿ ಬಗ್ಗೆ ಸಣ್ಣ ಮಾಹಿತಿ ಇಲ್ಲಿದೆ...
ಕನ್ನಡ ಚಿತ್ರರಂಗದಲ ಅದ್ಭುತ ಹಾಸ್ಯ ನಟ ಕಮ್ ಬರಹಗಾರ ಆಗಿ ಗುರುತಿಸಿಕೊಂಡಿದ್ದ ಮೋಹನ್ ಜುನೇಜಾ ಅವರು ಅನಾರೋಗ್ಯದಿಂದ ಕೊನೆಯುಸಿರೆಳೆದಿದ್ದಾರೆ. ಮೋಹನ್ ಅವರ ಬರವಣಿಗೆ ಜರ್ನಿ ಮತ್ತು ಫ್ಯಾಮಿಲಿ ಬಗ್ಗೆ ಸಣ್ಣ ಮಾಹಿತಿ ಇಲ್ಲಿದೆ.
'ಅಪ್ಪ ನಂಜಪ್ಪ ಮಗ ಗುಂಜಪ್ಪ (Appa Nanjappa Maga Gunjappa) ಚಿತ್ರಕ್ಕೆ ಕೋ-ಡೈರೆಕ್ಟರ್ ಆಗಿ ಕೆಲಸ ಮಾಡುತ್ತಿದ್ದೆ. ನಾನು ಸಿನಿಮಾ ಸಿನಿಮಾ ಅಂತ ಕೆಲಸ ಮಾಡುತ್ತಿದ್ದೆ ಎಂದು ತಂದೆ ಯೋಚನೆ ಮಾಡುತ್ತಿದ್ದರು. ಒಂದಿಷ್ಟು ದಿನಗಳ ನಂತರ ನಾನು ಮನೆಗೆ ಹೋದಾಗ ಮದುವೆ ಬಗ್ಗೆ ಮಾತುಕತೆ ಶುರು ಮಾಡಿದ್ದರು. ಸಿನಿಮಾ ಅಂತ ಬ್ಯುಸಿಯಾಗಿ ಇರ್ತೀಯಾ ನೀನು ಬೇಗ ಮದುವೆ ಮಾಡುತ್ತೀನಿ ಅಂದ್ರು ನಾನು ಸರಿ ಅಂತ ಹೇಳಿದೆ. ನೀವೇ ಹುಡುಗಿ ನೋಡಬೇಕು ಎಂದು ಹೇಳಿದೆ ನಾನು ನೇರವಾಗಿ ಎಂಗೇಜ್‌ಮೆಂಟ್‌ಗೆ ಹೀಗಿದೆ ಆಮೇಲೆ ಮದುವೆಗೆ. 1994ರಲ್ಲಿ ನನ್ನ ಮದುವೆ ಆಯ್ತು' ಎಂದು ರೇಖಾ ದಾಸ್ (Rekha Das) ಯೂಟ್ಯೂಬ್ ಚಾನೆಲ್‌ನಲ್ಲಿ ಮೋಹನ್ ಮಾತನಾಡಿದ್ದಾರೆ.
'ನನ್ನ ಪತ್ನಿ ಹೋಮ್ ಮೇಕರ್. ಮನೆಯಲ್ಲಿ ಸುಮ್ಮನೆ ಇರುವುದಿಲ್ಲ ರೇಶ್ಮೆ ಸೀರೆಗೆ ಕುಚ್ಚು ಕಟ್ಟುವುದು, ಲಾಕ್‌ಡೌನ್ ಸಮಯದಲ್ಲಿ ಪುಳಿಯೋಗರೆ ಗೊಜ್ಜು (Puliyogare Gojju) ಮಾಡುತ್ತಾರೆ. ಅವರ ಖರ್ಚು ನೋಡಿಕೊಳ್ಳುವುದಕ್ಕೆ ಅವರೇ ಕೆಲಸ ಮಾಡಿಕೊಳ್ಳುತ್ತಾರೆ. ನನಗೆ ಇಬ್ಬರು ಗಂಡು ಮಕ್ಕಳು. ದೊಡ್ಡ ಮಗನಿಗೆ ಮದುವೆ ಅಗಿದೆ ಈಗ ಪ್ರೈವೇಟ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದಾನೆ, ಮುಂಚೆ ಅಸಿಸ್ಟೆಂಟ್ ಡೈರೆಕ್ಟರ್ ಮತ್ತು ಎಡಿಟರ್ ಅಗಿ ಕೆಲಸ ಮಾಡುತ್ತಿದ್ದ ಕೊರೋನಾ (Covid19) ಸಮಯದಲ್ಲಿ ಚಿತ್ರರಂಗದ ಕೆಲಸಗಳಿಗೆ ಬ್ರೇಕ್ ಬಿದ್ದ ಕಾರಣ ಸುಮ್ಮನಾದ. ಎಲ್ಲಾ ಯಥಾಸ್ಥಿತಿಗೆ ಬಂದಾಗ ಮತ್ತೆ ಶುರು ಮಾಡುತ್ತಾರೆ. ಚಿಕ್ಕ ಮಗ ಫೋಟೋಗ್ರಾಫಿ ಮಾಡ್ತಾನೆ, ನಾಯಿ ಬ್ರೀಡಿಂಗ್ ಮಾಡ್ತಾನೆ. ಸೊಸೆ ಸೂಪರ್ ಆಗಿದ್ದಾಳೆ, ನನಗೆ ಹೆಣ್ಣು ಮಕ್ಕಳು ಇಲ್ಲ ಅದಿಕ್ಕೆ ಆಕೆನೇ ನನ್ನ ಮಗಳು. ದೊಡ್ಡ ಮಗನಿಗೆ ಗಾರ್ಡನಿಂಗ್ ತುಂಬಾ ಇಷ್ಟ ಆಗುತ್ತೆ. ಚಿಕ್ಕ ಮಗನಿಗೆ ಪ್ರಾಣಿ ಪಕ್ಷಿ ಸಾಕುವುದಕ್ಕೆ ಇಷ್ಟ.' ಎಂದು ಮೋಹನ್ ಹೇಳಿದ್ದಾರೆ.
MOHAN JUNEJA : ಗೋವಾದಲ್ಲಿ ಸೆಕ್ಯೂರಿಟಿ ಗಾರ್ಡ್ ಆಗಿ ಕೆಲಸ ಮಾಡಿದ್ದರಂತೆ ನಟ ಮೋಹನ್ ಜುನೇಜಾ!
'ನಾನು ಸ್ವಂತ ಮನೆ ಕಟ್ಟಿಸಲು 52 ವರ್ಷ ಬೇಕಿತ್ತು. ಸ್ವಂತ ಜಾಗ ಇದ್ದರೂ ಮನೆ ಕಟ್ಟಲು ತುಂಬಾ ಸಮಯ ಬೇಕಿತ್ತು. ತಂದೆ ತಾಯಿ ಅವರ ಆಶೀರ್ವಾದದಿಂದ ನಾನು ಈ ಮಟ್ಟಕ್ಕೆ ಇರುವುದು. ಅಭಿಮಾನಿಗಳು ನನ್ನನ್ನು ಮಾತನಾಡಿಸುವಾಗ ಅಥವಾ ಜನರು ನನ್ನ ಬಗ್ಗೆ ಮಾತನಾಡುವಾಗ ತಂದೆ ಹೆಮ್ಮೆ ಪಡುತ್ತಿದ್ದರು. ನನ್ನ ಬಳಿ ಹೇಳಿಕೊಳ್ಳುತ್ತಿರಲಿಲ್ಲ ಆದರೆ ಬೇರೆ ಅವರಿಗೆ ಹೇಳುತ್ತಿದ್ದರು. ನನ್ನ ಸಹೋದರಿ ಸ್ವಿಮ್ಮಿಂಗ್ ಚಾಂಪಿಯನ್ (Swimming Champion), ಈಗ ಕೋಚ್ ಆಗಿದ್ದಾಳೆ. ಒಬ್ಬ ತಮ್ಮ ಆಸ್ಟ್ರೇಲಿಯಾದಲ್ಲಿ ಇದ್ದಾರೆ ಮತ್ತೊಬ್ಬ ಬೆಂಗಳೂರಿನಲ್ಲಿ ಇದ್ದಾನೆ' ಎಂದು ಪರ್ಸನಲ್ ಲೈಫ್ ಬಗ್ಗೆ ಮೋಹನ್ ಮಾತನಾಡಿದ್ದಾರೆ.
'ಅವನು ಒಬ್ಬನೇ ಬರೋನು..ಮಾನ್ ಸ್ಟರ್' ಡೈಲಾಗ್ ಹೊಡೆದು KGFನಲ್ಲಿ ಮಿಂಚಿದ್ದ ನಟ ಮೋಹನ್ ಜುನೇಜ ಇನ್ನಿಲ್ಲ
'ಸಿನಿಮಾ ಅಥವಾ ಡೈಲಾಗ್ ಬರೆದಿರುವುದರ ಬಗ್ಗೆ ನಾನು ಲೆಕ್ಕ ಮಾಡಿಲ್ಲ. ನನ್ನ ಉದ್ದೇಶ ಏನೆಂದರೆ ಮಾಡಿರುವುದು ಆಗೋಯ್ತು ಮುಂದೇನು ಮಾಡಬೇಕು ಎಂದು ಯೋಚನೆ ಮಾಡಬೇಕು. ಅಭಿನಯ ತರಂಗದಲ್ಲಿ ನಾನು ಒಂದು ವರ್ಷ ಡಿಪ್ಲೊಮಾ ಕೋರ್ಸ್ ಮಾಡಿದ್ದೀನಿ ನನಗೆ ಅಲ್ಲಿ ದೊಡ್ಡ ಸಾಹಿತಿಗಳ ಸಂಪರ್ಕ ಆಯ್ತು. ಆಗ ನನಗೆ ಸಾಹಿತ್ಯದ ಬಗ್ಗೆ ಆಸಕ್ತಿ ಮೂಡಿತ್ತು. ಮೊದಲು ನಾಟಕ ಬರೆಯುವುದಕ್ಕೆ ಶುರು ಮಾಡಿದೆ. ಚಂದನ ಶುರುವಾದಾಗ ಧಾರಾವಾಹಿಗಳಿಗೆ ಸಂಭಾಷನೆ ಬರೆಯಲು ಶುರು ಮಾಡಿದೆ ಇದರ ಜೊತೆಗೆ ನಟಿಸಲು ಶುರು ಮಾಡಿದೆ. ನನ್ನ ಗುರುಗಳು ಜಿವಿ ಐಯ್ಯರ್ ಅವರು,ಜೆಕೆ ಭಾರ್ಗವಿ ಅವರು ಎಲ್ಲಾದಕ್ಕಿಂತ ಮುಖ್ಯವಾಗಿ ನನಗೆ ಮಾತು ಕಲಿಸಿದವರು, ಬರವಣಿಗೆ ಕಲಿಸಿದರವು ಎಎಸ್ ಮೂರ್ತಿ ಅವರು. ಸಿನಿಮಾಗಳಿಗೂ ಬರೆಯುವುದಕ್ಕೆ ಶುರು ಮಾಡಿದೆ' ಎಂದು ಜರ್ನಿ ಬಗ್ಗೆ ಮೋಹನ್ ಮಾತನಾಡಿದ್ದಾರೆ.
