ಬೆಂಗಳೂರು (ನ. 12): ಅಂತರಾಷ್ಟ್ರೀಯ ಮಟ್ಟದಲ್ಲಿ ರಾಕಿಂಗ್ ಸ್ಟಾರ್ ಯಶ್ ಮತ್ತೊಮ್ಮೆ ಗಮನ ಸೆಳೆದಿದ್ದಾರೆ. ಯಶ್ ಮುಡಿಗೆ ಮತ್ತೊಂದು ಗರಿ ಸಿಕ್ಕಿದೆ. 

'ನನಗೆ ಹೆಣ್ಣು ಬೇಕಿತ್ತು, ರಾಧಿಕಾಗೆ ಗಂಡು ಬೇಕಿತ್ತು, ಇಬ್ಬರೂ ಹ್ಯಾಪಿ'

ಜಿಕ್ಯೂ ಇಂಡಿಯಾ ನೀಡುವ ಅತ್ಯಂತ ಪ್ರಭಾವಶಾಲಿ ಭಾರತೀಯ ಪ್ರಶಸ್ತಿಯ ಪಟ್ಟಿಯಲ್ಲಿ ಯಶ್ ಹೆಸರು ಸೇರಿಕೊಂಡಿದೆ.  50 ಪ್ರಭಾವಶಾಲಿ ಭಾರತೀಯರಿಗೆ ಕೊಡುವ  ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿದ್ದಾರೆ ಯಶ್.  ವಿವಿಧ ಕ್ಷೇತ್ರದ ಪ್ರತಿಭಾವಂತರಿಗೆ ಈ ಪ್ರಶಸ್ತಿ ನೀಡುತ್ತಾ ಬಂದಿದೆ ಜೆಕ್ಯೂ ಇಂಡಿಯಾ.  ಈ ಬಾರಿ ಯಶ್  ಈ ಪ್ರಶಸ್ತಿಯನ್ನು ಸ್ವೀಕರಿಸಿದ್ದಾರೆ.  

 

ಜಿಕ್ಯೂ ಪ್ರಶಸ್ತಿ ಬಂದಿದ್ದಕ್ಕೆ ತುಂಬಾ ಖುಷಿಯಾಗುತ್ತಿದೆ. ಬೇರೆ ಬೇರೆ ಕ್ಷೇತ್ರಗಳಿಂದ ಬಂದ 49 ಸಾಧಕರ ಜೊತೆ ವೇದಿಕೆಯಲ್ಲಿ ಈ ಪ್ರಶಸ್ತಿ ತೆಗದುಕೊಳ್ಳುತ್ತಿರುವುದಕ್ಕೆ ಹೆಮ್ಮೆ ಎನಿಸುತ್ತದೆ. ನನಗೆ ಬೆಂಬಲ ನೀಡುತ್ತಿರುವ ಎಲ್ಲಾ ಅಭಿಮಾನಿಗಳಿಗೂ, ಹಿತೈಶಿಗಳಿಗೂ, ಕುಟುಂಬದವರಿಗೂ ಧನ್ಯವಾದಗಳು ಎಂದಿದ್ದಾರೆ. 

ಯಶ್ ಸದ್ಯ ಕೆಜಿಎಫ್ -2 ಸಿನಿಮಾ ಶೂಟಿಂಗ್ ನಲ್ಲಿ ಬ್ಯುಸಿಯಾಗಿದ್ದಾರೆ. ಕೆಲದಿನಗಳ ಹಿಂದೆ ಮುದ್ದು ಮಗ ಮನೆಗೆ ಬಂದಿದ್ದಾನೆ.  ಹಾಗಾಗಿ ಶೂಟಿಂಗ್‌ನಿಂದ ಕೊಂಚ ಬಿಡುವು ತೆಗೆದುಕೊಂಡಿದ್ದಾರೆ.  

ನವೆಂಬರ್ 12ರ ಟಾಪ್ 10 ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ