ಮತ್ತೊಂದು ಕಡೆ ಚಿತ್ರರಂಗದಿಂದ ಹಲವು ನಿರ್ದೇಶಕರು, ತಂತ್ರಜ್ಞರು, ಕಲಾವಿದರು ಸುದೀಪ್‌ ಅವರ ಇಷ್ಟುವರ್ಷಗಳ ಪಯಣಕ್ಕೆ ಟ್ವೀಟ್‌ ಮಾಡಿ ಶುಭ ಹಾರೈಸಿದ್ದಾರೆ. ಇನ್ನೂ ಕಿಚ್ಚನ ಅಭಿಮಾನಿಗಳು ಅನೂಪ್‌ ಭಂಡಾರಿ ಅವರು ಬಿಡುಗಡೆ ಮಾಡಿರುವ ಕಾಮನ್‌ ಡಿಪಿಯನ್ನು ಬಳಸುವ ಮೂಲಕ ತಮ್ಮ ನೆಚ್ಚಿನ ನಟನೆ 25 ವರ್ಷಗಳ ಸಂಭ್ರಮಕ್ಕೆ ಸಾಕ್ಷಿ ಆಗುತ್ತಿದ್ದಾರೆ. ಆ ಮೂಲಕ ಸ್ಯಾಂಡಲ್‌ವುಡ್‌ನ ಅಭಿನಯ ಚಕ್ರವರ್ತಿ ಸುದೀಪ್‌ ಅವರಿಗೆ ಅಭಿನಂದನೆಗಳ ಮಹಾಪೂರವೇ ಹರಿದು ಬರುತ್ತಿವೆ.

25 ವರ್ಷದಲ್ಲಿ 49 ಚಿತ್ರಗಳು; ಕಿಚ್ಚ ಸುದೀಪ್‌ ಸಿನಿ ಜರ್ನಿ!

ಬಣ್ಣ ಹಚ್ಚಿದ ಆ ದಿನ

ಇಲ್ಲಿಗೆ ಸರಿಯಾಗಿ ಇಪ್ಪತ್ತೈದು ವರ್ಷಗಳ ಹಿಂದೆ ಬ್ರಹ್ಮ ಹೆಸರಿನ ಚಿತ್ರಕ್ಕೆ ಮುಹೂರ್ತ ನಡೆದಿತ್ತು. ಜ.31ರಂದು ಸೆಟ್ಟೇರಿದ ಈ ಬ್ರಹ್ಮ ಚಿತ್ರಕ್ಕೆ ಸುದೀಪ್‌ ಅವರು ಮೊದಲು ಬಾರಿಗೆ ಮುಖಕ್ಕೆ ಬಣ್ಣ ಹಚ್ಚಿಕೊಂಡು ಕ್ಯಾಮೆರಾ ಮುಂದೆ ನಿಂತವರು. ಅಲ್ಲಿಂದ ಇಲ್ಲಿವರೆಗೂ ಸಾಕಷ್ಟುಯಶಸ್ಸು, ಸೋಲು ಮತ್ತು ಸಂಭ್ರಮ ಎಲ್ಲವನ್ನೂ ನೋಡುತ್ತಲೇ ಬಂದಿದ್ದಾರೆ. ಕನ್ನಡದ ಹೊರತಾಗಿಯೂ ಹಿಂದಿ, ತೆಲುಗು, ತಮಿಳು, ಮಲಯಾಳಂ ಸೇರಿದಂತೆ ಭಾರತದ ಪ್ರಮುಖ ಭಾಷೆಗಳಲ್ಲಿ ಕನ್ನಡದ ಹೀರೋ ಯಾರೆಂದು ಗೊತ್ತು ಮಾಡುವ ಮಟ್ಟಕ್ಕೆ ಕಿಚ್ಚ ಬೆಳೆದು ಬಂದಿದ್ದಾರೆ. ‘ಬ್ರಹ್ಮ’ ಚಿತ್ರದಿಂದ ಬಿಡುಗಡೆಯ ಹಂತಕ್ಕೆ ಬಂದಿರುವ ‘ಕೋಟಿಗೊಬ್ಬ 3’ ಚಿತ್ರದ ವರೆಗೂ ಅವರು ನಟಿಸಿದ ಚಿತ್ರಗಳದ್ದು ಒಂದೊಂದು ಅಧ್ಯಾಯ.

ಸ್ಯಾಂಡಲ್‌ವುಡ್ ಚಕ್ರವರ್ತಿಗೆ 'ದಾದಾ ಸಾಹೇಬ್ ಫಾಲ್ಕೆ' ಪ್ರಶಸ್ತಿ ಗರಿ..!

ಮೊದಲ ವರ್ಷವೇ 3 ಚಿತ್ರ

ಸುದೀಪ್‌ ಚಿತ್ರರಂಗಕ್ಕೆ ಕಾಲಿಟ್ಟಮೊದಲ ವರ್ಷದಲ್ಲೇ ನಟನೆಯಲ್ಲಿ ಮೂರು ಚಿತ್ರಗಳು ಸೆಟ್ಟೇರಿದವು. ‘ಬ್ರಹ್ಮ’, ‘ಓ ಕುಸುಮ ಬಾಲೆ’ ಹಾಗೂ ‘ತಾಯವ್ವ’. ಈ ಮೂರರ ಪೈಕಿ ಮೊದಲೆರಡು ಚಿತ್ರಗಳು ಬಿಡುಗಡೆ ಆಗಿಲ್ಲ. ಆ ನಂತರ ಬಂದ ‘ಸ್ಪರ್ಶ’ ಹಾಗೂ ‘ಹುಚ್ಚ’ ಚಿತ್ರಗಳು ಸುದೀಪ್‌ ಅವರಿಗೆ ಯಶಸ್ಸಿನ ಜತೆಗೆ ಸ್ಟಾರ್‌ ಪಟ್ಟವನ್ನು ತಂದುಕೊಟ್ಟವು. ಈ ಇಪ್ಪತ್ತೈದು ವರ್ಷಗಳಲ್ಲಿ ಕನ್ನಡ, ತೆಲುಗು, ತಮಿಳು, ಹಿಂದಿ ಸೇರಿದಂತೆ ಎಲ್ಲ ಭಾಷೆಗಳಲ್ಲೂ 70ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದಾರೆ. ಕೆಲವು ಚಿತ್ರಗಳಿಗೆ ತಾವೇ ನಿರ್ದೇಶಕರಾಗಿದ್ದಾರೆ. ನಟನೆ, ನಿರ್ದೇಶನ, ನಿರ್ಮಾಣ ಹಾದೂ ಕಿರುತೆರೆ, ಕ್ರಿಕೆಟ್‌, ಸ್ನೇಹ... ಹೀಗೆ ಎಲ್ಲದರಲ್ಲೂ ಸುದೀಪ್‌ ಅವರು ತಮಗೆ ತಾವೇ ಸಾಟಿ ಎನ್ನುವಂತೆ ಛಾಪು ಮೂಡಿಸುತ್ತ ಬಂದಿದ್ದಾರೆ.

ಋುಣಿ ಎಂದ ಕಿಚ್ಚ

ತಮ್ಮ ಸಿನಿಮಾ ಪಯಣಕ್ಕೆ ಕಾರಣಕರ್ತರಾದ ಚಿತ್ರರಂಗ, ಸ್ನೇಹಿತರು, ಅಭಿಮಾನಿಗಳು, ಕುಟುಂಬದ ಸದಸ್ಯರು ಹೀಗೆ ಪ್ರತಿಯೊಬ್ಬರಿಗೂ ನಟ ಸುದೀಪ್‌ ಧನ್ಯವಾದ ತಿಳಿಸಿದ್ದಾರೆ. ತಮ್ಮ ಈ ಬೆಳವಣಿಗೆಗೆ ಕಾರಣಕರ್ತರಾದ ಪ್ರತಿಯೊಬ್ಬರಿಗೂ ತಾವು ಋುಣಿ ಎನ್ನುತ್ತಿದ್ದಾರೆ ಕಿಚ್ಚ ಸುದೀಪ್‌. ಹಾಗೆ ಧನ್ಯವಾದ ಸಲ್ಲಿಸಲು ಅವರು ಬಿಡುಗಡೆ ಮಾಡಿದ ವಿಡಿಯೋ ಅಭಿಮಾನಿಗಳಿಗೆ ಸಾಕಷ್ಟುಕುತೂಹಲ ಮೂಡಿಸಿದೆ.