Asianet Suvarna News Asianet Suvarna News

ಹೈದ್ರಾಬಾದ್‌ನಿಂದ ಮರಳಿದ ಪುನೀತ್ ಅಪ್ಪಾಜಿ ಡಾ ರಾಜ್‌ ಕಾಲಿಗೆ ಬಿದ್ದು ನಮಸ್ಕರಿಸಿದ್ದು ಯಾಕಾಗಿ.?

ಪುನೀತ್ ಅವರಿಗೆ ಬೇಸರವಾಯ್ತೋ ಅವಮಾನವಾಯ್ತೋ ಏನೋ, ಅಲ್ಲೇ ಪಕ್ಕದಲ್ಲಿದ್ದ ಚೇರ್‌ನಲ್ಲಿ ಕುಳಿತುಬಿಟ್ಟರಂತೆ. ಸೆಕ್ಯೂರಿಟಿ ತಮ್ಮ ಪಾಡಿಗೆ ತಾವು ಡ್ಯೂಟಿ ಕಂಟಿನ್ಯೂ ಮಾಡುತ್ತಿದ್ದರು. ಸರಿ, ಪುನೀತ್ ರಾಜ್‌ಕುಮಾರ್ ಅವರು ಅದೇ ಚೇರ್‌ ಮೇಲೆ ಒಂದೆರಡು ಗಂಟೆ ಕಾದಿದ್ದಾರೆ. ..

Kannada actor Dr Rajkumar told Puneeth Rajkumar to meet Akkineni Nageswara Rao srb
Author
First Published Jul 28, 2024, 5:46 PM IST | Last Updated Jul 28, 2024, 5:46 PM IST

ಹಿರಿಯ ಪತ್ರಕರ್ತರಾದ ಗಣೇಶ ಕಾಸರಗೋಡು (Ganesh Kasaragodu) ಅವರು ಡಾ ರಾಜ್‌ಕುಮಾರ್ (Dr Rajkumar) ಕುಟುಂಬ ಹಾಗು ಪುನೀತ್ ರಾಜ್‌ಕುಮಾರ್ (Puneeth Rajkumar) ಅವರಿಗೆ ಸಂಬಂಧಪಟ್ಟ ಘಟನೆಯೊಂದನ್ನು ಹೇಳಿದ್ದಾರೆ. ಡಾ ರಾಜ್‌ಕುಮಾರ್ ಅವರು ತಮ್ಮ ಮಕ್ಕಳಿಗೆ 'ನೀವು ಹೈದ್ರಾಬಾದ್‌ಗೆ ಹೋದಾಗ ಅಲ್ಲಿನ ಹಿರಿಯ ನಟರನ್ನು ಭೇಟಿಯಾಗಿ ಅವರ ಕಾಲು ಮುಟ್ಟಿ ನಮಸ್ಕಾರ ಮಾಡಿ ಬನ್ನಿ' ಎಂದಿದ್ದರಂತೆ. ಅದರಂತೆ ಒಮ್ಮೆ ನಟ ಪುನೀತ್ ರಾಜ್‌ಕುಮಾರ್ ಹೈದರಾಬಾದ್‌ಗೆ ಹೋಗಿದ್ದಾಗ ಒಂದು ಘಟನೆ ನಡೆಯಿತಂತೆ. 

ಒಮ್ಮೆ, ಅಪ್ಪು ಖ್ಯಾತಿಯ ಪುನೀತ್ ರಾಜ್‌ಕುಮಾರ್ ಅವರು ಹೈದ್ರಾಬಾದ್‌ಗೆ ಹೊರಟು ನಿಂತಿದ್ರಂತೆ. ಆಗ ಡಾ ರಾಜ್‌ಕುಮಾರ್ ಅವರು 'ನೀನು ಅಲ್ಲಿ ಹೋದಾಗ, ಹಿರಿಯರಾದ ಅಕ್ಕಿನೇನಿ ನಾಗೇಶ್ವರರಾವ್ ಅವರನ್ನು ಭೇಟಿಯಾಗಿ ಅವರ ಆಶೀರ್ವಾದ ಪಡೆದುಕೊಂಡು ಬಾ' ಎಂದಿದ್ದರಂತೆ. ಅದರಂತೆ, ಪುನೀತ್ ರಾಜ್‌ಕುಮಾರ್ ಅವರು ಹೈದ್ರಾಬಾದ್‌ಗೆ ಹೋಗಿ ಅಕ್ಕಿನೇನಿ ನಾಗೇಶ್ವರ ರಾವ್ ಅವರನ್ನು ಭೇಟಿಯಾಗಿ, ಅವರ ಕಾಲಿಗೆರಗಿ ಆಶೀರ್ವಾದ ಪಡೆದಿದ್ದಾರೆ. 

ಯಶ್ ಮುಂದಿನ ಸಿನಿಮಾಗೆ ದೊಡ್ಡ ಸಮಸ್ಯೆ..! ಶೂಟಿಂಗ್ ಮತ್ತೆ ಶುರುವಾಗೋದು ಯಾವಾಗ ಗೊತ್ತಾ?

ಬಳಿಕ, ಅಕ್ಕಿನೇನಿ ಕುಟುಂಬದ ಅನ್ನಪೂರ್ಣ ಸ್ಟುಡಿಯೋಗೆ ಹೋಗಿದ್ದಾರೆ. ಅಲ್ಲಿ ಅಕ್ಕಿನೇನಿ ನಾಗೇಶ್ವರರಾವ್ ಪುತ್ರ ನಾಗಾರ್ಜುನ ಅವರ ಸಿನಿಮಾ ಶೂಟಿಂಗ್ ನಡೆಯುತ್ತಿತ್ತು ಎನ್ನಲಾಗಿದೆ. ಅವರನ್ನು ಭೇಟಿಯಾಗುವುದು ನಟ ಪುಣಿತ್ ರಾಜ್‌ಕುಮಾರ್ ಉದ್ದೇಶವಾಗಿತ್ತು. ಅನ್ನಪೂರ್ಣ ಸ್ಟುಡಿಯೋದಲ್ಲಿ ಅಕ್ಕಿನೇನಿ ನಾಗಾರ್ಜುನ ಅವರನ್ನು ಭೇಟಿಯಾಗಬೇಕು ಎಂದು ಹೋದರೆ ಅಲ್ಲಿ ಸೆಕ್ಯರಿಟಿ ಒಳಕ್ಕೆ ಬಿಡಲಿಲ್ಲ. 

ಪುನೀತ್ ಅವರಿಗೆ ಬೇಸರವಾಯ್ತೋ ಅವಮಾನವಾಯ್ತೋ ಏನೋ, ಅಲ್ಲೇ ಪಕ್ಕದಲ್ಲಿದ್ದ ಚೇರ್‌ನಲ್ಲಿ ಕುಳಿತುಬಿಟ್ಟರಂತೆ. ಸೆಕ್ಯೂರಿಟಿ ತಮ್ಮ ಪಾಡಿಗೆ ತಾವು ಡ್ಯೂಟಿ ಕಂಟಿನ್ಯೂ ಮಾಡುತ್ತಿದ್ದರು. ಸರಿ, ಪುನೀತ್ ರಾಜ್‌ಕುಮಾರ್ ಅವರು ಅದೇ ಚೇರ್‌ ಮೇಲೆ ಒಂದೆರಡು ಗಂಟೆ ಕಾದಿದ್ದಾರೆ. ಯಾರೋ ನಾಗಾರ್ಜುನ ಅವರಿಗೆ ಕನ್ನಡ ನಟ ಡಾ ರಾಜ್‌ಕುಮಾರ್ ಮಗ ಅಲ್ಲಿ ಸೆಕ್ಯೂರಿಟಿ ಬಳಿ ಕಾಯುತ್ತಿದ್ದಾರೆ ಎಂಬಸುದ್ದಿ ಮುಟ್ಟಿಸಿದ್ದಾರೆ. 

ನಾಗಾರ್ಜುನ್ ಅವರು ಫುಲ್  ಗಾಬರಿಯಾಗಿ ಓಡೋಡಿ ಬಂದು ಸೆಕ್ಯೂರಿಟಿಗೆ 'ಇವ್ರು ಯಾರು ಗೊತ್ತಾ? ಕರ್ನಾಟಕದ ಕಣ್ಮಣಿ ಡಾ ರಾಜ್‌ಕುಮಾರ್ ಮಗ. ಅವ್ರನ್ನ ಯಾಕೆ ಒಳಕ್ಕೆ ಬಿಡ್ಲಿಲ್ಲ' ಎಂದು ಕೇಳಿ ಅವರದೇ ಆದ ರೀತಿಯಲ್ಲಿ ಬೈದು ಒಳಕ್ಕೆ ಕರೆದುಕೊಂಡು ಹೋಗಿ ಮಾತನ್ನಾಡಿಸಿ  ಆದರಾತಿಥ್ಯ ನೀಡಿ ಕಳುಹಿಸಿದ್ದಾರೆ. 

ಸುದೀಪ್-ದರ್ಶನ್‌ ಮಧ್ಯೆ ಇಲ್ಲದ ಸಂಬಂಧ: ಅದೊಂಥರಾ ಖಾಲಿ ಪಾತ್ರೆ ಇದ್ದಂಗೆ ಅಂತಾರೆ ಆಪ್ತರು!

ಬಳಿಕ, ಪುನೀತ್ ರಾಜ್‌ಕುಮಾರ್ ಅವರು ಬೆಂಗಳೂರಿಗೆ ವಾಪಸ್ ಬಂದವರೇ, ತಮ್ಮ ತಂದೆ ಡಾ ರಾಜ್‌ಕುಮಾರ್ ಅವರಿಗೆ ನಡೆದ ಸಂಗತಿಯನ್ನೆಲ್ಲ ಹೇಳಿದ್ದಾರೆ. ಜೊತೆಗೆ, ತಮ್ಮ ತಂದೆಯನ್ನು 'ನಾವು ಅಂದ್ರೆ ಅವ್ರಿಗೆ ಗೌರವ ಅಂತೀರಾ, ಪ್ರೀತಿ ಅಂತೀರಾ, ಆದ್ರೆ ಅವ್ರು ಯಾಕೆ ನನ್ನ ಒಳ್ಗೆ ಬಿಡದಿರೋ ಆ ಸೆಕ್ಯುರಿಟಿನ ಬೈಲಿಲ್ಲ, ಕೆಲಸದಿಂದ ಕಿತ್ತಾಕಿಲ್ಲ ಯಾಕೆ ಅಪ್ಪಾಜಿ?'ಎಂದು ಕೇಳಿದರಂತೆ. ಅದಕ್ಕೆ ಡಾ ರಾಜ್‌ ಅವರು ' ಅದೇ ಕಣಪ್ಪಾ ಸಂಸ್ಕಾರ ಅಂದ್ರೆ' ಅಂದರಂತೆ. 

ಡಾ ರಾಜ್‌ಕುಮಾರ್ ಅವರು ಪುನೀತ್‌ಗೆ 'ಮಗಾ, ಮನೆ ಹಿರಿಯರಿಂದ ಬಂದ ಸಂಸ್ಕಾರ ಅಂದ್ರೆ ಅದೇ ಕಣೋ. ಅದು ನಾಗಾರ್ಜುನ ಅವರಿಗೂ ಬಂದಿದೆ. ಅದಕ್ಕೇ ಅವ್ರು ಅವ್ನನನ್ನು ಬೈದು ಕೆಲಸದಿಂದ ಕಿತ್ತಾಕಿಲ್ಲ. ಯಾಕೆ ಅಂದ್ರೆ, ಆ ಸೆಕ್ಯೂರಿಟಿ ಅವ್ನ ಕರ್ತವ್ಯ ಅವ್ನು ಮಾಡಿದಾನೆ. ಅವ್ನ ಕೆಲಸ ತನ್ನ ಯಜಮಾನ ಕೆಲಸದಲ್ಲಿ ಬ್ಯುಸಿ ಇರುವಾಗ ಯಾರೇ ಭೇಟಿಯಾಗಲು ಬಂದರೂ ಒಳಕ್ಕೆ ಬಿಡದೇ ಇರುವುದು. 

ಆತ ಅದನ್ನೇ ಮಾಡಿದ್ದಾನೆ. ಅಷ್ಟಕ್ಕೂ ಆತನಿಗೆ ಡಾ ರಾಜ್‌ಕುಮಾರ್ ಮಗ ಎಂಬುವುದೂ ಗೊತ್ತಿಲ್ಲ. ಸೆಕ್ಯೂರಿಟಿ ತನ್ನ ಕೆಲಸವನ್ನು ತುಂಬಾ ಪ್ರಾಮಾಣಿಕವಾಗಿ ಮಾಡಿದ್ದಾನೆ. ಆತ ಯಜಮಾನ ಕೆಲಸದಲ್ಲಿ ಇರುವಾಗ ತೊಂದರೆ ಆಗುವುದನ್ನು ಬಯಸುವುದಿಲ್ಲ. ಹೀಗಾಗಿ ಆತನ ಪ್ರಾಮಾಣಿಕತೆಗೆ ಮೆಚ್ಚಿಯೇ ಆತನನ್ನು ಕೆಲಸದಲ್ಲಿ ಮುಂದುವರೆಸಿದ್ದಾರೆ. 

ಆರೋಪಿ ಸ್ಥಾನದಲ್ಲಿರುವ ವ್ಯಕ್ತಿಯನ್ನು ಅಪರಾಧಿ ಸ್ಥಾನಕ್ಕೆ ತರಲು ಹೋಗಬೇಡಿ: ನಟ ಗಣೇಶ್ ರಾವ್

ಅದನ್ನು ನಾಗಾರ್ಜುನ ಅವರು ಅರ್ಥ ಮಾಡಿಕೊಂಡಿದ್ದಾರೆ. ಅದೇ ಸಂಸ್ಕಾರ ಮಗನೇ..' ಎಂದರಂತೆ ಡಾ ರಾಜ್‌ಕುಮಾರ್. 'ಹಾದಲ್ವಾ ಅಪ್ಪಾಜೀ..' ಎನ್ನತ್ತಾ ಪುನೀತ್ ತಕ್ಷಣ ತಮ್ಮ ಅಪ್ಪನ ಕಾಲಿಗೆ ಬಿದ್ದು ನಮಸ್ಕಾರ ಮಾಡಿದ್ದರಂತೆ. ಇದೇ ಡಾ ರಾಜ್‌ಕುಮಾರ್ ಫ್ಯಾಮಿಲಿಯ ಸಂಸ್ಕಾರ!. ಇದನ್ನು ಮನಮುಟ್ಟುವಂತೆ ವಿವರಿಸಿದ್ದಾರೆ ಹಿರಿಯ ಪತ್ರಕರ್ತರಾದ ಗಣೇಶ್ ಕಾಸರಗೋಡು.

Latest Videos
Follow Us:
Download App:
  • android
  • ios