Asianet Suvarna News Asianet Suvarna News

ಸಂಭ್ರಮಿಸುವ ದಿನಗಳು ಮುಂದೆ ಬರಲಿವೆ: ನಟ ಗಣೇಶ್

ನಟ ಗಣೇಶ್ ಹುಟ್ಟುಹಬ್ಬ ಇಂದು.(ಜುಲೈ 2) ಆದರೆ ಅದ್ದೂರಿ ಹುಟ್ಟುಹಬ್ಬ ಆಚರಣೆ ಮಾಡುತ್ತಿಲ್ಲ. ಈ ಸಂದರ್ಭದಲ್ಲಿ ಒಟ್ಟಿಗೆ ಮೂರು ಚಿತ್ರಗಳ ಕೆಲಸಗಳಲ್ಲಿ ತೊಡಗಿಸಿಕೊಂಡಿರುವ ಗಣೇಶ್ ಜತೆ ಮಾತು-ಕತೆ.

Kannada actor Ganesh exclusive interview about birthday celebration vcs
Author
Bangalore, First Published Jul 2, 2021, 4:19 PM IST

ಆರ್. ಕೇಶವಮೂರ್ತಿ

ಈ ಬಾರಿಯೂ ಹುಟ್ಟುಹಬ್ಬದ ಸಂಭ್ರಮದಿಂದ ದೂರ ಆಗಿದ್ದೀರಲ್ಲ?

ಜಗತ್ತು ಈಗ ಎದುರಿಸುತ್ತಿರುವ ಸಂಕಷ್ಟ ಬೇರೆ. ಇಂಥಾ ಸಮಯದಲ್ಲಿ ಇನ್ನೊಬ್ಬರ ಕಷ್ಟಕ್ಕೆ ಹೆಗಲಾಗುವ ಕೆಲಸ ಮಾಡಬೇಕು. ಮುಂದಿನ ದಿನಗಳಲ್ಲಿ ಸಂಭ್ರಮ ಪಡುವ ಕ್ಷಣಗಳು ಬಂದೇ ಬರುತ್ತವೆ. ಅಭಿಮಾನಿಗಳಿಗೂ ನಾನು ಮಾಡಿರುವ ಮನವಿ ಸುಮ್ಮನೆ ತೋರ್ಪಡಿಕೆಗಲ್ಲ. ಕಷ್ಟ- ನಷ್ಟಗಳನ್ನು ನಾನೇ ಕಣ್ಣಾರೆ ಕಂಡಿದ್ದೇನೆ.

ಹುಟ್ಟುಹಬ್ಬದ ವಿಶೇಷ ಏನು?

ಒಟ್ಟಿಗೆ ಮೂರು ಚಿತ್ರಗಳ ಕೆಲಸಗಳು ಶುರುವಾಗಿದೆ. ತ್ರಿಬಲ್ ರೈಡಿಂಗ್ ಚಿತ್ರಕ್ಕೆ ಡಬ್ಬಿಂಗ್ ಶುರುವಾಗಿದೆ. ಸಖತ್ ಹಾಗೂ ಗಾಳಿಪಟ 2 ಚಿತ್ರಕ್ಕೆ ಶೂಟಿಂಗ್ ನಡೆಯುತ್ತಿದೆ. ಕೆಲಸವೇ ಸಂಭ್ರಮ ಎಂದುಕೊಳ್ಳುವ ನನಗೆ ಮೂರು ಚಿತ್ರಗಳಲ್ಲಿ ಕೆಲಸ ಮಾಡುವ ಅವಕಾಶ ಸಿಕ್ಕಿದೆ. ಇದು ನಿಜವಾದ ಹುಟ್ಟುಹಬ್ಬದ ಗಿಫ್‌ಟ್ ಎಂದೇ ಭಾವಿಸುತ್ತೇನೆ.

Kannada actor Ganesh exclusive interview about birthday celebration vcs

ಯಾವ ಸಿನಿಮಾ ಮೊದಲು ಬರಲಿದೆ?

ತ್ರಿಬಲ್ ರೈಡಿಂಗ್ ಮೊದಲು ತೆರೆಗೆ ಬರಲಿದೆ. ಆ ನಂತರ ಗಾಳಿಪಟ 2 ಚಿತ್ರ. ಅದರ ನಂತರ ಸಖತ್... ಹೀಗೆ ಸರದಿಯಂತೆ ಬರಲಿದೆ. ಶೇ.100ರಷ್ಟು ಸೀಟು ಭರ್ತಿಗೆ ಅವಕಾಶ ಕೊಟ್ಟರೆ ಈ ವರ್ಷವೇ ಎರಡು ಚಿತ್ರಗಳು ತೆರೆ ಮೇಲೆ ಬರಲಿವೆ.

ಪತ್ನಿ ಪುಸ್ತಕ ಓದುತ್ತಿದ್ದರೆ ನಟ ಗಣೇಶ್ ಮಾಡೋ ತುಂಟಾಟ ನೋಡಿ

ನಿಮಗೆ ತುಂಬಾ ನಿರೀಕ್ಷೆ ಹಾಗೂ ಕುತೂಹಲ ಮೂಡಿಸಿರುವ ಸಿನಿಮಾ ಯಾವುದು?

ನಟನಾಗಿ ನನಗೆ ಪ್ರತಿಯೊಂದು ಚಿತ್ರವೂ ನಿರೀಕ್ಷೆಯ ಹೆಜ್ಜೆಗಳೇ ಆಗಿರುತ್ತವೆ. ನಾನು ಸೋಲು ಗೆಲುವಿನ ಕಡೆ ಗಮನ ಕೊಡಲ್ಲ. ಪ್ರತಿ ವರ್ಷ ಮೂರು ಸಿನಿಮಾ ಮಾಡಬೇಕು. ಆ ಮೂಲಕ ನಿತ್ಯ ಕೆಲಸ ಮಾಡಬೇಕು ಎಂಬುದು ನನ್ನ ಆಸೆ. ಅದು ಇಲ್ಲಿಯವರೆಗೂ ಈಡೇರುತ್ತಲೇ ಬಂದಿದೆ. ಮುಂದೆ ಕೂಡ ಇರುತ್ತದೆ. ಇದೆಲ್ಲ ಪ್ರೇಕ್ಷಕರು, ಅಭಿಮಾನಿಗಳು ಹಾಗೂ ಚಿತೊ್ರೀದ್ಯಮ ನೀಡುತ್ತಿರುವ ಪ್ರೀತಿ. ಇದರ ನಡುವೆ ಗಾಳಿಪಟ 2 ಚಿತ್ರದ ಬಗ್ಗೆ ಪ್ರೇಕ್ಷಕರಿಗೆ ಹೆಚ್ಚಿನ ನಿರೀಕ್ಷೆ ಇರಬಹುದು. ಯಾಕೆಂದರೆ ನನ್ನ ಮತ್ತು ಯೋಗರಾಜ್ ಭಟ್ ಅವರ ಕಾಂಬಿನೇಶ್, ನಿರ್ಮಾಪಕ ರಮೇಶ್ ರೆಡ್ಡಿ ದೊಡ್ಡ ಮಟ್ಟದಲ್ಲಿ ನಿರ್ಮಾಣ ಮಾಡುತ್ತಿರುವುದು. ಸಹಜವಾಗಿ ಕ್ರೇಜ್ ಇರುತ್ತದೆ. ಅದು ಸುಳ್ಳಾಗಲ್ಲ.

ಈ ಚಿತ್ರಗಳಲ್ಲಿ ಪಾತ್ರಗಳ ವೈವಿಧ್ಯತೆ ಹೇಗಿದೆ?

ಸಖತ್ ಚಿತ್ರದ ಮೂಲಕ ಮೊದಲ ಬಾರಿಗೆ ಕುರುಡನ ಪಾತ್ರ ಮಾಡುತ್ತಿದ್ದೇನೆ. ತ್ರಿಬಲ್ ರೈಡಿಂಗ್ ಫನ್ ಸಿನಿಮಾ. ಜತೆಗೆ ಕ್ರೀಡೆಯ ನೆರಳು. ಗಾಳಿಪಟ-2 ಬಗ್ಗೆ ಹೆಚ್ಚು ಹೇಳುವ ಅಗತ್ಯವಿಲ್ಲ, ಮತ್ತೊಮ್ಮೆ ಗೋಲ್ಡನ್ ದಿನಗಳನ್ನು ನೆನಪಿಸುವ ಪಾತ್ರ ಅದು.

ಗಣೇಶ್‌ರನ್ನು ತಬ್ಬಿ ನೆಗಡಿ, ಕೆಮ್ಮು ಹಬ್ಬಿಸಿದ್ರು ಮೇಘಾ ಶೆಟ್ಟಿ..!

ಲಾಕ್‌ಡೌನ್‌ನಲ್ಲಿ ಹೇಗೆ ಖಾಲಿ ಕೂತಿದ್ರಿ?

ಕಲಾವಿದನಿಗೆ ಶೂಟಿಂಗ್ ಸೆಟ್ ಕೊಡುವ ಖುಷಿ ಮತ್ತೊಂದು ಕೊಡಲ್ಲ. ಆದರೆ, ಈ ಬಿಡುವಿನ ಖಾಲಿ ಸಮಯವನ್ನು ಬೋರ್ ಆಗದಂತೆ ನೋಡಿಕೊಂಡಿದ್ದು ಮಕ್ಕಳು. ನಾನು ಮನೆಯಲ್ಲಿ ಇದ್ದಷ್ಟು ದಿನ ಮಕ್ಕಳೇ ಕೊಡುತ್ತಿದ್ದ ಮನರಂಜನೆಯೇ ನನಗೆ ಟೈಮ್ ಪಾಸ್. ಅವರೇ ನನ್ನ ಪಾಲಿಗೆ ಸ್ಟಾರ್‌ಗಳಾಗಿದ್ದರು. ಜತೆಗೆ ವೆಬ್ ಸರಣಿಗಳನ್ನು ನೋಡುತ್ತ ಸಮಯ ವ್ಯಯಿಸಿದೆ.

Kannada actor Ganesh exclusive interview about birthday celebration vcs

ಓಟಿಟಿ ಬಗ್ಗೆ ನಿಮ್ಮ ಅಭಿಪ್ರಾಯ ಏನು?

ತಂತ್ರಜ್ಞಾನವನ್ನು ತಡೆಯಲು ಆಗಲ್ಲ. ಅದನ್ನು ನಮಗೆ ಅನುಕೂಲ ಆಗುವಂತೆ ಬಳಸಿಕೊಳ್ಳಬೇಕು ಅಷ್ಟೆ. ಆದರೆ, ಸಿನಿಮಾ ಬಿಡುಗಡೆಯ ಸಂಭ್ರಮ ಚಿತ್ರಮಂದಿರಗಳು ಕೊಡುವಷ್ಟು ಮತ್ತೊಂದು ಕೊಡಲ್ಲ. ಮನೆಯಲ್ಲಿ ಕೂತು ನೋಡುವುದು ಒಂದು ಅನುಭವ, ಚಿತ್ರಮಂದಿರಕ್ಕೆ ಬಂದು ನೋಡುವುದು ಮತ್ತೊಂದು ಖುಷಿ.

Follow Us:
Download App:
  • android
  • ios